ಮಲೆನಾಡಿನಲ್ಲೊಂದು ಸೋರುತ್ತಿರುವ ಸರ್ಕಾರಿ ಪ್ರೌಡ ಶಾಲೆ – ಮಳೆ ಬಂದರೆ ತರಗತಿಗಳಲ್ಲಿ ಅರಳುತ್ತವೆ ಬಣ್ಣ ಬಣ್ಣದ ಛತ್ರಿಗಳು
ರಿಪ್ಪನ್ಪೇಟೆ : ಇಲ್ಲಿನ ಚಿಕ್ಕಜೇನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಳೆ ಬಂದರೇ ಸಾಕು ವಿದ್ಯಾರ್ಥಿಗಳು ತರಗತಿ ಕೊಠಡಿಯಲ್ಲಿ ಬಣ್ಣ ಬಣ್ಣದ ಛತ್ರಿ ಹಿಡಿದು ಕುಳಿತುಕೊಳ್ಳುವುದರೊಂದಿಗೆ ಪಾಠ ಪ್ರವಚನ ಕೇಳುವ ದುಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಾಂತರ ಹಣ ವ್ಯಯ ಮಾಡುತ್ತಿದ್ದು ಶಾಲಾ ಕಾಲೇಜ್ಗಳ ಕಟ್ಟಡ ನಿರ್ಮಾಣಕ್ಕೂ ಹೆಚ್ಚು ಅನುದಾನ ನೀಡುತ್ತಿದ್ದರೂ ಕೂಡಾ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ ಮಾತ್ರ ಕಣ್ಣಿಗೆ ಕಂಡಿಲ್ಲವೇನೂ ಎಂಬ ಅನುಮಾನ ಕಾಡುವಂತಾಗಿದೆ. 2006 ರಲ್ಲಿ…