ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಬೇಕು : ಹೊಂಬುಜಾ ಶ್ರೀ

ಹುಂಚ :  ಮನುಷ್ಯನ  ಜೀವನದಲ್ಲಿ ಅನೇಕ ಸಂದರ್ಭಗಳು ಸ್ಪರ್ಧಾತ್ಮಕವಾಗಿ ಬರುವಂಥ ಸನ್ನಿವೇಶಗಳಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಬೇಕು ಎಂದು ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹೇಳಿದರು. ಅವರು ಹೊಸನಗರ ತಾಲೂಕಿನ ಹುಂಚ ಗ್ರಾಮದ ಮಹಾವೀರ್ ಜೈನ್ ಭವನದಲ್ಲಿ ನಡೆದ ನವೋದಯ ಮತ್ತು ಮುರಾರ್ಜಿ ಶಾಲೆ – ಉಚಿತ ತರಬೇತಿ ಶಿಭಿರದಲ್ಲಿ ಭಾಗಿಯಾದ ಎಲ್ಲಾ ಮಕ್ಕಳಿಗೆ ಆಶೀರ್ವದಿಸಿ, ಅಭಿನಂದನಾ ಪತ್ರವನ್ನು ನೀಡಿ ಮಾತನಾಡಿ ಮನುಷ್ಯನ  ಜೀವನದಲ್ಲಿ ಅನೇಕ ಸಂದರ್ಭಗಳು ಸ್ಪರ್ಧಾತ್ಮಕವಾಗಿ ಬರುವಂಥ ಸನ್ನಿವೇಶಗಳಿವೆ….

Read More

ಸಾಗರ ಸಮೀಪದಲ್ಲಿ ಲಾರಿ ಹಾಗೂ ಬೈಕುಗಳ ನಡುವೆ ಭೀಕರ ಅಪಘಾತ : ಓರ್ವ ಸಾವು,ಮೂವರ ಸ್ಥಿತಿ ಗಂಭೀರ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಉಳ್ಳೂರು ಸಮೀಪದ ತಿರುವಿನಲ್ಲಿ  ಲಾರಿ ಹಾಗೂ 2 ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಲಾರಿ ಹಾಗೂ ಸಾಗರದಿಂದ ಶಿವಮೊಗ್ಗಕ್ಕೆ  ಹೊರಟಿದ್ದ  ಬುಲೆಟ್ ಬೈಕ್ ಹಾಗೂ ಪಲ್ಸರ್ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಪಡವಗೂಡು ‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೇಮಾನಂದ ಗೌಡ ಅಸುನೀಗಿದ್ದು ಅವರ ಹೆಂಡತಿ ಹಾಗೂ ಇನ್ನೊಂದು ಬೈಕಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಂಬುಲೆನ್ಸ್ ಮೂಲಕ…

Read More

ಎದೆ ಮಟ್ಟದ ನೀರಿನಲ್ಲಿ ಸಾಗಿ ಅಂತ್ಯಸಂಸ್ಕಾರ – ಗೃಹಸಚಿವರ ಕ್ಷೇತ್ರದಲ್ಲಿ ಏನಿದು ಅವ್ಯವಸ್ಥೆ !

ತೀರ್ಥಹಳ್ಳಿ : ಇಲ್ಲಿ ಮಳೆಗಾಲ ಬಂತೆಂದರೆ ಸಾಕು ಜನರ ಪರದಾಟ ಆರಂಭವಾಗುತ್ತದೆ. ಇಲ್ಲಿ ಮಳೆಗಾಲದಲ್ಲಿ ಬದುಕಲೂ ಕಷ್ಟ.. ಸತ್ತರೂ ಕಷ್ಟ. ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..! ಹೌದು, ಆಶ್ಚರ್ಯವಾದರೂ ಸತ್ಯ. ಇದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದ ಗ್ರಾಮವೊಂದರ ಪರಿಸ್ಥಿತಿ. ತಾಲೂಕಿನ ಹೊಸಹಳ್ಳಿ ಗ್ರಾ.ಪಂಚಾಯತ್ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ಮೃತ ಶರೀರವನ್ನು ಗ್ರಾಮಸ್ಥರು ನೀರು ತುಂಬಿದ ರಸ್ತೆಯಲ್ಲಿ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಕೋಡ್ಲು ಗ್ರಾಮದ ತಮ್ಮಯ್ಯ ಗೌಡ ಅವರು ವಯೋ…

Read More

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ :

ಖಾಸಗಿ ಬಸ್​ವೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಉರುಳಿ ಬಿದ್ದ ಪರಿಣಾಮ 20 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಹೊಳೆಹೊನ್ನೂರು ಸಮೀಪ ಸಿದ್ಲಿಪುರದ ಬಳಿ ನಡೆದಿದೆ. ಶಿವಮೊಗ್ಗ ದಿಂದ ಚಿತ್ರದುರ್ಗ ಕ್ಕೆ ಹೋಗುತ್ತಿದ್ದ ಬಸ್​, ಹೊಳೆಹೊನ್ನೂರು ಸಮೀಪ ಸಿದ್ಲಿಪುರದ ಬಳಿ ಪಲ್ಟಿ! ಘಟನೆಯಲ್ಲಿ ಗಾಯಗೊಂಡವರಿಗೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೆಗ್ಗಾನ್​ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಹೊಳೆಹೊನ್ನೂರು ಸಮೀಪದ ಸಿದ್ಲಿಪುರದಲ್ಲಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಬಸ್​ ಪಲ್ಟಿಯಾಗಿದೆ. ಎದುರಿನಿಂದ ಬರುತ್ತಿದ್ದ ಲಾರಿಗೆ…

Read More

ಆಯುಷ್ ವಿಶ್ವವಿದ್ಯಾಲಯ ಕೂಡಲೇ ಪ್ರಾರಂಭಿಸುವಂತೆ ಸಮಾಜವಾದಿ ಗೋಪಾಲಗೌಡ ಅಧ್ಯಯನ ಟ್ರಸ್ಟ್ ವತಿಯಿಂದ ಒತ್ತಾಯ :

ಶಿವಮೊಗ್ಗ ನಗರದಲ್ಲಿ ಕಳೆದ 2021-22ರ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ಮಂಜೂರು ಮಾಡಿ, 20 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದ್ದ ಆಯುಷ್  ವಿಶ್ವ ವಿದ್ಯಾಲಯದ ಯೋಜನೆಯ ಭರವಸೆಯು ಖಾಸಗಿ ಆಯುರ್ವೇದ ಮತ್ತು ಖಾಸಗಿ ನರ್ಸಿಂಗ್ ಹೋಂಗಳ ಚಿತಾವಣೆಯಿಂದ ಠುಸ್ಸ್ ಆಗಿದೆ ಎಂದು ಸಮಾಜವಾದಿ ಗೋಪಾಲಗೌಡ ಅಧ್ಯಯನ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಮತ್ತು ಆರ್ ಎ ಚಾಬುಸಾಬ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದರೆ ಖಾಸಗಿ…

Read More

ತೀರ್ಥಹಳ್ಳಿ ಸಮೀಪ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಕಟ್ಟೆಹಕ್ಲು ಶಾಲೆ ಮುಖ್ಯೋಪಾಧ್ಯಾಯ ಸ್ಥಳದಲ್ಲಿಯೇ ಸಾವು

ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಸಮೀಪ ನಾಗರವಳ್ಳಿ ಗ್ರಾಮದ ಬಳಿ ಮಾರುತಿ ಓಮಿನಿ ಹಾಗೂ ಬೈಕ್ ನಡುವೆ ಭೀಕರ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ಎಂದು ಗುರುತಿಸಲಾಗಿದೆ. ವೆಂಕಟೇಶ್ ರವರು ಬೈಕ್​ನಲ್ಲಿ ಬರುತ್ತಿದ್ದಾಗ ನಾಗರವಳ್ಳಿ ತಿರುವಿನಲ್ಲಿ ಮಾರುತಿ ಒಮಿನಿಗೆ ಗುದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೆಂಕಟೇಶ್​ರವರು ಸಾವನ್ನಪ್ಪಿದ್ದಾರೆ. ಶಾಲೆಯ ಕೆಲಸದ ನಿಮಿತ್ತ ಬೈಕ್ ನಲ್ಲಿ ತೆರಳುತಿದ್ದಾಗ ತಿರುವಿನಲ್ಲಿ ವೇಗವಾಗಿ ಬರುತಿದ್ದ ಮಾರುತಿ ಒಮಿನಿಗೆ…

Read More

ಲಿಂಗನಮಕ್ಕಿ ಜಲಾಶಯ : ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮುನ್ನೆಚ್ಚರಿಕೆ ಸೂಚನೆ

ಶಿವಮೊಗ್ಗ : ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನೇ ದಿನೇ ಏರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 1819.00 ಅಡಿಗಳಾಗಿದ್ದು 06-08-2022 ರ ಬೆಳಿಗ್ಗೆ 8 ಗಂಟೆಗೆ ಜಲಾಶಯದ ನೀರಿನ ಮಟ್ಟ 1801.35 ಅಡಿಗಳಾಗಿರುತ್ತದೆ. ಈ ದಿನದ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು 30,000 ಕ್ಯೂಸೆಕ್ಸ್‍ಗಳಿಗಿಂತಲೂ ಅಧಿಕವಾಗಿದ್ದು ಇದೇ ರೀತಿಯಲ್ಲಿ ಜಲಾಶಯಕ್ಕೆ ಬರುವ ನೀರಿನ ಹರಿವು…

Read More

ರಿಪ್ಪನ್‌ಪೇಟೆ : ಕಂದಾಯ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ರೈತ ಕುಟುಂಬದಿಂದ ಧರಣಿ

ರಿಪ್ಪನ್‌ಪೇಟೆ: ಕೆಂಚನಾಲ ಗ್ರಾಮದ ಸ್ವಂತ ಜಮೀನಿಗೆ ದಾರಿ ಕಲ್ಪಿಸಲು ನಿರ್ಲಕ್ಷ್ಯ ವಹಿಸಿರುವ ಕಂದಾಯ ಇಲಾಖೆಯ ಧೋರಣೆಯನ್ನು ಖಂಡಿಸಿ ರೈತ ಸೋಮಶೇಖರ ಮತ್ತು ಅವರ ಕುಟುಂಬ ಸದಸ್ಯರು ನಾಡಕಛೇರಿ ಎದುರು ಶುಕ್ರವಾರ  ಪ್ರತಿಭಟನಾ ಧರಣಿ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಸೋಮಶೇಖರ ಮಾದ್ಯಮದವರೊಂದಿಗೆ ಮಾತನಾಡಿ ಕೆಂಚನಾಲ ಗ್ರಾ,ಮದ ಸರ್ವೆ ನಂ. ೩೫ ರಲ್ಲಿ ೨ ಎಕರೆ ಜಮೀನನ್ನು ಹೊಂದಿರುವ ನಾನು ಸಾಗುವಳಿಯ ಜೊತೆಗೆ ರಬ್ಬರ್ ಮರಗಳನ್ನು ನೆಟ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿರುತ್ತೇನೆ. ಅಕ್ಕಪಕ್ಕದ ಬಗರ್ ಹುಕುಂ…

Read More

ರಿಪ್ಪನ್ ಪೇಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಸಂಭ್ರಮದಿಂದ ಆಚರಣೆ :

ರಿಪ್ಪನ್ ಪೇಟೆ : ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಇಂದು  ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಭಾರಿ ಮಳೆ ಸುರಿಯುತ್ತಿದ್ದರು ಮಹಿಳೆಯರು ಬೆಳಿಗ್ಗೆಯಿಂದಲೇ  ದೇವಾಲಯಗಳಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.  ಪಟ್ಟಣದ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ಆದೇಶದ ಅನ್ವಯ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆಯಿಂದ 11:30ರ ತನಕ ಮುತ್ತೈದೆಯರಿಗೆ ಅರಿಶಿನ–ಕುಂಕುಮ ನೀಡಲಾಯಿತು. ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Read More

ಆಗುಂಬೆ ಘಾಟಿಯಲ್ಲಿ ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಉರುಳಿಬಿದ್ದ ಬೃಹತ್ ಮರ :

ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಆಗುಂಬೆ ಘಾಟಿಯಲ್ಲಿ ಮರ ಉರುಳಿ ಬಿದ್ದ ಘಟನೆ ನಡೆದಿದೆ. ಈ ಘಟನೆಯಿಂದ ಅದೃಷ್ಟವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ,ಮರ ಬಿದ್ದಿರುವ ಹಿನ್ನಲೆಯಲ್ಲಿ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸೋಮೇಶ್ವರ ಕಡೆಯಿಂದ ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಮರ ಉರುಳಿ ಬಿದ್ದಿದೆ. ಚಾಲಕ ಮತ್ತು ಪಕ್ಕದಲ್ಲಿದ್ದ ಮತ್ತೊಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ. ಮರ ಬಿದ್ದ ತಕ್ಷಣ ಗಾಬರಿಯಾದ ಚಾಲಕ…

Read More