ರಿಪ್ಪನ್‌ಪೇಟೆ : ತೋಟದಲ್ಲಿ ಹುಲ್ಲು ಕೊಯ್ಯುವಾಗ ಹಾವು ಕಚ್ಚಿ ವೃದ್ದೆ ಸಾವು|snake bite
ಮನೆ ಹಿಂಬಾಗದ ಅಡಿಕೆ ತೋಟದಲ್ಲಿ ಹುಲ್ಲು ಕೊಯ್ಯುವ ವೇಳೆ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಸಮೀಪದ ಕೆ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಯಮ್ಮ (72 )ಹಾವು ಕಡಿತದಿಂದ ಮೃತಪಟ್ಟ ಮಹಿಳೆಯಾಗಿದ್ದು, ಜಾನುವಾರುಗಳಿಗೆ ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಶನಿವಾರ ಮಧ್ಯಾಹ್ನ ಹುಲ್ಲು ಕೊಯ್ಯುವ ವೇಳೆ ಹಾವು ಕಚ್ಚಿದೆ. ಕೂಡಲೇ ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರುವಾಗ ಮಹಿಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ…