ಶಿವಮೊಗ್ಗದ ವಿನೋಬ ನಗರದಲ್ಲಿ ಹಾಡುಹಗಲೇ ರೌಡಿಶೀಟರ್ ಹಂದಿ ಅಣ್ಣಿ ಯ ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಚಿಕ್ಕಮಗಳೂರಿನ ಎಸ್ ಪಿ ಎದುರಲ್ಲಿ ಶರಣಾಗಿದ್ದಾರೆ.
8 ಜನ ಆರೋಪಿಗಳು ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಮುಂದೆ ಶರಣಾಗಿರುವುದಾಗಿ ತಿಳಿದು ಬಂದಿದೆ.ತಡರಾತ್ರಿ 8 ಜನ ಆರೋಪಿಗಳು ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಬಂದು ಶರಣಾಗಿರುವುದಾಗಿ ತಿಳಿದು ಬಂದಿದೆ.
ಎಸ್ಪಿ ಮುಂದೆ 8 ಜನರು ಆರೋಪಿಗಳು ಹಂದಿ ಅಣ್ಣಿಯನ್ನ ಕೊಲೆ ಮಾಡಿದವರು ನಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು ಕೋರ್ಟ್ ನಲ್ಲಿ ಮೊದಲು ಇವರನ್ನ ಹಾಜರುಪಡಿಸಿ ನ್ಯಾಯಾಲಯದ ಆದೇಶದ ಮೇರೆಗೆ ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಕಾಡಾ ಕಾರ್ತಿಕ್, ನಿತಿನ್ ಸೇರಿ 8 ಜನರು ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಶರಣಾಗಿದ್ದಾರೆ.