w
Headlines
Home » ಸಾಗರದ ಮಾಜಿ ಶಾಸಕರಾದ ಬಿ ಧರ್ಮಪ್ಪ ನಿಧನ|ex mla

ಸಾಗರದ ಮಾಜಿ ಶಾಸಕರಾದ ಬಿ ಧರ್ಮಪ್ಪ ನಿಧನ|ex mla

ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ವಕೀಲರಾದ ಬಿ ಧರ್ಮಪ್ಪ ರವರು ವಯೋಸಹಜ ನಿಧನರಾಗಿದ್ದಾರೆ.




ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಅವರು ಇಂದು ಸಂಜೆ 3.40 ರ ಸಮಯದಲ್ಲಿ ಕೊನೆಯುಸಿರೆಳೆದರು.

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿ ಧರ್ಮಪ್ಪ ರವರು 1985 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಎಲ್ ಟಿ ತಿಮ್ಮಪ್ಪ ರವರ ವಿರುದ್ದ 1500 ಮತಗಳ ಅಂತರದಿಂದ ಜಯಗಳಿಸಿದ್ದರು.

ಮೂಲತಃ ಸಾಗರ ತಾಲೂಕಿನ ತಂಗಳವಾಡಿಯವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು.




ಕೆಲವು ದಿನಗಳ ಹಿಂದೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಹಿನ್ನಲೆಯಲ್ಲಿ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಾಳೆ ಮೃತರ ಸ್ವಗ್ರಾಮವಾದ ತಂಗಳವಾಡಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.