w
Headlines
Home » ರಸ್ತೆಗೆ ವಾಲಿದ ವಿದ್ಯುತ್ ಕಂಬ : ಆತಂಕದಲ್ಲಿ ಸಾರ್ವಜನಿಕರು|mescom

ರಸ್ತೆಗೆ ವಾಲಿದ ವಿದ್ಯುತ್ ಕಂಬ : ಆತಂಕದಲ್ಲಿ ಸಾರ್ವಜನಿಕರು|mescom

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ತಳಲೆ ಗ್ರಾಮದ ಬಾಳೆಕೊಡ್ಲು ಬಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬಾಗಿದ್ದು, ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.




ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಬಳಿಯ ಬೆಳ್ಳೂರು ಸಂಪರ್ಕ ರಸ್ತೆಯಲ್ಲಿ 11 ಕೆ ವಿ ವಿದ್ಯುತ್ ಕಂಬ ಅಪಾಯದ ಸ್ಥಿತಿಯಲ್ಲಿ ಇದ್ದರು ಸಹ ಮೆಸ್ಕಾಂ  ಇಲಾಖೆ ಜಾಣ ಕುರುಡು ನೀತಿ ಅನುಸರಿಸುತ್ತಿದೆ.




ಈ 11 ಕೆ ವಿ ವಿದ್ಯುತ್ ಕಂಬವು ಶಿಥಿಲಗೊಂಡು ರಸ್ತೆಗೆ ಬಾಗಿದ್ದು, ಜೋರಾಗಿ ಗಾಳಿ ಬೀಸಿದಲ್ಲಿ ಮುರಿದು ಬೀಳಲಿದೆ. ಬೆಳ್ಳೂರು-ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ನೂರಾರು ವಾಹನಗಳು ಸಂಚರಿಸುತ್ತಿರುತ್ತವೆ, ಶಿಥಿಲವಾಗಿರುವ ಕಂಬವು ರಸ್ತೆಗೆ ಉರುಳಿ ಬೀಳುವ ಮುನ್ನವೇ ಮೆಸ್ಕಾಂ ಈ ಕಂಬವನ್ನು ಸ್ಥಳಾಂತರಿಸುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕಿದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.