Headlines

ತೀರ್ಥಹಳ್ಳಿಯಲ್ಲಿ ವ್ಯಕ್ತಿಗೆ ತಗುಲಿದ ಬಂದೂಕಿನ ಗುಂಡು – ಸ್ಥಿತಿ ಗಂಭೀರ|firing

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಮತ್ತೆ ಕೋವಿಯ ಸದ್ದು ಕೇಳಿ ಬಂದಿದೆ. ಈ ಹಿಂದೆ ಶಿಕಾರಿಗೆ ಹೋಗಿದ್ದ ಸಂದರ್ಭದಲ್ಲಿ ಕಾಂತರಾಜ್ ಎಂಬಾತ ಸಾವನ್ನಪ್ಪಿದ್ದರು. ಆನಂತರ ಪ್ರಕರಣ ಬೇರೆ ಬೇರೆ ತಿರುವು  ಪಡೆದುಕೊಂಡಿತ್ತು. ಇದೀಗ ಅಂದಿನ ಘಟನೆಯಲ್ಲಿ ಕೇಳಿಬಂದಿದ್ದ ಪರಿಚಿತ ಹೆಸರುಗಳೇ ನಿನ್ನೆ ರಾತ್ರಿ ತೀರ್ಥಹಳ್ಳಿಯಲ್ಲಿ ಕೇಳಿ ಬಂದ ಗುಂಡಿನ ಸದ್ದಿನ ಜೊತೆಗೂ ಕೇಳಿಬರುತ್ತಿದೆ. 

ತೀರ್ಥಹಳ್ಳಿ ತಾಲ್ಲೂಕಿನ ಆರಗದ ಸಮೀಪ ಗಿರಿಧರ್​ ಎಂಬವರ ತೋಟವಿದೆ. ಆ ತೋಟದ ಸಮೀಪ ನಿನ್ನೆ ಕೆಲವರು ಶಿಕಾರಿಗೆ ಹೋಗಿದ್ದಾರೆ. ತೋಟದಲ್ಲಿ ಏನೋ ಸದ್ದಾಗುತ್ತಿರುವದನ್ನ ಗಮನಿಸಿದ ಗಿರಿಧರ್ ತೋಟದಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಫೈರ್ ಆಗಿದೆ. ಕತ್ತಲಲ್ಲಿ ಹಾರಿದ ಕೋವಿಯ ಗುಂಡು, ಗಿರಿಧರ್​ರವರ ಕಾಲಿನ ಮಂಡಿ ಚಿಪ್ಪು ಎಗರಿಸಿದೆ. ಘಟನೆ ಬೆನ್ನಲ್ಲೆ ಅವರು ಕೂಗಿಕೊಂಡಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಮನೆಯವರು ಗಿರಿಧರ್​ರವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಈಗಾಗಲೇ ತೀರ್ಥಹಳ್ಳಿ ಪೊಲೀಸರು ಇಬ್ಬರು ಅನುಮಾನಸ್ಪದ ವ್ಯಕ್ತಿಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಈ ಹಿಂದೆ ಕಾಂತರಾಜ್​ ಶಿಕಾರಿ ಕೇಸ್​ನಲ್ಲಿ ಕೇಳಿ ಬಂದ ಹೆಸರಗಳು ಇವೆ ಎಂಬುದು ಸ್ಪಷ್ಟವಾಗುತ್ತಿವೆ.

ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ.

Leave a Reply

Your email address will not be published. Required fields are marked *