WhatsApp Channel Join Now
Telegram Channel Join Now

ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಯತ್ನ ಪ್ರಕರಣ – ಶಿಕಾರಿಪುರದ ಆರೋಪಿಗಳು ಸುರತ್ಕಲ್ ನಲ್ಲಿ‌ ಬಂಧನ|theft

ಶಿವಮೊಗ್ಗದ ವಿನೋಬನಗರ ಸಮೀಪ ಜೆಸಿಬಿ ಮೂಲಕ ಎಟಿಎಂ ವೊಂದನ್ನ ದರೋಡೆ ಮಾಡಲು ಯತ್ನಿಸಿದ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣದ ಆರೋಪಿಗಳು ಯಾರು ಎಂಬು ಕುತೂಹಲ ಮೂಡಿಸಿತ್ತು. ಇದೀಗ ಪ್ರಕರಣ ಬಯಲಾಗಿದೆ. ಆದರೆ ಪ್ರಕರಣ ಬಯಲಾಗಿದ್ದು ಶಿವಮೊಗ್ಗದಲ್ಲಿ ಅಲ್ಲ, ಬದಲಾಗಿ ಸುರತ್ಕಲ್​ನಲ್ಲಿ.  

ಹೌದು,  ಸುರತ್ಕಲ್  (Suratkal) ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಲೂಟಿ ಮಾಡುವ ಪ್ರಯತ್ನವೊಂದು ನಡೆದಿತ್ತ. ಈ  ATM Robbery Mangalore ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದು, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ನಾಲ್ವರು ಆರೋಪಿಗಳನ್ನ ಬಂದಿಸಿದ್ಧಾರೆ.   

ಕಳೆದ  ಆಗಸ್ಟ್ 4 ರಂದು ರಾತ್ರಿ ಪಡುಬಿದ್ರೆ ಠಾಣೆಯ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಜೆಸಿಬಿ ಯಂತ್ರವನ್ನು ಕದ್ದಿದ್ದ ಆರೋಪಿಗಳು, ಅದರ ಮೂಲಕ ಸುರತ್ಕಲ್ ಬಳಿಯಲ್ಲಿರುವ ಸೌತ್​ ಇಂಡಿಯನ್ ಬ್ಯಾಂಕಿನ ಎಟಿಎಂ ಮೆಷಿನ್​ ದರೋಡೆಗೆ ಯತ್ನಿಸಿದ್ದರು. ಎಟಿಎಂ ಕೇಂದ್ರದಲ್ಲಿ ಸೈರನ್ ಮೊಳಗಿದ  ಹಿನ್ನೆಲೆ ಹಿಡಿದ ಕೆಲಸಕ್ಕೆ ಅರ್ಧಕ್ಕೆ ಕೈ ಚೆಲ್ಲಿ ಆರೋಪಿಗಳು ಪರಾರಿಯಾಗಿದ್ದರು . ಈ ಪ್ರಕರಣವನ್ನು ದಕ್ಷಿಣ ಕನ್ನಡ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ರು. 

ಇನ್ನೂ ಈ ಪ್ರಕರಣಕ್ಕೂ ಮೊದಲು ಶಿವಮೊಗ್ಗದಲ್ಲಿ ಜುಲೈ 26ರಂದು ಮಧ್ಯರಾತ್ರಿ  ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶಿವ ದೇವಸ್ಥಾನದ ಬಳಿಯಿರುವ ಬ್ಯಾಂಕ್ ಎಟಿಎಂ (ATM )ಕೇಂದ್ರವನ್ನು ಜೆಸಿಬಿ ಮೂಲಕ ಒಡೆಯುವ ಪ್ರಯತ್ನ ನಡೆಸಿದ್ದರು. 

ಸದ್ಯ ಪ್ರಕರಣ ಸಂಬಂಧ  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೇವರಾಜ್ (24), ಭರತ್ (20), ನಾಗರಾಜ ನಾಯ್ಕ (21),  ಧನರಾಜ್ ನಾಯ್ಕ (26) ನನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಹೀರೊ ಹೊಂಡಾ ಸ್ಪೆಂಡರ್ ಬೈಕ್ ಮತ್ತು ಎರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *