Headlines

ಬೈಕ್ ಕಳ್ಳತನ ಮಾಡುತಿದ್ದ ಕೋಳಿ ಅರೆಸ್ಟ್|theft

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ  ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಎಟಿಎಂ ಮುಂದೆ ನಡೆದಿದ್ದ ಬೈಕ್​ ಕಳ್ಳತನ ಪ್ರಕರಣವನ್ನು ಭದ್ರಾವತಿ ಪೊಲೀಸರು ಭೇದಿಸಿದ್ದಾರೆ. 

ಇಲ್ಲಿನ ನಿವಾಸಿಯೊಬ್ಬರು ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ಬೈಕ್​ ನ್ನು ಕಳ್ಳರು ಕಳ್ಳತನ ಮಾಡಿದ್ದರು  ಈ ಸಂಬಂಧ 379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ  ತನಿಖಾ ತಂಡವು ದಿನಾಂಕ:24/6/2023 ರಂದು ಆರೋಪಿಯನ್ನ ಬಂಧಿಸಿದ್ಧಾರೆ.  ಪ್ರಭು @ ಕೋಳಿ,  28 ವರ್ಷ, ಬೆಳಕಟ್ಟೆ ಗ್ರಾಮ ಶಿವಮೊಗ್ಗ ಬಂಧಿತ ಆರೋಪಿ. 

ಆರೋಪಿತನಿಂದ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯ 01 ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ 01 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 02 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು 80,000/- ರೂ ಗಳ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *