POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ : ಅದ್ದೂರಿಯಾಗಿ ಜರುಗಿದ ಈದ್ ಮಿಲಾದ್ ಮೆರವಣಿಗೆ|Ripponpet

ರಿಪ್ಪನ್‌ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮತ್ತು ಮೆಕ್ಕಾ ಜುಮ್ಮಾ ಮಸೀದಿ, ತಝೀಝುಲ್ ಇಸ್ಲಾಂ ಮದ್ರಸ.ಮೀಲಾದ್ ಸ್ವಾಗತ ಸಮಿತಿ, ಬದ್ರಿಯಾ ಮದ್ರಸ ಸಮಿತಿ ಎಸ್.ಎಸ್.ಎಫ್,ಮತ್ತು ಎಸ್.ವೈ.ಎಸ್. ಇವರ ಸಹಯೋಗದಲ್ಲಿ ಅಯೋಜಿಸಲಾದ “ಇಲಲ್ ಹಬೀಬ್ ಮೀಲಾದ್’ ಸಮಾರಂಭದ ಅಂಗವಾಗಿ ಇಂದು ಈದ್ ಮಿಲಾದ್ ಮೆರವಣಿಗೆ ನಡೆಯಿತು.


ಹೊಸನಗರ ರಸ್ತೆಯಿಂದ ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯಲ್ಲಿನ ಖಬರ್ ಸ್ಥಾನ್ ವರೆಗೆ ಮುಸಲ್ಮಾನ ಭಾಂಧವರು ಯುವಕರ “ದಫ಼್’’ ಅಕರ್ಷಣೆಯೊಂದಿಗೆ  ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ  ಮೆರವಣಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.


ವಿನಾಯಕ ವೃತ್ತದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರುಗಳಾದ ಮುನೀರ್ ಸಖಾಫ಼ಿ ರವರು ಸಂದೇಶ ಬಾಷಣ ಮಾಡಿದರು.


ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಫಿ, ಮೆಕ್ಕಾ ಮಸೀದಿ ಅಧ್ಯಕ್ಷ ಫ಼ಾಜೀಲ್ ಈದ್‌ ಮೀಲಾದ್ ಸಮಿತಿಯ ಅಧ್ಯಕ್ಷ ಮುಸ್ತಾಫ್ ಕೆ.ಹೆಚ್.ಆರ್,ಮುಖಂಡರಾದ ಆರ್.ಎ.ಚಾಬುಸಾಬ್,ಅಮ್ಮೀರ್ ಹಂಜಾ,ಕೆ.ಹೆಚ್.ಆರ್.ಮೋಣು, ಅಶೀಫ್ ಭಾಷಾ ಸಾಬ್, ಮಹಮ್ಮದ್‌ಸಾಬ್ ಚಾಲಿ,ಸಯೈದ್  ಜಾಫರ್ ಸ್ವಾದಿಕ್, ಮನ್ಸೂರು,ನೂರುಲ್ಲಾ,ಮಹಮ್ಮದ್ ಶಫಿ,ಆರ್.ಎಸ್.ಇಲಿಯಾಸ್,ಆರ್.ಈ ಹಮೀದ್‌ಸಾಬ್,ಹಸನಬ್ಬ,ಹನೀಫ್,ಹಸೈನಾರ್,ಮೂಹಿಯುದ್ದೀನ್ ಜೀರಿಗೆ ಮನೆ,ನಾಸೀರ್,ಅದಂಸಾಬ್,ಅಬೂಬಕರ್ ಸಾಬ್,ಹಂಜಾ, ಅಬ್ದುಲ್ಲಾ,ಚಾಬುಸಾಬ್,ಫಯಾಝ್,ಬಾನುಸಾಬ್,ಬಾಬು,ಆರ್.ಎಸ್.ಶಂಶುದ್ದೀನ್,ಇಬ್ರಾಹಿಂ,ಅಬ್ದುಲ್ ಸಿದ್ದೀಕ್, ಮುಖ್ತಿಯಾರ್‌ಅಹಮದ್ ಸಾಬ್,ಆರ್.ಹೆಚ್ ಮೋಹಿದ್ದೀನ್,ನದೀಮ್ ಹಾಗೂ ಇನ್ನಿತರರಿದ್ದರು

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.