ಬೆಳಕು ಕೊಟ್ಟ ನಾಡನ್ನು ಕತ್ತಲಲ್ಲಿರಿಸಿದ ಮೂರು ಪಕ್ಷಗಳನ್ನು ತಿರಸ್ಕರಿಸಿ – ಸಾಲೂರು ಶಿವಕುಮಾರ್|AAP

ರಾಜ್ಯಕ್ಕೆ ಬೆಳಕು ಕೊಟ್ಟ ನಾಡನ್ನು ಕತ್ತಲಲ್ಲಿರಿಸಿದ ಮೂರು ಪಕ್ಷಗಳನ್ನು ತಿರಸ್ಕರಿಸಿ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವ ಮೂಲಕ ಸದೃಡ,ನಿರ್ಭೀತ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಲೂರು ಶಿವಕುಮಾರ್ ಹೇಳಿದರು.




ಹುಂಚ ಹೋಬಳಿಯ ಗರ್ತಿಕೆರೆ ಗ್ರಾಮದಲ್ಲಿ ಮತಯಾಚನೆ ಕಾರ್ಯಕ್ರಮದ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯಕ್ಕೆ ವಿದ್ಯುತ್ ನೀಡಲು ತನ್ನೆಲ್ಲಾ ಸರ್ವಸ್ವವನ್ನೂ ಕಳೆದುಕೊಂಡ ನಾಡನ್ನು ಈಗ ಕತ್ತಲಲ್ಲಿರಿಸಿರುವ ಪ್ರಮುಖ ಮೂರು ಪಕ್ಷಗಳನ್ನು ಜನತೆ ತಿರಸ್ಕರಿಸಬೇಕಾಗಿದೆ, ಸಮಸ್ಯೆಗಳನ್ನು ಜೀವಂತವಾಗಿರಿಸಿಕೊಂಡೇ ಹಲವು ದಶಕಗಳಿಂದ ರಾಜಕಾರಣ ನಡೆಸುತ್ತಿರುವ JCB ಪಕ್ಷಗಳಿಗೆ ಜನತೆ ಈ ಚುನಾವಣೆಯಲ್ಲಿ ಉತ್ತರ ನೀಡಬೇಕಾಗಿದೆ ಎಂದರು.


ಸುಪ್ರೀಂ ಕೋರ್ಟ್ ವಕೀಲನಾಗಿದ್ದ ನನಗೆ ಕೋವಿಡ್ ಸಂಧರ್ಭದಲ್ಲಿ ಜನತೆ ಆರೋಗ್ಯ ಸೇವೆಗಾಗಿ ಪರದಾಡಿದ ಸ್ಥಿತಿ ಹಾಗೂ ನಾಡಿಗಾಗಿ ಭೂಮಿ ಕಳೆದುಕೊಂಡ ಶರಾವತಿ ಸಂತ್ರಸ್ಥರ ಪರದಾಟ ರಾಜಕೀಯಕ್ಕೆ ಕಾಲಿಡುವಂತೆ ಪ್ರೇರೆಪಿಸಿತು.ರಾಷ್ಟ್ರಾದ್ಯಂತ ಸಂಚಲನ ಮೂಡಿಸಿರುವ ಆಮ್ ಆದ್ಮಿ ಪಕ್ಷದ ಪಂಜಾಬ್ ಮಾಡೆಲ್ ಮತ್ತು ದೆಹಲಿ ಮಾಡೆಲ್ ನ್ನು ಮಿಶ್ರಣ ಮಾಡಿ ಮಲೆನಾಡು ಮಾಡೆಲ್ ಮಾಡಬೇಕೆಂಬ ಇಚ್ಚೆಯಿಂದ ಈ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.

ಗೋಪಾಲ ಗೌಡ ,ಕುವೆಂಪು ಮತ್ತು ಕಡಿದಾಳ್ ಮಂಜಪ್ಪ ನಂತಹವರು  ಬಂದ ತಾಲೂಕಿನಲ್ಲಿ ಸಚ್ಚಾರಿತ್ರ್ಯದ ರಾಜಕಾರಣವನ್ನು ಮರುಕಳಿಸಬೇಕೆಂಬ ಉದ್ದೇಶದಿಂದ ಸ್ಪರ್ಧಿಸಿದ್ದೇನೆ,ಬಿಜೆಪಿಯ ಕೋಮು ರಾಜಕಾರಣ, ಕಾಂಗ್ರೆಸ್ ನ ಒಲೈಕೆ ರಾಜಕಾರಣ ಮತ್ತು ಜೆಡಿಎಸ್ ನ ಜಾತಿ ರಾಜಕಾರಣದಿಂದ ಜನ ಬೇಸತ್ತಿದ್ದು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.




ಈ ಸಂಧರ್ಭದಲ್ಲಿ ಆಮ್ ಆದ್ಮಿ ಮುಖಂಡರಾದ ದೇವದಾಸ್ ಗೌಡ ಕೊಳಿಗೆ,ಸದಾನಂದ ಹೆಗಡೆ ,ಅಭಿಲಾಷ್ ಅಂದಿನಿ‌,ಆದರ್ಶ್ ಆರಗ ,ಜಗದೀಶ್ ಬಿದರಹಳ್ಳಿ , ಪುರುಷೋತ್ತಮ್ ,ಮಹೇಶ್ ಹಾಗೂ ಇನ್ನಿತರರಿದ್ದರು.








Leave a Reply

Your email address will not be published. Required fields are marked *