ಜೈನ ಮುನಿವರ್ಯರ ತತ್ವ ಪಾಲನೆ ಇಂದಿನ ಯುವಸಮೂಹಕ್ಕೆ ಸ್ಪೂರ್ತಿದಾಯಕವಾಗಿರಲಿ – ಡಾ. ಡಿ ವೀರೇಂದ್ರ ಹೆಗ್ಗಡೆ|hombuja

ಅಹಿಂಸಾ ತತ್ವವನ್ನು ಬೋಧನೆ ಮಾಡಿ ಅಹಿಂಸಾ ತತ್ವದಲ್ಲೇ ಧರ್ಮವನ್ನು ಕಟ್ಟಿ ಇಡೀ ಪ್ರಪಂಚಕ್ಕೆ ಸಾತ್ವಿಕ ತತ್ವ ಉಪದೇಶಗಳನ್ನು ನೀಡಿದ ಕೀರ್ತಿ ಜೈನ ಧರ್ಮಕ್ಕಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಂಬುಜ ಜೈನ ಮಠದಲ್ಲಿ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ  ಜಿನ ದತ್ತರಾಯ ಸಭಾ ಮಂಟಪ ಅರ್ಹದ್ದಾಸ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಪೂಜ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.




12 ವರ್ಷಗಳಲ್ಲಿ ಹೊಂಬುಜ ಜೈನ ಮಠದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಏಕಾಗ್ರತೆಯಿಂದ ಶ್ರೀಮಠದ ಏಳಿಗೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದು ಶ್ರೀಮಠದ ಜಗನ್ಮಾತೆ ಪದ್ಮಾವತಿ ದೇವಿಯ ದೈವಿಕ ಶಕ್ತಿಯಿಂದ ಶ್ರೀಮಠ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದರು.

ಚಾರಿತ್ಯದ ಕಡೆ ಹೆಚ್ಚು ಒತ್ತು ನೀಡುವುದರೊಂದಿಗೆ ಮೂಲ ತತ್ವವನ್ನು ಉಳಿಸುವುದು ಸಮಾಜದ ಗೌರವವನ್ನು ಕಾಪಾಡುವುದು.ಸದಾಚಾರ ಸದ್ವನಿಯೋಗ ದೂರದೃಷ್ಟಿಯೊಂದಿಗೆ ಮುನಿವರ್ಯರ ತತ್ವಪರಿಪಾಲನೆಯೊಂದಿಗೆ ಅವರ ಮಾರ್ಗದರ್ಶನ ಇಂದಿನ ಯುವಜನಾಂಗಕ್ಕೆ ಸ್ಪೂರ್ತಿದಾಯಕವಾಗಲಿ,ಪ್ರಾಣಿ ಪಕ್ಷಿಗಳಲ್ಲಿ ಜಾತಿ ಸ್ವಭಾವ ಇಲ್ಲದೆ ನಮ್ಮ ಧರ್ಮ ಅಚಾರ-ವಿಚಾರ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜವನ್ನು ಎಚ್ಚರಿಸುವ ಕಾರ್ಯದಲ್ಲಿ ಮುನಿವರ್ಯರ ಕಾರ್ಯ  ಪ್ರೇರಣೆಯಾಗಲಿ ಎಂದರು.


ಕರ್ನಾಟಕ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಭೋಗ ಜೀವನದಲ್ಲಿ ಆಸೆ ಇಲ್ಲದೆ ತ್ಯಾಗ ಜೀವನದಲ್ಲಿ ನಂಬಿಕೆ ಇಟ್ಟ ಧರ್ಮ ಜೈನ ಧರ್ಮವಾಗಿದೆ. ನಮ್ಮ ಪೂರ್ವಜರು ಜೈನಧರ್ಮಕ್ಕೆ ಸೇರಿದವರಾಗಿದ್ದಾರೆ ಹಾಗಾಗಿ ಇಂದಿಗೂ ಪೂಜೆ ಪುನಸ್ಕಾರಗಳಲ್ಲಿ ಜೈನ ಧರ್ಮದ ಶಾಸ್ತ್ರ, ಪರಂಪರೆಯೊಂದಿಗೆ ದೇವರಿಗೆ ಎಡೆ ಇಡುವುದು ವಾಡಿಕೆ ಆಗಿದೆ ಎಂದರು.

ಸಂಸದ ಬಿ ವೈ ರಾಘವೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಜೈನ ಇತಿಹಾಸದ ಕುರುಹುಗಳು ದೊರೆಯುತ್ತಿದ್ದು ದೇಶದ ಹಿರಿಮೆ ಗರಿಮೆ ಬಗ್ಗೆ ಸ್ವಾಮಿ ವಿವೇಕಾನಂದರು ಅಮೇರಿಕಾ ನಗರದ ಚಿಕಾಂಗೋ ನಗರದಲ್ಲಿ  ತಮ್ಮ ಭಾಷಣದಲ್ಲಿ ಹೆಚ್ಚಿಸಿದ್ದು ಹೆಗ್ಗಳಿಕೆ ಅದರಂತೆ  ಕೊರೋನಾ ಸಂದರ್ಭದಲ್ಲಿ ಅಮೇರಿಕಾ ಸೇರಿದಂತೆ ಚೀನಾ ಇನ್ನಿತರ ರಾಷ್ಟಗಳಲ್ಲಿ ಸಾವು ನೋವುಗಳು ಉಂಟಾಗಿದ್ದರೂ ಕೂಡಾ ಭಾರತ ದೇಶದಲ್ಲಿ ಸಾವು ನೋವು ನಡೆಯದಂತೆ ಅಗಿರುವುದು ಸಾಧು ಸಂತರ ತಪೋಶಕ್ತಿಯ ಮಹಿಮೆ ಎಂದರು.




ರಾಷ್ಟ್ರ ಸಂತ ಆಚಾರ್ಯ ಶ್ರೀ 1008 ಗುಣದರನಂದಿ ಮುನಿ ಮಹಾರಾಜರು ಹಾಗೂ ವಾತ್ಸಲ್ಯ ಮೂರ್ತಿ ಮುನಿಶ್ರೀ 108 ಪುಣ್ಯಸಾಗರ ಮಹಾ ರಾಜರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹೋಂಬುಜ ಜೈನ ಮಠದ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗಿರಿ ಕ್ಷೇತ್ರದ ಶ್ರೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಸಿಂಹನ ಗದ್ದೆ ಕ್ಷೇತ್ರದ ಶ್ರೀ ಲಕ್ಷ್ಮೀ ಸೇನಾ ಭಟ್ಟಾರಕ ಮಹಾ ಸ್ವಾಮೀಜಿ, ಆರತಿಪುರ ಕ್ಷೇತ್ರದ ಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಇನ್ನು ಮುಂತಾದವರು ಉಪಸಿತರಿದ್ದರು .

ಕಾರ್ಯಕ್ರಮದಲ್ಲಿ ಜೈನ ತೀರ್ಥಂಕರರ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಲಾಯಿತು.




ರತ್ನಕುಮಾರ್ ಸ್ವಾಗತಿಸಿದರು. ಡಾ.ಮಾಲತಿ ಹೆಗ್ಡೆ ನಿರೂಪಿಸಿದರು.

Leave a Reply

Your email address will not be published. Required fields are marked *