ಸಮಾಜದಲ್ಲಿ ಸಮಾನತೆ ತರುವುದೇ ಕಾಂಗ್ರೇಸ್ ಸಿದ್ದಾಂತ -ಕಾಗೋಡು ತಿಮ್ಮಪ್ಪ|congress

ಸಮಾಜದಲ್ಲಿ ಸಮಾನತೆ ತರುವುದೇ ಕಾಂಗ್ರೇಸ್ ಸಿದ್ದಾಂತ’’ ಕಾಗೋಡು ತಿಮ್ಮಪ್ಪ

ರಿಪ್ಪನ್‌ಪೇಟೆ;-ಹೆಣ್ಣು ಮಗಳು ಸ್ವತಂತ್ರವಾಗಿ ವಿಚಾರವಂತರಾಗಿ ಬದುಕುವಂತ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕು,ಗೇಣಿದಾರರಿಗೆ ಭೂ ಒಡೆತನ ಕೊಡುವುದು ಹೇಗೋ ಹಾಗೆ ಸಮಾಜದಲ್ಲಿ ಹೆಣ್ಣು ಮಗಳಿಗೆ ಪಾಲುದಾರಳು ಆ ಕಾರಣ ಹೆಣ್ಣು ಮಗಳಿಗೆ ಸಮಾನವಾಗಿ ಅಸ್ತಿ ಕೊಡಬೇಕು ಎಂಬ ತತ್ವವನ್ನು ಜಾರಿಗೊಳಿಸಿದ್ದು ಕಾಂಗ್ರೇಸ್ ಪಕ್ಷ ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳೇ ಪ್ರಭುಗಳು. ಪ್ರಜಾತಂತ್ರ ವ್ಯವಸ್ಥೆಗೆ ನೀವೇ ರಾಜರಾಗುತ್ತೀರಾ ಅಧೀನಾರಾಗುತ್ತೀರಾ  ಆ ನಿಟ್ಟಿನಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಿಷ್ಟಗೊಳಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.




ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಕಾಂಗ್ರೇಸ್ ಘಟಕದವರು ಅಯೋಜಿಸಲಾದ “ಕಾಂಗ್ರೇಸ್ ಗ್ಯಾರಂಟಿ ಕಾರ್ಡ್’’ ವಿತರಣೆ ಮಾಡಿ ಮಾತನಾಡಿ ರಾಷ್ಟçದ ಭವಿಷ್ಯವನ್ನು ನಿರ್ಧರಿಸುವ  ಚುನಾವಣೆ ನೀವೇ ದೇವರುಗಳು ನೀವೇ ಆಶೀರ್ವಾದ ಮಾಡಬೇಕು.ಸಮಾನತೆಯ ತತ್ವಕ್ಕೆ ಅರ್ಥ ಬರಬೇಕು.ಪ್ರತಿ ಮನೆಗೆ ಇಂತಹ ಭರವಸೆ  ಮುಟ್ಟಿಸುವ ಮೂಲಕ ಮಾತಯನ್ನು ನೆನಪಿನಲ್ಲಿ ಹೃದಯದಲ್ಲಿ ಇಟ್ಟುಕೊಂಡು ಪ್ರತಿಯೊಬ್ಬರು ಬದುಕುವಂತಹ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿಯೊಬ್ಬರು ದುಡಿದು ತಿನ್ನುವಂತಹ ಯೋಜನೆಯನ್ನು ಜಗತ್ತಿನ ಯಾವುದೇ ರಾಷ್ಟç ಮಾಡಿಲ್ಲ ಆ ಯೋಜನೆಯನ್ನು ಜಾರಿಗೊಳಿಸಿದ್ದು ಕಾಂಗ್ರೇಸ್  ಅಂತಹ ಜನಹಿತ ಕಾರ್ಯಕ್ರಮವನ್ನು  ಮೂಲೆಗುಂಪು ಮಾಡಿದ್ದಾರೆಂದು ತೀವ್ರವಾಗಿ ಖಂಡಿಸಿದ ಅವರು ಮುಂದಿನ ಚುನಾವಣೆಯಲ್ಲಿ  ಬಡಜನರ ಪರವಾಗಿ ಹಸಿವು ಮುಕ್ತ ದೇಶದ ತತ್ವ ಸಿದ್ದಾಂತವನ್ನು ಅನುಷ್ಟಾನಗೊಳಿಸಿರುವ ಕಾಂಗ್ರೇಸ್ ಪಕ್ಷವನ್ನು ಈ ಸಮಾಜದಲ್ಲಿ ಸಮಾನತೆ ಪ್ರತಿಯೊಬ್ಬ ವ್ಯಕ್ತಿಗೂ ಬರಬೇಕು ಆ ಚಿಂತನೆಯಿಂದ ಚುನಾವಣೆ ಸವಾಲಾಗಿದೆ  ಸವಾಲಯನ್ನು ಸ್ವೀಕರಿಸಿ ತತ್ವಗಳು ಕಾರ್ಯಕ್ರಮನಗಳು ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು ಜಾತಿ ಬೇದ ಭಾವನೆ ಇಲ್ಲದೆ ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೆ ಎಲ್ಲರನ್ನು ಸಮಾನವಾಗಿ ಕಾಣುವುದರೊಂದಿಗೆ ಚುನಾವನೆಯಲ್ಲಿ ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತಕ್ಕೆ ತಮ್ಮ ಬೆಂಬಲ ನೀಡಿ ಎಂದು ಮನವಿ ಮಾಡಿದರು.




ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ ಮತದಾರರೇ ದೇವರು ಅವರ ಪ್ರೀತಿ ವಿಶ್ವಾಸವನ್ನು ನಾನು ಸದಾ ಬಯಸುತ್ತೇನೆ ಅಭಿವೃದ್ದಿಯನ್ನು ಯಾರು ಶಾಸಕರಾದರೂ ಮಾಡಲೇಬೇಕು……..! ನನ್ನ ಬಗ್ಗೆ  ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಇತ್ತೀಚೆಗೆ ಬಹಿರಂಗ ಸಭೆಯೊಂದರಲ್ಲಿ  ನನಗೆ ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ಸೀಗುವುದಿಲ್ಲ ಎಂದು ಹೇಳುತ್ತಾನೆ.ನನಗೆ ಟಿಕೇಟ್ ಸಿಗುವುದಿಲ್ಲ ಎಂದು ಹೇಳಲು ಇವರ್ಯಾರಿ ಟಿಕೇಟ್ ಕೊಡಲು.
ಕಳೆದ  ನಾಲ್ಕವರೆ ವರ್ಷದಿಂದ ಏನೂ ಮಾಡದ ಈ ಕ್ಷೇತ್ರ ಶಾಸಕ ಹರತಾಳು ಹಾಲಪ್ಪ ಚುನಾವಣೆಗೆ ಮೂರು ನಾಲ್ಕು ತಿಂಗಳಿರುವಾಗ ಬಹಳ ಅಭಿವೃದ್ದಿ ಮಾಡಿದ್ದೇನೆಂದು ಬೀಗುತ್ತಿರುವ ಮೀಸ್ಟರ್ ಹಾಲಪ್ಪ 
ನನ್ನ ಕಾಲಾವಧಿಯಲ್ಲಿ ಹೊಸನಗರದ ಮಿನಿ ವಿಧಾನಸೌಧ.ಲೋಕೋಪಯೋಗಿ ಇಲಾಖೆ ಕಟ್ಟಡ.ಪೋಲೀಸ್ ಠಾಣೆ,ಅಗ್ನಿಶ್ಯಾಮಕ ದಳದ ಕಟ್ಟಡ ಮತ್ತು ಬಸ್ ನಿಲ್ದಾಣ.ಕಾಲೇಜ್ ಕಟ್ಟಡ ಪ್ರಥಮ ದರ್ಜೆ ಕಾಲೇಜ್ ಮಂಜೂರು ಹೀಗೆ ಅಭಿವೃದ್ದಿಗಳ ಪಟ್ಟಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಮಾಜಿ ಶಾಸಕ ಬೇಳೂರು ಹೊಸನಗರದ ಪಟ್ಟಣ ಪಂಚಾಯ್ತಿ ಕಟ್ಟಡ ಮಾಡದೇ ಬಿಟ್ಟಿದೇ ಅದನ್ನು ಮಾಡಲಾಗದೇ ಇರುವುದರ ಬಗ್ಗೆ ಬಹಿರಂಗ ಸವಾಲು ಹಾಕಿದರು.

ಇನ್ನೂ ಸಾಗರಕ್ಕೆ ಶರಾವತಿಯಿಂದ 70 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಟಾನಗೊಳಿಸಿದ್ದೆ ಆದರೇ ಜಲಜೀವನ ಯೋಜನೆಯಡಿ ಈ ವರಗೂ ಗ್ರಾಮೀಣ ಜನರಿಗೆ ನೀರು ಕೊಡಲಾಗಿಲ್ಲದ ಈ ಶಾಸಕರು ಏನು ಅಭಿವೃದ್ದಿ ಮಾಡಿದ್ದಾರೆಂದು  ಬಹಿರಂಗವಾಗಿ ಕೇಳಿ ನಾನು ಕನ್ನಡಕ ಮತ್ತು ಒಳ್ಳೆಯ ಕಲರಪುಲ್ ಷರಟು ಹಾಕಿಕೊಂಡು ಶುಭ ಸಮಾರಂಭಗಳಿಗೆ  ಹೋದರೆ ಇವನಿಗೇಕೆ ಹೊಟ್ಟೆ ಉರಿ ಹೋದಲ್ಲಿ -ಬಂದಲ್ಲಿ ನನ್ನ ಬಗ್ಗೆ ಟೀಕಿಸುವ ಹರತಾಳು ಹಾಲಪ್ಪಗೆ  ತಿನ್ನಲು ಅಗುವುದಿಲ್ಲ ತಿನ್ನುವವರನ್ನು ಕಂಡರೂ ಅಗುವುದಿಲ್ಲ ಎಂದರೇ ಹೇಗೆ ……………..! ಎಂದು ಹೇಳಿ ನಮ್ಮ ಗುರುಗಳಾದ ಮಾಜಿ ಮುಖ್ಯಮಂತ್ರಿ ಜನನಾಯಕ ಬಂಗಾರಪ್ಪಾಜೀ ಹೇಳಿಕೊಟ್ಟಿದ್ದಾರೆ ಅಭಿವ್ರಧ್ದಿ ಮೂಲ ಮಂತ್ರವಲ್ಲ ಮೊದಲು ಜನರ ವಿಶ್ವಾಸಗಳಿಸು ನಂತರ ಅಭಿವೃದ್ದಿ ತನ್ನಿಂದ ತಾನೇ ಅಗುತ್ತದೆಂದು. ಹೇಳುತ್ತಾ  ಬಹಿರಂಗ ಸಭೆಯಲ್ಲಿ ಗುರು ಬಂಗಾರಪ್ಪ ರನ್ನು ನೆನೆದು ಕಣ್ಣೀರು ಹಾಕಿದರು.




ತಾಲ್ಲೂಕ್ ಬ್ಲಾಕ್ ಕಾಂಗ್ರೇಸ್ ಘಟಕದ ಅಧ್ಯಕ್ಷ ಬಿ.ಜಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೇಸ್ ಮುಖಂಡೆ ಡಾ.ರಾಜಾನಂದಿನಿ,ಸುದೀರ್‌ಕುಮಾರ್ ಮುರೊಳಿ, ಕಲಗೋಡು ರತ್ನಕರ್,ಬಂಡಿರಾಮಚಂದ್ರ,ಶ್ವೇತಾ ಆರ್ ಬಂಡಿ, ಕೆರೆಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಆಶೀಫ್,ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ,ಕೆಂಚನಾಲ ಗ್ರಾ.ಪಂ.ಅಧ್ಯಕ್ಷ ಉಬೇದುಲ್ಲಾ ಷರೀಫ್,ಅರಸಾಳು ಗ್ರಾ.ಪಂ.ಅಧ್ಯಕ್ಷ.ಉಮಾಕರ್,ಎನ್.ಚಂದ್ರೇಶ್, ಸಾಕಮ್ಮ,ಸೋಮಶೇಖರ್ ಲಾವಿಗೆರೆ. ಮಂಡಗಳಲೆ,ರವೀಂದ್ರ ಕೆರೆಹಳ್ಳಿ ಗಣಪತಿ,ಉಲ್ಲಾಸ್,ರಮೇಶ್ ಫ್ಯಾನ್ಸಿ,ಶ್ರೀಧರ್ ಸ್ಥಳೀಯ ಕಾಂಗ್ರೇಸ್  ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.



Leave a Reply

Your email address will not be published. Required fields are marked *