ತೀರ್ಥಹಳ್ಳಿ : 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಬೇಕೆಂಬ ಕಾರಣಕ್ಕಾಗಿ ಪಟ್ಟಣದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಿದರು.
ಪಟ್ಟಣದ ಕುಶಾವತಿ ಪಾರ್ಕ್ ನಿಂದ ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದವರೆಗೆ ಸಾವಿರಾರು ವಿದ್ಯಾರ್ಥಿಗಳೊಡನೆ ಸರಿ ಸುಮಾರು 2 ಕಿಮೀ ಗಳಷ್ಟು ದೂರ ಮಳೆಯಲ್ಲಿಯೇ ಹೆಜ್ಜೆ ಹಾಕಿದರು.
ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲಾ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಬೇಕಾಗಿದೆ ಹಾಗಾಗಿ ಅದನ್ನು ಪ್ರತಿ ಮನೆ ಮನೆಗೆ ಧ್ವಜವನ್ನು ವಿತರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದೇನೆ. ಈ ಒಂದು ಧ್ವಜ ವಿತರಣೆ ಕಾರ್ಯದಲ್ಲಿ ಶಾಲಾ – ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಧಾರ್ಮಿಕ ಮುಖಂಡರು, ಹಾಗೂ ಸಾರ್ವಜನಿಕರೆಲ್ಲರೂ ಕೂಡ ನಮ್ಮ ಜೊತೆ ಭಾಗವಹಿಸಿದ್ದಾರೆ. ಇದೊಂದು ನಮಗೆ ಹೆಮ್ಮೆಯ ಕಾರ್ಯ. ತೀರ್ಥಹಳ್ಳಿ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತು. ಹಲವು ಹಿರಿಯರು ಇದ್ದರೂ ಆದರೆ ಈಗ ನಮ್ಮೊಂದಿಗೆ ಇಲ್ಲ. ತೋಟದ ಮನೆ ವೆಂಕಣ್ಣ ರಾಯರ ಬದಲು ಅವರ ಮಗನಿಗೆ ಧ್ವಜವನ್ನು ಕೊಡುವುದರ ಮೂಲಕ ಚಾಲನೆ ಕೊಟ್ಟಿದ್ದೇವೆ. ಇನ್ನು ತೀರ್ಥಹಳ್ಳಿಗೆ ಗಾಂಧೀಜಿ ಕೂಡ ಬಂದಿದ್ದರು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಫಂಡ್ ಕಲೆಕ್ಟ್ ಮಾಡಿ ಕೊಟ್ಟ ದಾಖಲೆ ನಮ್ಮ ತೀರ್ಥಹಳ್ಳಿಯದು.ಹೀಗಾಗಿ ಅತ್ಯಂತ ಅದ್ದೂರಿಯಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಬೇಕು ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಾವು ಹುಟ್ಟೇ ಇರಲಿಲ್ಲ ಹಾಗಾಗಿ ಈಗ ನಾವೆಲ್ಲರೂ ಪ್ರೌಢರಾಗಿದ್ದೇವೆ. ಸ್ವಾತಂತ್ರ್ಯದ ಬಗ್ಗೆ ಓದಿ ಕೇಳಿ ತಿಳಿದುಕೊಂಡಿದ್ದೇವೆ. ಈ ಕಾರಣಕ್ಕೆ ನಾವೆಲ್ಲರೂ ಈ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿ ಅವರನ್ನೆಲ್ಲ ನೆನಪಿಸಿಕೊಂಡು ಅವರ ಕನಸಿನ ಭಾರತವನ್ನು ಕಟ್ಟಬೇಕು ಎಂದು ತಿಳಿಸಿದರು.
ಹರ್ ಘರ್ ತಿರಂಗಾ
ಆಗಸ್ಟ್ 13ರಿಂದ 15 ರವರೆಗೆ ಪ್ರತಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಲು ಕರೆ ಕೊಡಲಾಗಿದೆ. ನಮ್ಮ ತಾಲೂಕಿನಲ್ಲಿ ಸುಮಾರು
80 % ಮನೆಗಳ ಮೇಲೆ ತಿರಂಗಾ ಧ್ವಜ ಹಾರಡಲಿದೆ ಎಂದರು. ನಮ್ಮ ಸಂಘಟನೆ ಇಂದ ಇಪ್ಪತ್ತು ಸಾವಿರ ಧ್ವಜವನ್ನು ವಿತರಣೆ ಮಾಡುತ್ತಿದ್ದೇವೆ. ಪಂಚಾಯತ್ ಹಾಗೂ ಬೂತ್ ಕೇಂದ್ರಗಳಿಗೆ ಮುಟ್ಟಿಸುವ ಕೆಲಸವಾಗುತ್ತಿದೆ. ಒಟ್ಟಿನಲ್ಲಿ ಈ ಬಾರಿಯ ಸ್ವಾತಂತ್ರತ್ಯೋತ್ಸವ ರಾಷ್ಟ್ರ ಭಕ್ತಿಯ ನಿರ್ಮಾಣ ಮಾಡುವುದರಲ್ಲಿ ಸಫಲವಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಗೃಹಸಚಿವರ ಕಿವಿಮಾತು;
ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಿದ ನಂತರ ವಿದ್ಯಾರ್ಥಿಗಳಿಗೆ ಧ್ವಜವನ್ನು ತಮ್ಮ ತಮ್ಮ ಮನೆಗಳಲ್ಲಿ ನೀವೆಲ್ಲರೂ ಮುಂದೆ ನಿಂತು ಈ ಬಾರಿಯ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಬೇಕು. ಯಾವುದೇ ಕಾರಣಕ್ಕೂ ಧ್ವಜಕ್ಕೆ ಅಪಮಾನವಾಗುವ ರೀತಿ ಮಾಡಬಾರದು. ಆಗಸ್ಟ್ 15 ರ ಸಂಜೆ ಧ್ವಜವನ್ನು ಇಳಿಸಿ ಮಡಿಸಿ ಇಡಬೇಕು ಎಂದು ಕಿವಿಮಾತು ಹೇಳಿದರು.
ವರದಿ : ಅಕ್ಷಯ್ ಕುಮಾರ್