ರಿಪ್ಪನ್‌ಪೇಟೆ : ರಾಜ್ಯದ ಬಹು ಜನರ ಬೇಡಿಕೆಯಾಗಿದ್ದ ಕರ್ನಾಟಕ ಭೂ ಕಬಳಿಕೆ ನಿಷೇದ ಕಾಯ್ದೆಯ 2011 ರ ಕಾಲಂ 2(ಡಿ ) ತಿದ್ದುಪಡಿ ತಂದಿರುವುದು ಬಹಳ ಸಂತಸವಾಗಿದೆ ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹೆಚ್ ಹಾಲಪ್ಪ ಹರತಾಳು ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸಚಿವ ಸಂಪುಟದ ಪರಿಷತ್ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. 192ಎ ಕಾಲಂ ಸ್ಥಗಿತಗೊಳಿಸಿರುವಂಥದ್ದು ಬಹಳ ಖುಷಿಯ ವಿಚಾರ. ಕಾರಣ ಒಂದು ಗುಂಟೆ ಸೈಟು ಮಾಡಿಕೊಡವರನ್ನು ಕೇಸ್ ಹಾಕುವ ಮೂಲಕ ಅವರನ್ನು ಬೆಂಗಳೂರಿಗೆ ಅಲೆಸುವಂತಹ ಕೆಲಸ ಮಾಡುತ್ತಿದ್ದರು. ಇದು ಒಂದು ರೀತಿ ಬಡವರಿಗೆ ಯಮಪಾಷವಾಗಿತ್ತು. ಈಗ ಇದನ್ನು ರದ್ದುಗೊಳಿಸಿರುವುದರಿಂದ ಸಾವಿರಾರು ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಸರ್ಕಾರಿ ಜಾಗವನ್ನು ಕಬಳಿಸುವವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿದ್ದು ಇದಕ್ಕೆ ರಾಜ್ಯ ಸರ್ಕಾರ ಕರ್ನಾಟಕ ಭೂ ಕಬಳಿಕೆ ಕಾಯ್ದೆ 2011 ರ ಅಡಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿ ಈ ಮೂಲಕ ಬಹುದಿನಗಳ ಜನತೆಯ ಬೇಡಿಕೆಯೊಂದಿಗೆ ಶಾಸನ ಸಭೆಯಲ್ಲಿ ಶಾಸಕನಾಗಿ ಮತ್ತು ರಾಜ್ಯದ ಗೃಹ ಸಚಿವ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹೇಳಿ ಮುಖ್ಯಮಂತ್ರಿಗಳನ್ನು ಮತ್ತು ಸುಂಪುಟ ಕೈಗೊಂಡ ನಿರ್ಧಾರವನ್ನು ಅಭಿನಂದಿಸಿದರು.
ಮುಂದೆ ಶರಾವತಿ ಮತ್ತು ಅರಣ್ಯ ಹಕ್ಕು ಕಾಯಿದೆ ಬಗ್ಗೆ ಕಾರ್ಯಗತಗೊಳಿಸುವ ಪ್ರಯತ್ನದಲ್ಲಿದ್ದೇವೆ.ಅದು ಈಡೇರುವ ಭರವಸೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಗಣಪತಿ ಬಿಳಗೋಡು, ಮಹಾಶಕ್ತಿ ಕೇಂದ್ರದ ಅದ್ಯಕ್ಷ ಎಂ.ಬಿ.ಮಂಜುನಾಥ, ಜಿ.ಪಂ. ಮಾಜಿ ಸದಸ್ಯೆ ಎ.ಟಿ.ನಾಗರತ್ನ, ಎನ್.ಸತೀಶ್, ಉದ್ಯಮಿ ನಾಗರಾಜಶೆಟ್ಟಿ, ಕೆ.ಬಿ.ಹೂವಪ್ಪ, ಎಂ.ಸುರೇಶ್ ಸಿಂಗ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಹಾಲಕ್ಷ್ಮಿ
ಸುಧೀಂದ್ರ ಪೂಜಾರಿ, ಯೋಗೇಂದ್ರಗೌಡ, ಸುಂದರೇಶ್, ಸುಧೀರ್, ಪಿ.ರಮೇಶ್, ಪುಟ್ಟ ಹಾಲುಗುಡ್ಡೆ, ನಾಗಾರ್ಜುನಸ್ವಾಮಿ ಇನ್ನಿತರ ಮುಖಂಡರು ಹಾಜರಿದ್ದರು.
ಮನೆ ಕಳೆದುಕೊಡ ನಿರ್ಗತಿಕ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಹರತಾಳು ಹಾಲಪ್ಪ
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾದ್ಲಾರದಿಂಬ ಚಂದ್ರಪ್ಪಗೌಡ ಎಂಬುವವರ ಮನೆ ಕುಸಿದು ಸಂಪೂರ್ಣ ನೆಲಸಮಗೊಂಡಿದ್ದು ನಿರ್ಗತಿಕ ಕುಟುಂಬಕ್ಕೆ ತಕ್ಷಣ ಪರಿಹಾರವಾಗಿ ಸರ್ಕಾರ ನೀಡುವ ಚೆಕ್ಅನ್ನು ಕ್ಷೇತ್ರ ಶಾಸಕ ಹರತಾಳು ಹಾಲಪ್ಪ ಇಂದು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕ ಪರಿಹಾರದ ಚೆಕ್ ವಿತರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ ಸಂಪೂರ್ಣ ಮನೆ ಹಾನಿಗೀಡಾದರೆ 5 ಲಕ್ಷ ರೂ. ಪರಿಹಾರ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಮನೆ ನಿರ್ಮಣಕ್ಕೆ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾವಾಗುತ್ತದೆ ಎಂದು ಹೇಳಿ ಸುಸಜ್ಜಿತ ಮನೆ ನಿರ್ಮಿಸಿಕೊಳ್ಳುವಂತೆ ಕುಟುಂಬದವರಿಗೆ ಸೂಚಿಸಿದರು.