Headlines

ರಿಪ್ಪನ್‌ಪೇಟೆಯ ಯೋಧ ಸಂದೀಪ್ ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದಾಗ ಸಾವು|Rpet

ರಿಪ್ಪನ್‌ಪೇಟೆ : ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.




ಮಣಿಪುರದ ಅಸ್ಸಾಂ ರೈಫಲ್ಸ್ ನಲ್ಲಿ ಕಾರ್ಯ ನಿರ್ವಹಿಸುತಿದ್ದ ಸಂದೀಪ್ ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರಾದ ವಿನೋದಮ್ಮ ರವರ ಪುತ್ರರಾಗಿದ್ದು ಕಳೆದ 2 ವರ್ಷದಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದರು.




ನಕ್ಸಲರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಸಂದೀಪ್ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದೆ ಆದರೆ ಬಲ್ಲ ಮೂಲಗಳ ಪ್ರಕಾರ  ಇಂದು ಮುಂಜಾನೆ  ತಾನು ಕರ್ತವ್ಯ ನಿರ್ವಹಿಸುತಿದ್ದ ಪ್ರದೇಶದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದಾರೆ ಎನ್ನಲಾಗುತಿದ್ದು ಇದರ ಬಗ್ಗೆ ಇನ್ನು ಸ್ಪಷ್ಟನೆ ದೊರತಿಲ್ಲ.

ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.




About The Author

Leave a Reply

Your email address will not be published. Required fields are marked *