w
Headlines
Home » ರಾಷ್ಟ್ರಕವಿ ಕುವೆಂಪು ಜಿಲ್ಲೆಯಲ್ಲಿ ನಾಡಗೀತೆ ಬದಲು ಮೊಳಗಿದ ತಮಿಳುನಾಡಿನ ನಾಡಗೀತೆ|election

ರಾಷ್ಟ್ರಕವಿ ಕುವೆಂಪು ಜಿಲ್ಲೆಯಲ್ಲಿ ನಾಡಗೀತೆ ಬದಲು ಮೊಳಗಿದ ತಮಿಳುನಾಡಿನ ನಾಡಗೀತೆ|election


ರಾಷ್ಟ್ರ ಕವಿ ಕುವೆಂಪು ರವರ ತವರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆ ಹಾಡಿರುವ ಘಟನೆ ನಡೆದಿದೆ.

ನಗರದ ಎನ್ ಇಎಸ್ ಮೈದಾನದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ತಮಿಳು ಬಾಂಧವರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ  ಮಾಜಿ ಸಚಿವ ಈಶ್ವರಪ್ಪ, ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಹಾಗೂ ಮುಖ್ಯ ಅಥಿತಿಗಳಾಗಿ ಅಣ್ಣಮಲೈ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ನಾಡಗೀತೆ ಹಾಡುಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಲು ಮುಂದಾಗಿದ್ದರು. ಆದರೆ ತಮಿಳು ನಾಡಿನ ನಾಡಗೀತೆ ಹಾಡು ಆರಂಭವಾಗಿತ್ತು. ತಕ್ಷಣವೇ ಈಶ್ವರಪ್ಪ ಇದನ್ನ ತಡೆದು ಕನ್ನಡ ನಾಡ ಗೀತೆ ಹಾಡಲು ಹೇಳಿದರು.

ತಮಿಳು ನಾಡಿನ ನಾಡಗೀತೆ ಹಾಡುತ್ತಿದ್ದಂತೆ ಈಶ್ವರಪ್ಪ ಕನ್ನಡ ನಾಡಗೀತೆ ಹಾಡುವವರು ಬಂದು ಹಾಡಲು ಕೋರಿದರು. ಒಬ್ಬ ಮಹಿಳೆ ಬರುವುದರೊಳಗೆ ಕನ್ಬಡ ನಾಡಿನ ಜಯ ಭಾರತ ಜನನಿಯ ತನುಜಾತೆ ಎಂದು ಆಡಿಯೋ ಹಾಡನ್ನ ಹಾಡಲಾಯಿತು.






Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.