ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಇಂದು ಹೊಸನಗರ ಸಮೀಪದ ಇಟ್ಟಕ್ಕಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹೊಸನಗರ ತಾಲೂಕಿನ ಬಿಳ್ಳೋಡಿ ಗ್ರಾಮದ ಮತ್ತಿಗ ನಿವಾಸಿ ಮಂಗಳ (36) ಮೃತ ಮಹಿಳೆಯಾಗಿದ್ದು ತನ್ನ ಗಂಡನೊಂದಿಗೆ ಕಳೆದ ಎರಡ್ಮೂರು ವರ್ಷಗಳಿಂದ ತಾಯಿ ಮನೆ ಮತ್ತಿಗ ಗ್ರಾಮದಲ್ಲಿ ವಾಸ ಮಾಡುತ್ತಿದ್ದರು.
ಮಾನಸಿಕವಾಗಿ ದುರ್ಬಲರಾಗಿದ್ದ ಈಕೆ ನ.03 ರಂದು ಮಧ್ಯಾಹ್ನ 2:30ರ ಸುಮಾರಿಗೆ ಬಿಳ್ಳೋಡಿ ಗ್ರಾಮದಿಂದ ಕಾಣೆಯಾಗಿದ್ದರು. ಸಂಬಂಧಿಕರು ಎಲ್ಲ ಕಡೆ ಹುಡುಕಿದರು ಪತ್ತೆಯಾಗದೆ ಇದ್ದು ನಿನ್ನೆ ಹೊಸನಗರ ಠಾಣೆಯಲ್ಲಿ ಮೃತಳ ಪತಿ ನಾಗರಾಜ್ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಇಂದು ಬೆಳಗ್ಗೆ ಇವರ ಮನೆಯಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಇಟ್ಟಕ್ಕಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
		 
                         
                         
                         
                         
                         
                         
                         
                         
                         
                        