ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆಯ ಕಾಲೇಜಿನ ಮುಂಭಾಗದಲ್ಲಿರುವ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಘಟನೆ ನಡೆದಿದೆ.
ಕಾಲೇಜಿನ ಮುಂಭಾಗದಲ್ಲಿರುವ ಸಂತೋಷ್ ಎಂಬುವವರು ತಮ್ಮ ಮನೆ ಮುಂದೆ ಭಾನುವಾರ ರಾತ್ರಿ ನಿಲ್ಲಿಸಿದ್ದ ಮಹೀಂದ್ರಾ ಸೆಂಚುರೊ (ka 26 X 0533) ಬೈಕ್ ಬೆಳಗಾಗುವುದರೊಳಗೆ ಕಳ್ಳತನವಾಗಿದೆ.
ಭಾನುವಾರ ರಾತ್ರಿ ಸಂತೋಷ್ ಕಲಾಲ್ ತಮ್ಮ ಮನೆಯ ಮುಂದಿನ ಜಗುಲಿಯಲ್ಲಿ ಬೈಕ್ ನ್ನು ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದರು.ಆದರೆ ಬೆಳಿಗ್ಗೆ ಬಂದು ನೋಡುವಾಗ ಬೈಕ್ ನಾಪತ್ತೆಯಾಗಿದೆ.
ಈ ಬಗ್ಗೆ ಬೈಕ್ ಮಾಲೀಕ ಸಂತೋಷ್ ಕಲಾಲ್ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಬೈಕ್ ಪತ್ತೆ ಹಚ್ಚುವಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ.