w
Headlines
Home » Ex Mla |ರಿಪ್ಪನ್‌ಪೇಟೆ : ಮಾಜಿ ಶಾಸಕ ಡಾ. ಉಮಾಕಾಂತ್ ಬಿ ಬೋರ್ಕರ್ ನಿಧನ

Ex Mla |ರಿಪ್ಪನ್‌ಪೇಟೆ : ಮಾಜಿ ಶಾಸಕ ಡಾ. ಉಮಾಕಾಂತ್ ಬಿ ಬೋರ್ಕರ್ ನಿಧನ

ರಿಪ್ಪನ್‌ಪೇಟೆ : ಶಿರಸಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬೋರ್ಕರ್ ಉಮಾಕಾಂತ್(84) ರವರು ಇಂದು ಮುಂಜಾನೆ ವಯೋಸಹಜ ನಿಧನರಾಗಿದ್ದಾರೆ.


ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬೋರ್ಕರ್ ಉಮಾಕಾಂತ್ ಗೆಲುವು ಸಾಧಿಸಿದ್ದರು.

ಹಲವಾರು ವರ್ಷಗಳಿಂದ ಅವರು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮದಲ್ಲಿ ವಾಸಿಸುತಿದ್ದು ಅವರ ಪತ್ನಿ ಮಂಜುಳಾ ಬೋರ್ಕರ್ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಾರೆ.

1978 ರಲ್ಲಿ ತುರ್ತು ಪರಿಸ್ಥಿತಿಯ ಪ್ರಭಾವದಿಂದ ಬೋರ್ಕರ್ ಉಮಾಕಾಂತ್ ಕಾಂಗ್ರೆಸ್‌ನ ರೇವಣಕರ್‌ ಶಂಕರ್‌ ಪುರುಷೋತ್ತಮ್‌ ಅವರ ವಿರುದ್ಧ 2713 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. 

ಅರಸಾಳಿನ ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸೆ ಕಲ್ಪಿಸಲಾಗಿದೆ.

ಸಂತಾಪ :

ಶಿರಸಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಉಮಾಕಾಂತ್ ಬೋರ್ಕರ್ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ,ಜಿಪಂ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್ ,ಬಿ ಪಿ‌ ರಾಮಚಂದ್ರ ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ , ಮುಖಂಡರಾದ ಎಂ ಎಂ ಪರಮೇಶ್ ,ಆಸೀಫ಼್ ಭಾಷಾಸಾಬ್ ಹಾಗೂ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.