w
Headlines
Home » ಹೊಸನಗರ : ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ ವಶ – ಕಾರು ಜಪ್ತಿ , ಆರೋಪಿ ಪರಾರಿ!!????|EXCISE

ಹೊಸನಗರ : ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ ವಶ – ಕಾರು ಜಪ್ತಿ , ಆರೋಪಿ ಪರಾರಿ!!????|EXCISE

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ನಿವಣೆ ಬಳಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು(liquor) ವಶಕ್ಕೆ ತೆಗೆದುಕೊಂಡಿದ್ದು ಆರೋಪಿ ಪರಾರಿಯಾಗಿದ್ದಾನೆ‌.




ನಿವಣೆ ಗ್ರಾಮದ ಅಗಸನಗದ್ದೆ ಸಮೀಪ ಅಕ್ರಮವಾಗಿ ಓಮ್ನಿ ವಾಹನದಲ್ಲಿ ಸುಮಾರು 198.72 ಲೀಟರ್ ಮದ್ಯವನ್ನು ಸಾಗಾಟ ನಡೆಸುತ್ತಿದ್ದು ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿಯ ಅಬಕಾರಿ ನಿರೀಕ್ಷಕರಾದ ಅಮಿತ್‌ಕುಮಾರ್‌ರವರ ನೇತೃತ್ವದಲ್ಲಿ ಅಕ್ರಮ ಮದ್ಯ ಹಾಗೂ ಓಮ್ನಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಓಮ್ನಿ ಡ್ರೈವರ್ ಪರಾರಿಯಾದ ಘಟನೆ ವರದಿಯಾಗಿದೆ.




ವಿಧಾನಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ರವಿಶಂಕರ್ ಅಬಕಾರಿ ಆಯುಕ್ತರು ಬೆಂಗಳೂರುರವರ ನಿರ್ದೇಶನದಲ್ಲಿ ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗದ ನಾಗರಾಜಪ್ಪ ಟಿ, ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಆರ್ ಮತ್ತು ಜಿಲ್ಲಾ ದಂಡಾಧಿಕಾರಿಗಳು ಅಬಕಾರಿ ಉಪ ಆಯುಕ್ತರಾದ ಕ್ಯಾಪ್ಟನ್ ಅಜಿತ್‌ಕುಮಾರ್ ಅಬಕಾರಿ ಉಪ ಅಧೀಕ್ಷಕರಾದ ಶಿವಪ್ರಸಾದ್ ಹಾಗೂ ತಹಶೀಲ್ದಾರ್‌ಅಮೃತ್ ಆತ್ರೇಶ್‌ರವರ ಮಾರ್ಗದರ್ಶನದಲ್ಲಿ ಖಚಿತ ವರ್ತಮಾನದ ಮೇರೆಗೆ ಏಪ್ರಿಲ್ 4ನೇ ಮಂಗಳವಾರ ಬೆಳಿಗ್ಗೆ ಕೆಎ-30 ಎಂ 0563 ನೊಂದಣಿ ಸಂಖ್ಯೆ ಹೊಂದಿದ ಮಾರುತಿ ಸುಜುಕಿ ಓಮ್ನಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 81,020 ರೂಪಾಯಿ ಬೆಲೆ ಬಾಳುವ ಭಾರತೀಯ ತಯಾರಿಕಾ ಮದ್ಯ 198.72 ಲೀ. ದೊರೆತಿದ್ದು ಪ್ಲೆಯಿಂಗ್ ಸ್ಟ್ಯಾಂಡ್-07ಸಿ ಹುಂಚ ಹೋಬಳಿ ತಂಡದ ಮುಖ್ಯಸ್ಥರು ಮತ್ತು ಸದಸ್ಯರ ಸಹಕಾರದೊಂದಿಗೆ ವಾಹನ ಮತ್ತು ವಾಹನದ ಮಾಲೀಕರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಅಮಿತ್‌ಕುಮಾರ್ ಎಸ್.ಎಂ ಅಬಕಾರಿ ನಿರೀಕ್ಷಕರು ತೀರ್ಥಹಳ್ಳಿ ಉಪವಿಭಾಗರವರು ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ವಶಪಡಿಸಿಕೊಂಡಿರುವ ಮದ್ಯ ಮತ್ತು ವಾಹನ ಒಟ್ಟು ಮೌಲ್ಯ 3,31,020 ರೂ‌. ಆಗಿದ್ದು ದಾಳಿಯಲ್ಲಿ ಅಬಕಾರಿ ಕಾನ್ಸ್‌ಟೇಬಲ್ ಮಲ್ಲಿಕ್ ಕೆ.ಜಿ, ರಾಕೇಶ್ ಎಂ.ಕೆ, ಶಕೀಲ್ ಅಹಮದ್, ವಾಹನ ಚಾಲಕ ಅಮಿತ್ ಬಿ.ಕೆ ಮತ್ತು ಪ್ರಸನ್ನರವರು ಪಾಲ್ಗೊಂಡಿದ್ದರು.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.