w
Headlines
Home » ನಾಳೆ(22-03-2023) ಬೆಳಿಗ್ಗೆ ರಿಪ್ಪನ್‌ಪೇಟೆಗೆ ಮೃತ ಯೋಧ ಸಂದೀಪ್ ಪಾರ್ಥೀವ ಶರೀರ – ವಿನಾಯಕ ವೃತ್ತದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ನಾಳೆ(22-03-2023) ಬೆಳಿಗ್ಗೆ ರಿಪ್ಪನ್‌ಪೇಟೆಗೆ ಮೃತ ಯೋಧ ಸಂದೀಪ್ ಪಾರ್ಥೀವ ಶರೀರ – ವಿನಾಯಕ ವೃತ್ತದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಅಸ್ಸಾಂ ರಾಜ್ಯದ ಮಣಿಪುರದಲ್ಲಿ ಮರಣವನ್ನಪ್ಪಿದ ಯೋಧ ಸಂದೀಪ್ ಪಾರ್ಥೀವ ಶರೀರ ನಾಳೆ ಬೆಳಿಗ್ಗೆ 06 ಗಂಟೆಗೆ ರಿಪ್ಪನ್‌ಪೇಟೆಗೆ ಆಗಮಿಸಲಿದ್ದು ಈಗಾಗಲೇ ವಿಶೇಷ ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂದೀಪ್ ಪಾರ್ಥೀವ ಶರೀರ ತಲುಪಿದೆ.




ಜಿಲ್ಲಾಡಳಿತದ ಆಂಬ್ಯುಲೆನ್ಸ್ ಮೂಲಕ ನಾಳೆ ಬೆಳಿಗ್ಗೆ 6 ಗಂಟೆಗೆ ನೇರವಾಗಿ ಶಬರೀಶನಗರದ ಸ್ವಗೃಹಕ್ಕೆ ಪಾರ್ಥೀವ ಶರೀರ ಆಗಮಿಸಲಿದ್ದು ಮನೆಯಲ್ಲಿ ವಿಧಿವಿಧಾ‌ನಗಳನ್ನು ನೆರವೇರಿಸಿ 8.30 ಕ್ಕೆ ಮೆರವಣಿಗೆಯ ಮೂಲಕ ತೆರಳಿ ವಿನಾಯಕ ವೃತ್ತದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


ನಂತರ ವಿನಾಯಕ ವೃತ್ತದಿಂದ ತೀರ್ಥಹಳ್ಳಿ ರಸ್ತೆಯ ಗಾಂದಿನಗರದ ಹಿಂದೂ ರುಧ್ರಭೂಮಿಯವರೆಗೂ ಮೆರವಣಿಗೆಯ ಮೂಲಕ ತೆರಳಲಿದ್ದು ನಂತರ ಅಗಲಿದ ಯೋಧನ ಅಂತ್ಯಕ್ರಿಯೆ ಹಿಂದೂ ರುಧ್ರಭೂಮಿಯಲ್ಲಿ ನಡೆಯಲಿದೆ.




ಹಲವಾರು ಬಾರಿ ಆಯ್ಕೆಯಾಗದೇ ಇದ್ದರೂ ಪಟ್ಟು ಹಿಡಿದು ಸೈನ್ಯಕ್ಕೆ ಸೇರಿ ದೇಶ ಕಾಯಲು ಹೊರಟ ಯುವಕನ ಅಕಾಲಿಕ ಮರಣವು ರಿಪ್ಪನ್‌ಪೇಟೆಯ ಜನತೆಯನ್ನು ದಿಗ್ಬ್ರಮೆಗೊಳಿಸಿದ್ದು ಪಟ್ಟಣದಲ್ಲಿ ನೀರವ ಮೌನ ನೆಲೆಸಿದೆ.

ನಮ್ಮನೆಲ್ಲಾ ಅಗಲಿದ ಯೋಧ ಸಂದೀಪ್ ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯೋಧನ ಆತ್ಮಕ್ಕೆ ಭಾವಪೂರ್ಣ ವಿಧಾಯ ಹೇಳೋಣ…



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.