ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ಬಾಣಿಗ ಬಸ್ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಮಾರುತಿಪುರ ಗ್ರಾಮ ಪಂಚಾಯಿತಿಯ ಹೊಸಕೆಸರೆ ಛತ್ರಳ್ಳಿಯ ಚಾಲಕ ಪ್ರತಾಪ್ ಹಾಗೂ ಮೇಲಿನಸಂಪಳ್ಳಿ ಗ್ರಾಮದ ಅಭಿಷೇಕ್ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ಹಿನ್ನಲೆ:
ಹೊಸನಗರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಪಟಳವಾಗುವುದನ್ನು ತಪ್ಪಿಸಲು ಅದೇ ದಾರಿಯಲ್ಲಿ ಬಟ್ಟೆಮಲ್ಲಪ್ಪ, ಹರಿದ್ರಾವತಿ, ಹೆಬೈಲು, ಪುರಪೆಮನೆ ಭಾಗಗಳಲ್ಲಿ ತಮ್ಮ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಿ ವಾಪಾಸಾಗುತ್ತಿದ್ದ ಹೊಸನಗರ ಠಾಣಾ ಪೊಲೀಸರಾದ ಸುರೇಶ ಡಿ ಜಿ ಹಾಗೂ ಬಿ ಯು ಅಲ್ಫಾಜ್ ರವರು ಸಾರ್ವಜನಿಕ ಶಾಂತಿಗೆ ಭಂಗವಾಗುತ್ತಿರುವುದನ್ನು ಕಂಡು ಹತ್ತಿರಕ್ಕೆ ಹೋಗಿ ಪರಿಶೀಲಿಸಿದಾಗ ಅವರುಗಳು ಗಾಂಜಾ ಸೇವನೆ ಮಾಡಿ ಮಂಪರಿನಲ್ಲಿದ್ದ ಕಾರಣ ಅವರುಗಳನ್ನು ಹೊಸನಗರ ಠಾಣೆಗೆ ಕರೆದುಕೊಂಡು ಬಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು ವೈದ್ಯಕೀಯ ಪರೀಕ್ಷೆಯಿಂದ ಅವರುಗಳು ಗಾಂಜಾ ಸೇವನೆ ಮಾಡಿದ್ದು ದೃಢಪಟ್ಟಿದ್ದರಿಂದ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಮಾರುತಿಪುರ ಗ್ರಾಮ ಪಂಚಾಯಿತಿಯ ಹೊಸಕೆಸರೆ ಛತ್ರಳ್ಳಿಯ ಚಾಲಕ ಪ್ರತಾಪ್ ಹಾಗೂ ಮೇಲಿನಸಂಪಳ್ಳಿ ಗ್ರಾಮದ ಅಭಿಷೇಕ ಇವರುಗಳ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಗಳಾಗಿದ್ದಾರೆ.