ಶಿವಮೊಗ್ಗದ ಇಂಜಿನಿಯರ್ ಪತ್ನಿಯ ಕೊಲೆ!!! – ನಡೆದಿದ್ದೇನು…!!???

ಶಿವಮೊಗ್ಗ ನಗರದ ವಿಜಯನಗರದಲ್ಲಿ ಮಹಿಳೆಯ ಕೊಲೆ ಪ್ರಕರಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಕಾರು ಚಾಲಕನ ನಡೆ ಬಗ್ಗೆ ತುಂಗಾನಗರ ಪೊಲೀಸರು ಅನುಮಾನ ಮೂಡಿಸಿದೆಯಷ್ಟೆ ಅಲ್ಲದೆ , ಮನೆ ಸಮೀಪ ಕೆಲ ವ್ಯಕ್ತಿಗಳು ಓಡಾಡಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ತುಂಗಾನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ ವಿಜಯ ನಗರದ 2 ನೇ ತಿರುವಿನಲ್ಲಿರುವ ಮನೆಯಲ್ಲಿ   ಕಮಲಮ್ಮ 54 ವರ್ಷದ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕೊಲೆಯಾದವರು,  ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿರುವ ಮಲ್ಲಿಕಾರ್ಜುನರವರ ಪತ್ನಿ ಯಾಗಿದ್ದಾರೆ. 

ಮಲ್ಲಿಕಾರ್ಜುನ್​ರವರು ಕೆಲದಿನಗಳಲ್ಲಿ ನಿವೃತ್ತಿಯಾಗುವವರಿದ್ದು. ಈ ಹಿನ್ನೆಲೆಯಲ್ಲಿ  ಸ್ನೇಹಿತರೊಂದಿಗೆ  ಗೋವಾಕ್ಕೆ ತೆರಳಿದ್ರು. ಇನ್ನೂ ಕಮಲಮ್ಮರವರ   ಮಗ ಬೆಂಗಳೂರಿನಲ್ಲಿ MBBS ಮುಗಿಸಿ MD ಮಾಡುತ್ತಿದ್ದರು. ಮಗಳು ಇಂಜಿನಿಯರಿಂಗ್ ಮುಗಿಸಿ ಹೊರ ಊರಿನಲ್ಲಿದ್ದರು.  ಹಾಗಾಗಿ ಮನೆಯಲ್ಲಿ ಕಮಲಮ್ಮ ಒಬ್ಬರೆ ಇದ್ದರು. ನಿನ್ನೆ ಸಂಜೆ ಅವರ ಹತ್ಯೆಯಾಗಿದೆ.  

ನಿನ್ನೆ ಶನಿವಾರ ಸಂಜೆ ಮಲ್ಲಿಕಾರ್ಜುನಯ್ಯ ಅವರು ಮಡದಿ ಕಮಲಮ್ಮ ನವರಿಗೆ  5:30ರ ಸಮಯದಲ್ಲಿ ಫೋನ್ ಮಾಡಿದ್ದಾರೆ. ಆದರೆ ಕಮಲಮ್ಮ ಫೋನ್​ ರಿಸೀವ್ ಆಗಿ್ಲ.  ಹಲವು ಸಾರಿ ಟ್ರೈ ಮಾಡಿದ್ದಾರೆ.  ಇದರಿಂದ ಆತಂಕಗೊಂಡ ಅವರು, ತಮ್ಮ  ಸ್ನೇಹಿತನಿಗೆ ಕರೆ ಮಾಡಿ ವಿಚಾರಿಸುವಂತೆ ತಿಳಿಸಿದ್ದಾರೆ. ಮಲ್ಲಿಕಾರ್ಜುನ್​ರವರ ಸ್ನೇಹಿತರು ಮನೆಗೆ ಹೋಗಿ ನೋಡಿದಾಗ, ಅಲ್ಲಿ ಬಾಗಿಲು ತೆರಳಿದ ಸ್ಥಿತಿಯಲ್ಲಿತ್ತು. ಅಲ್ಲದೆ ಲೈಟ್ ಆನ್ ಆಗಿರಲಿಲ್ಲ. ಮೊಬೈಲ್ ಟಾರ್ಚ್​ ಬಳಸಿ ಒಳಕ್ಕೆ ಹೋಗಿ ನೋಡಿದಾಗ ಕಮಲಮ್ಮರವರ ಮೃತದೇಹ ಕಂಡಿದೆ. ತಕ್ಷಣವೇ ಅವರು, ಮಲ್ಲಿಕಾರ್ಜುನ್​ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಘಟನೆಯ ಬಗ್ಗೆ ಸ್ಥಳಿಯರು ಪೊಲೀಸರ ಬಳಿಯಲ್ಲಿ  ಅನುಮಾನ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕಾರು ಚಾಲಕ ಘಟನೆಯ ಹಿಂದಿನ ದಿನ ಕಮಲಮ್ಮರ ಬಳಿ ಬಂದು ಹಣ ಕೇಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆ ವೇಳೆ ನಡೆದಿದ್ದೇನು ಎಂಬುದು ಸ್ಪಷ್ಟವಾಗಿಲ್ಲ. ಇನ್ನೂ ಕಾರು ಚಾಲಕನ ಮೊಬೈಲ್ ಸಹ ಸ್ವಿಚ್ ಆಫ್ ಆಗಿರುವುದು ಪೊಲೀಸರು ಪ್ರಕರಣದಲ್ಲಿ ಒನ್ ಆಫ್​ ದಿ ಸಸ್ಪೆಕ್ಟ್ ಎನ್ನುತ್ತಿದ್ದಾರೆ. 

ಇನ್ನೂ ಘಟನೆ ನಡೆದ ದಿನ ಕಮಲಮ್ಮರ  ಮನೆಯ ಬಳಿಯಲ್ಲಿ ನಾಲ್ಕೈದು ಮಂದಿ ಅನುಮಾನಸ್ಪದವಾಗಿ ಓಡಾಡುತ್ತಿರುವುದನ್ನ ಕೆಲವರು ಕಂಡಿದ್ದಾರೆ. ಈ ಬಗ್ಗೆಯು ಪೊಲೀಸರು ತನಿಖೆ ನಡೆಸ್ತಿದ್ದಾರೆ. 

ಇನ್ನೊಂದೆಡೆ ಒಬ್ಬರೇ ಈ ಕೃತ್ಯವೆಸಗಿಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬರುತ್ತಿದ್ದು, ಕಮಲಮ್ಮರವರು ಸಾಕಷ್ಟು ಗಟ್ಟಿಮುಟ್ಟಾದ ಆಳಾಗಿದ್ದರು. ಅವರನ್ನ ನಾಲ್ಕೈದು ಜನರು ಸೇರಿಕೊಂಡು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ದಾವಣಗೆರೆಯಿಂದ ಎಫ್​ಎಸ್​ಎಲ್​ ತಂಡ ಬರುತ್ತಿದ್ದು,ಘಟನೆ ಸಂಬಂಧ ತುಂಗಾನಗರ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಒಟ್ಟಾರೆ, ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡುತ್ತಿದ್ದು, ಮಹಿಳೆಯ ಕೊಲೆ ನಗರದಲ್ಲಿ ಒಂದು ರೀತಿಯ ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *