ರಿಪ್ಪನ್‌ಪೇಟೆ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ 2014 ಮತ್ತು 2019 ರಲ್ಲಿ ರಾಷ್ಟ್ರದ ಜನತೆಗೆ ಮೋದಿ ಅವರ ಮೇಲಿದ್ದ ಅಭಿಮಾನ ಈ ಬಾರಿಯ ಚುನಾವಣೆಯಲ್ಲಿ ದುಪ್ಪಟ್ಟಾಗಿದ್ದು ಮೋದಿಯನ್ನು ಗೆಲ್ಲಿಸಲೇಬೇಕೆಂದು ಜನಸಾಮಾನ್ಯರೇ ಪಣ ತೊಟ್ಟಿದ್ದಾರೆ ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಅನಾಯಸವಾಗಿ ಗೆಲ್ಲುವ ವಿಶ್ವಾಸವಿದೆ ಎಂದರು.
ಪಕ್ಷದ ಆಂತರಿಕ ವಿಷಯ ಬಹಿರಂಗ ಚರ್ಚೆ ಬೇಡ
ಪಕ್ಷದಲ್ಲಿರುವ ಆಂತರಿಕ ಗೊಂದಲಗಳ ಬಗ್ಗೆ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಪಕ್ಷ ತತ್ವ ಸಿದ್ದಾಂತದ ಶಿಸ್ತಿನ ಪಕ್ಷ.ನಮ್ಮ ಪಕ್ಷದ ಅಂತರಿಕ ಗೊಂದಲವನ್ನು ನಾಲ್ಕು ಗೋಡೆಯ ಮಧ್ಯ ಪಕ್ಷದ ಸಭೆಯಲ್ಲಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯವೆಂದು ಹೇಳಿದರು.
ಬಿಜೆಪಿ ಪಕ್ಷಕ್ಕೆ ಸೋಲು ಎಂಬುದು ಹೊಸದೇನು ಅಲ್ಲ ಸದಾ ಜನಸಾಮಾನ್ಯರ ಸಮಸ್ಯೆಗಳ ಪರ ಹೋರಾಟ ನಡೆಸುತ್ತಾ ಅಧಿಕಾರದ ಅಸೆಗಾಗಿ ಎಂದು ನಾವು ಅಂಟಿಕೊಳ್ಳದೇ ಪಕ್ಷದ ತತ್ವಸಿದ್ದಾಂತದೊಂದಿಗೆ ಸಂಘಟನೆಯಲ್ಲಿ ಬೆಳೆದುಬಂದವರು ಎಂಬುದನ್ನು ನಮ್ಮ ಪಕ್ಷದ ನಾಯಕರು ಕಾರ್ಯಕರ್ತರು ಮರೆಯಬಾರದು ಎಂದರು.
ಕಾಂಗ್ರೆಸ್ ಗೆದ್ದಿಲ್ಲ ಗ್ಯಾರಂಟಿ ಕಾರ್ಡ್ ಗೆದ್ದಿದೆ
ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಕಂಡಿರಬಹುದು,ಆದರೆ ನಮಗೆ ಸೋಲು ಹೊಸದಲ್ಲ,
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ ಗ್ಯಾರಂಟಿ ಕಾರ್ಡ್ ಗೆದ್ದಿದೆ.ಅದರೆ ಅದನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ತಿಣುಕಾಡುತ್ತಿದೆ ಎಂದರು.
ಮತ ನೀಡಿದ ಜನತೆಗೆ ಬೆಲೆ ಏರಿಕೆಯ ಬರೆ ಹಾಕುತಿದ್ದಾರೆ
ಈಗಾಗಲೇ ಗೃಹ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ವಿದ್ಯುತ್ ದರ ಹೆಚ್ಚಳದಿಂದಾಗಿ ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರವರು ಈ ಹಿಂದಿನ ಸರ್ಕಾರ ವಿದ್ಯುತ್ ಬೆಲೆ ಹೆಚ್ಚಿಸಿದ್ದು ಎಂದು ಹೇಳಿ ಜನರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಹಾಗಾದರೆ ಈ ಹಿಂದಿನ ಬಿಜೆಪಿ ಸರ್ಕಾರ ಗೋಹತ್ಯೆ ಮತ್ತು ಮತಾಂತರ ನಿಷೇದದಂತಹ ವಿದೇಯಕವನ್ನು ಕಾಂಗ್ರೇಸ್ ಪಕ್ಷದ ಆಧಿಕಾರ ಹಿಡಿದ ತಕ್ಷಣ ವಾಪಾಸ್ಸು ಪಡೆಯುತ್ತೇವೆಂದು ಹೇಳುತ್ತಿದ್ದು ಹಾಗಾದರೆ ವಿದ್ಯುತ್ ಬೆಲೆಯನ್ನು ಹಿಂಪಡೆಯ ಬಹುದಾಗಿತು ಏಕೆ ನಮ್ಮ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆಂದು ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡರು.
ಪಿಎಸೈ ಹಗರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಸಿದ್ದೇವೆ
ನಮ್ಮ ಸರ್ಕಾರವಿದ್ದಾಗಲೇ ಪಿಎಸ್‌ಐ ನೇಮಕಾತಿ ಹಗರಣವನ್ನು ಸಿಓಡಿಗೆ ಒಪ್ಪಿಸುವ ಮೂಲಕ ಸಮಗ್ರ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಪ್ರಕರಣದಲ್ಲಿದ್ದ ಹಲವರನ್ನು ಬಂಧಿಸಲಾಗಿದ್ದು ತನಿಖೆ ಪೂರ್ಣವಾಗುತ್ತಿರುವಾಗಲೇ ಕಾಂಗ್ರೆಸ್ ಪಕ್ಷದ ಕೆಲವು ಸಚಿವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಾಗಿ ಇಲ್ಲದ ಆರೋಪ ಮಾಡುತ್ತಿದ್ದಾರೆ.ಹಾಗಾರದೇ ಅವರದೇ ಸರ್ಕಾರವಿದೆ ತನಿಖೆ ನಡೆಸಲಿ ತಟ್ಟಿ ಬಡಿದು ಹೆದರಿಸುವ ಅಗತ್ಯವಿಲ್ಲ ಎದುರಿಸಲು ನಾವುಗಳು ಸಿದ್ದರಾಗಿದ್ದೇವೆಂದು ಸವಾಲು ಹಾಕಿದರು.
ಜುಲೈ 03 ರಂದು ಗ್ಯಾರಂಟಿ ಅನುಷ್ಠಾನಕ್ಕೆ ಪ್ರತಿಭಟನೆ
ಬರುವ ಜುಲೈ 3 ರಿಂದ ಬಿಜೆಪಿ ಪಕ್ಷದ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ್, ಪಕ್ಷದ ಮುಖಂಡರಾದ ಆರ್ ಟಿ ಗೋಪಾಲ್, ಎಂ.ಸುರೇಶಸಿಂಗ್,ಕಗ್ಗಲಿ ಲಿಂಗಪ್ಪ,ಸುಧೀಂದ್ರ ಪೂಜಾರಿ,ಸುಂದರೇಶ್, ದೇವರಾಜ್ ಕೆರೆಹಳ್ಳಿ,
ಸುಧೀರ್ ಪಿ,ಅಶೋಕ್ ಗೌಡ , ಸತೀಶ್ ಕಿಣಿ ಹಾಗೂ ಇನ್ನಿತರರಿದ್ದರು