POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಬೆಂಗಳೂರು ಪೊಲೀಸರಿಗೆ ತೀರ್ಥಹಳ್ಳಿಯ ಗಾಂಧಿಚೌಕದಲ್ಲಿ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ನಟೋರಿಯಸ್ ಕ್ರಿಮಿನಲ್ ಮೋಹಿತ್ ಬಂಧನ :

ತೀರ್ಥಹಳ್ಳಿ : ಕೆಲವು ದಿನಗಳ ಹಿಂದೆ ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕದಲ್ಲಿ ಬೆಂಗಳೂರು ಪೊಲೀಸರಿಂದ ತಪ್ಪಿಸಿಕೊಂಡಿದ್ದ ಕೈಮರ ಮೋಹಿತ್  ಎಂಬುವ ನಟೋರಿಯಸ್ ನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.

ತೀರ್ಥಹಳ್ಳಿ ತುಂಗಾ ಕಾಲೇಜು ಸಮೀಪ ಬದನೇ ಹಿತ್ಲು  ನಿವಾಸಿ ಸಕೇಶ್ ಬಿನ್ ಕೃಷ್ಣ ಶೆಟ್ಟಿ ರವರನ್ನು .ಮೋಹಿತ್ ಮತ್ತು ಆತನ ಸಹಚರರಾದ ಉದಯ ಹಾಗೂ ಅನ್ಸರ್ ಎಂಬುವರು ಅಡ್ಡಗಟ್ಟಿ ದರೋಡೆಗೆ ಪ್ರಯತ್ನಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಸಕೇಶ್  ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸರು ಐಪಿಸಿ 386 ,392 ,341 ,504 ,506 ,ರೆಡ್ ವಿತ್ 34 ಅನ್ವಯ ಪ್ರಕರಣವನ್ನು ದಾಖಲು ಮಾಡಲಾಗಿತ್ತು.

ಮೋಹಿತ್ ಮೇಲೆ ಬೆಂಗಳೂರಿನ ಎಸ್ ಅರ್ ಎಸ್ ಲೇಔಟ್  ಮುಂತಾದ ಪೊಲೀಸ್ ಠಾಣೆಗಳಲ್ಲಿ ದರೋಡೆಗೆ ಸಂಚು ಹೆಣ್ಣುಮಕ್ಕಳು ಅನೈತಿಕ ಚಟುವಟಿಕೆಗಳಿಗೆ ಸರಬರಾಜು ಮಾಡುವುದು ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿದ್ದು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುತ್ತಾನೆ.

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮೋಹಿತ್ ನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿ ತೀರ್ಥಹಳ್ಳಿ  ನ್ಯಾಯಾಲಯದ ಎದುರು ಹಾಜರು ಪಡಿಸಿದಾಗ  ನ್ಯಾಯಾಧೀಶರು 17–09–2022ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.