Headlines

ಸಾಗರ – ಶಿಕಾರಿಪುರದಲ್ಲಿ ಎಟಿಎಂ ವಾಹನದಲ್ಲಿ ದಾಖಲೆ ಇಲ್ಲದ ಕೋಟಿ ಕೋಟಿ ಹಣ ಪತ್ತೆ|ATM

ಶಿವಮೊಗ್ಗ: ಜಿಲ್ಲೆಯ ಮೂರು ಕಡೆಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 9.15 ಕೋಟಿ ರೂ. ದಾಖಲೆ ಇಲ್ಲದ ಹಣ ಪತ್ತೆಯಾಗಿದೆ.  ಶಿವಮೊಗ್ಗದ ಸಾಗರ, ಸೊರಬ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಬೃಹತ್‌ ಮೊತ್ತದ ಹಣ ಪತ್ತೆಯಾಗಿದೆ. ಎಟಿಎಂಗೆ ಹಣ ತುಂಬುವ ವಾಹನಗಳಲ್ಲಿ ಈ ಹಣವನ್ನು ಅನಧಿಕೃತವಾಗಿ ತುಂಬಿಕೊಂಡು ಹೋಗಲಾಗುತ್ತಿತ್ತು. ಇದು ಯಾರ ಹಣ, ಎಲ್ಲಿಗೆ ಸಾಗಿಸಲಾಗುತ್ತಿತ್ತು? ಚುನಾವಣೆಗೂ ಇದಕ್ಕೂ ಏನಾದರೂ ಸಂಬಂಧವಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಎಟಿಎಂಗೆ…

Read More

ಲೋಕ ಕಲ್ಯಾಣಕ್ಕಾಗಿ ಸಂಪನ್ನಗೊಂಡ ಆಶ್ಲೇಷ ಬಲಿ ಪೂಜೆ|worship

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ತಮಡಿಕೊಪ್ಪ ಗ್ರಾಮದಲ್ಲಿ ಶ್ರೀ ಗುರು ಕರಿಬಸವೇಶ್ವರ ಬಾಲಸುಬ್ರಹ್ಮಣ್ಯ ಸ್ವಾಮಿ ಹಾಗೂ ನಾಗದೇವತೆ ನಾಗಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ  ಶಾಸಕ ಹರತಾಳು ಹಾಲಪ್ಪ ಗೆಲುವಿಗಾಗಿ ಅವರ ಪರವಾಗಿ ಶ್ರೀ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ಭಕ್ತರು ಹಾಗೂ ಗೃಹ ಸಚಿವರ ಆಪ್ತ ಸಹಾಯಕರಿಂದ ಹಾಗೂ ಹಾಲಪ್ಪ ಅಭಿಮಾನಿಗಳಿಂದ ಭಾನುವಾರ ಶ್ರೀ ಕ್ಷೇತ್ರದಲ್ಲಿ ವಿಶೇಷ ಆಶ್ಲೇಷ ಬಲಿ ಪೂಜೆ ವಿದ್ಯಾಪನ ಹೋಮ ಲಕ್ಷ್ಮಿ ಹೃದಯ ಹೋಮವು ಸಂಪನ್ನಗೊಂಡಿತು. ವೇದ…

Read More

ಶುದ್ದ ರಾಜಕಾರಣದ ಮಾತನಾಡುವ ತೀರ್ಥಹಳ್ಳಿಯ ಇಬ್ಬರು ಅಭ್ಯರ್ಥಿಗಳು ಚುನಾವಣೆ ಹಿಂದಿನ ದಿನ ಮತದಾರನ ಮನೆ ಬಾಗಿಲು ಬಡಿಯುವುದು ಯಾಕೆ – ಯಡೂರು ರಾಜಾರಾಂ|JDS

ಶುದ್ದ ರಾಜಕಾರಣದ ಮಾತನಾಡುವ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ಚುನಾವಣೆ ಹಿಂದಿನ ದಿನ ತಮ್ಮ ಕಾರ್ಯಕರ್ತರ ಮೂಲಕ ಮತದಾರನ ಮನೆ ಬಾಗಿಲು ತಟ್ಟುವುದು ಯಾಕೆ ಎಂದು  ಜೆಡಿಎಸ್ ಪಕ್ಷದ ಅಭ್ಯರ್ಥಿ ಯಡೂರು ರಾಜಾರಾಂ ಪ್ರಶ್ನೆ ಮಾಡಿದರು. ಹುಂಚಾ ಹೋಬಳಿ ವ್ಯಾಪ್ತಿಯ ಹುಂಚ, ಹೆದ್ದಾರಿಪುರ, ಕೋಡೂರು, ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿ ಕಲ್ಲೂರು ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ,ಸಚ್ಚಾರಿತ್ರ್ಯದ ನಾಟಕವಾಡುವ ಇಬ್ಬರು ರಾಷ್ಟ್ರೀಯ ಪಕ್ಷದ ರಾಜಕಾರಣಿಗಳು ಚುನಾವಣೆಯ ಹಿಂದಿನ…

Read More

ಪ್ರಧಾನಿ ಮೋದಿಗೆ ಗುಂಡಿಕ್ಕಿ ಎಂದಿದ್ದ ಬೇಳೂರಿಗೆ ನೀವು ಮತ ಹಾಕುತ್ತೀರಾ – ಹರತಾಳು ಹಾಲಪ್ಪ|Political-news

ರಿಪ್ಪನ್‌ಪೇಟೆ : ಕಳೆದ ಚುನಾವಣೆಯ ಸಂದರ್ಭದ ದೇಶದ ಪ್ರಧಾನಿ ಮೋದಿಯವರಿಗೆ ಗುಂಡಿಕ್ಕಿ,ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬವನ್ನು ಜೈಲಿಗೆ ಕಳುಹಿಸಿ ಎಂದಿದ್ದ ಇದೇ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಈಗ ಯಡಿಯೂರಪ್ಪನವರಂತಹ ಪುಣ್ಯಾತ್ಮ ಎಂದು ಮತದಾರರ ಮುಂದೆ ಕಣ್ಣೀರು ಹಾಕುತ್ತಾ ಹಗಲು ವೇಷ ಮಾಡುತ್ತಿದ್ದಾರೆ ಅಂತವರಿಗೆ ನೀವು ಮತ ಹಾಕುತ್ತೀರಾ ಎಂದು ಶಾಸಕ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹೇಳಿದರು. ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬಾಳೂರು-ಕೆಂಚನಾಲ-ಅರಸಾಳು-ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದೊಂದಿಗೆ ಮನೆಮನೆಗೆ ಭೇಟಿ ಸಂದರ್ಭದಲ್ಲಿ ಅರಸಾಳು ಗ್ರಾಮದಲ್ಲಿ…

Read More

ಮೇ 4ಕ್ಕೆ ಸಾಗರಕ್ಕೆ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್

ಮೇ 1 ರಿಂದಲೇ ಮಧ್ಯದಂಗಡಿ ಬಂದ್ ಮಾಡಿ ಅಧಿಕಾರಿಗಳ ಬದಲಾಯಿಸಿ – ಕೆ ದಿವಾಕರ್ ಮೇ 4 ಕ್ಕೆ ಸಾಗರಕ್ಕೆ ಆಮ್ ಆದ್ಮಿ ಪರ ಪ್ರಚಾರ ಸಭೆಗೆ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ರಿಪ್ಪನ್‌ಪೇಟೆ;- ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆಭ್ಯರ್ಥಿ ಹರತಾಳು ಹಾಲಪ್ಪ ಆಧಿಕಾರ ಚಲಾಯಿಸಿ ಮಧ್ಯವನ್ನು ಹಂಚುವ ಹುನ್ನಾರದಲ್ಲಿದ್ದು ಆ ಕಾರಣ ಮೇ.1 ರಂದಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮಧ್ಯಮಾರಾಟವನ್ನು ಬಂದ್ ಮಾಡುವುದು ಮತ್ತು ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ಚಕ್‌ಪೋಸ್ಟ್ಗಳಲ್ಲಿ ಯಾವುದೇ ವಾಹನವನ್ನು ತಪಾಸಣೆ…

Read More

ಜ್ಞಾನವು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ದಿವ್ಯಶಕ್ತಿಯಾಗಿದೆ – ಡಾ.ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ|hombuja shri

ರಿಪ್ಪನ್ ಪೇಟೆ : ಜ್ಞಾನವು ಎಲ್ಲರನ್ನೂ ಸನ್ಮಾರ್ಗಕ್ಕೆ ತೆಗೆದುಕೊಂಡು ಹೋಗುವ ದಿವ್ಯಶಕ್ತಿಯಾಗಿದೆ. ಅಜ್ಞಾನದಿಂದ, ಅಂಧಕಾರದಿಂದ ಬೆಳಕಿನ ಕಡೆಗೆ ತೆಗೆದುಕೊಂಡು ಹೋಗುವ ಶಕ್ತಿ ಜ್ಞಾನದಲ್ಲಿರುತ್ತದೆ. ಜ್ಞಾನದ ಶಕ್ತಿಯು ಪ್ರತಿಯೊಬ್ಬರಲ್ಲಿಯೂ ಕೂಡ ಸಮನಾಗಿದ್ದರೂ ಅದರ ಅಭಿವೃದ್ಧಿ ಎಲ್ಲರಲ್ಲಿಯೂ ಸಮಾನಾಗಿರುವುದಿಲ್ಲ. ಎಲ್ಲಾ ಶಿಲೆಯಲ್ಲಿಯೂ ಮೂರ್ತಿಯಾಗುವ ಅರ್ಹತೆ ಇದ್ದರೂ ಶಿಲ್ಪಿ ತನ್ನ ಕೌಶಲ್ಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸುತ್ತಾನೆಯೂ ಅಷ್ಟರ ಮಟ್ಟಿಗೆ ಅದು ರೂಪುಗೊಳುತ್ತದೆ. ಹಾಗೆಯೇ ಮನುಷ್ಯನು ತನ್ನಲ್ಲಿರುವ ಜ್ಞಾನದ ಶಕ್ತಿಯನ್ನು ರೂಪುಗೊಳಿಸಿಕೊಳ್ಳಬೇಕು ಎಂದು ಹೊಂಬುಜ ಜೈನ ಮಠದ  ಡಾ. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ…

Read More

ಹಳ್ಳಿ ಮಕ್ಕಳ ರಂಗ ಹಬ್ಬದ ಸಮಾರೋಪ ಹಾಗೂ ಬಸವ ಜಯಂತಿ ಸಂಭ್ರಮೋತ್ಸವ|Ripponpet

“ಹಳ್ಳಿ ಮಕ್ಕಳ ರಂಗ ಹಬ್ಬದ ಸಮಾರೋಪ ಹಾಗೂ ಬಸವ ಜಯಂತಿ ಸಂಭ್ರಮೋತ್ಸವ’’ ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಅರಿವಿಲ್ಲದಂತಾಗಿದೆ :ಡಾ. ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ. ರಿಪ್ಪನ್‌ಪೇಟೆ;- ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಹಾಗೂ  ಸಂಸ್ಕಾರ ಇಲ್ಲದಂತಾಗಿದೆ.ಇತ್ತೀಚಿನ ದಿನಗಳಲ್ಲಿ  ನಾಟಕ ರಂಗಕಲೆ ಜಾನಪದ ತತ್ವ ಪದಗಳಿಂದ ನಮ್ಮ ಕಲೆ ಸಂಸ್ಕೃತಿ ಗಳು ಜೀವಂತವಾಗಿ ಉಳಿದಿದ್ದು ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಕ್ಕಳ ರಂಗ ಹಬ್ಬ ಪ್ರೇರಕವೆಂದು ಮಳಲಿಮಠದ ಡಾ.ಗುರುನಾಗಭೂಷಣ…

Read More

ಸಾಗರದ ಪ್ರತಿಷ್ಠಿತ RBD ಗ್ರೂಪ್ಸ್ ನ ಮಹೇಶ್ ಮತ್ತು ಜಲೀಲ್ ನೂರಾರು ಅಭಿಮಾನಿಗಳೊಂದಿಗೆ ಕಾಂಗ್ರೆಸ್ ಸೇರ್ಪಡೆ

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ದಿನಕಳೆದಂತೆ ರಂಗೇರುತಿದ್ದು ಅಭಿವೃದ್ದಿಗಿಂತ ಪ್ರೀತಿ ವಿಶ್ವಾಸಕ್ಕೆ ನಮ್ಮ ಸಹಕಾರ ಎಂದು ಕ್ಷೇತ್ರದ ಜನ ತೀರ್ಮಾನ ಮಾಡಿದಂತೆ ಭಾಸವಾಗುತಿದ್ದು ಆ ನಿಟ್ಟಿನಲ್ಲಿ ಯುವಕ ಯುವತಿಯರಿಂದ ಹಿಡಿದ್ದು ವೃದ್ದರವರೆಗೂ ಬೇಳೂರು ಗೋಪಾಲಕೃಷ್ಣ ರವರಿಗೆ ಬೆಂಬಲ ಸೂಚಿಸುತ್ತಿರುವುದು ಎದ್ದು ಕಾಣುತ್ತಿದೆ. ಹೌದು ಸಾಗರದ ಪ್ರಖ್ಯಾತ ಉದ್ಯಮಿಗಳಾದ RBD ಡೆವಲಪರ್ಸ್ ನ  ಜಲೀಲ್ ಮತ್ತು ಮಹೇಶ್ ಇವರು ಸಾಗರ ಕ್ಷೇತ್ರದಾದ್ಯಂತ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಕ್ಷೇತ್ರದಾದ್ಯಂತ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆಯೇ ಹೊರತು ಯಾವುದೇ ಪಕ್ಷಗಳಲ್ಲಿ ಗುರುತಿಸಿಕೊಂಡವರಲ್ಲ…

Read More

ರಿಪ್ಪನ್‌ಪೇಟೆ : ಪದವಿ‌ ಕಾಲೇಜಿನ ಆವರಣದಲ್ಲಿ ಜೇನು ದಾಳಿ – ಹಲವು ವಿದ್ಯಾರ್ಥಿಗಳಿಗೆ ಗಾಯ|Bee attack

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಅವರಣದಲ್ಲಿ ಜೇನುನೊಣಗಳು ದಾಳಿ ಮಾಡಿದ್ದರಿಂದ ಸುಮಾರು 13 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಇಂದು ಬೆಳಿಗ್ಗೆ ಜೇನುಹುಳುಗಳು ದಾಳಿ ಮಾಡಿದ್ದರಿಂದ 13 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿರದಿದ್ದರೂ, ಅವರಲ್ಲಿ ಹಲವರಿಗೆ ಜೇನುನೊಣಗಳು ಕುಟುಕಿದ ಜಾಗದ ಸುತ್ತಲೂ ಭಾರಿ ಊತ ಕಂಡುಬಂದಿದೆ. ಆಗಿದ್ದೇನು? ಕಳೆದೊಂದು ತಿಂಗಳಿನಿಂದ ಕಾಲೇಜಿಗೆ…

Read More

ಸಿಗಂದೂರು ಬಳಿ ಪ್ರವಾಸಿಗರ ಬಸ್ ಪಲ್ಟಿ – ಓರ್ವ ಸಾವು|accident

ಸಾಗರ :  ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆಂದು ಬಂದಿದ್ದ ಪ್ರವಾಸಿಗರ ಬಸ್ ಪಲ್ಟಿಯಾಗಿ ತೋಟಕ್ಕೆ ಬಿದ್ದಿದ್ದು ಪ್ರವಾಸಿಗರಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ವೃದ್ದೆ ಸಾವನ್ನಪ್ಪಿರುವಾಗಿದೆ ತಿಳಿದುಬಂದಿದೆ. ಇಲ್ಲಿನ ಸಂಕಣ್ಣ ಶಾನುಬೋಗ್​ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸಕೊಪ್ಪ ತಿರುವಿನಲ್ಲಿ ಘಟನೆ ಸಂಭವಿಸಿದೆ.  ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಸ್ ರಸ್ತೆ ಪಕ್ಕ ಇಳಿಜಾರಿನಲ್ಲಿದ್ದ ತೋಟಕ್ಕೆ ಉರುಳಿಸಿದೆ.  ಚಾಲಕ ನಿದ್ರೆ ಮಂಪರಿನಲ್ಲಿದ್ದಿದ್ದು ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ತಿರುವಿನಲ್ಲಿ ವಾಹನದ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯ…

Read More