ತೀರ್ಥಹಳ್ಳಿ: ತಾಲೂಕಿನ ಮುಳುಬಾಗಿಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಂಜದಕಟ್ಟೆಯ ಭೀಮನ ಕಟ್ಟೆ ತೂಗು ಸೇತುವೆಯ ಬಳಿ ವಿದ್ಯುತ್ ತಂತಿಯೊಂದು ನೆಲದ ಮೇಲೆ ಬಿದ್ದಿದ್ದನ್ನು ಗಮನಿಸದೆ ರೈತ ಮಹಿಳೆಯೊಬ್ಬರು ಜಾನುವಾರಿಗೆ ಹುಲ್ಲು ತರುವಾಗ ವಿದ್ಯುತ್ ಶಾಕ್ ತಗುಲಿ ಮೃತರಾಗಿರುವ ಘಟನೆ ಜರುಗಿದೆ.
ಕೆಲವು ಕಡೆ ವಿದ್ಯುತ್ ಕಂಬಗಳಲ್ಲಿ ತಂತಿ ಕೆಳಗೆ ಜೋತು ಬಿದ್ದಿರುತ್ತವೆ ಅದನ್ನು ಗಮನಿಸದೆ ಅಥವಾ ಶಾರ್ಟ್ ಸರ್ಕ್ಯೂಟ್ ನಿಂದ ಜನರಿಗೆ ತೊಂದರೆಯಾಗುವ ಸಾಧ್ಯತೆ ಇದ್ದು ಈಗಾಗಲೇ ಮಳೆಗಾಲ ಪ್ರಾರಂಭವಾಗುತ್ತಿದ್ದು ಕೆಲವು ತಂತಿಗಳು ತುಕ್ಕು ಹಿಡಿಯುವ ಸ್ಥಿತಿಯಲ್ಲಿ ಕಂಡು ಬರುತ್ತಿದ್ದು ಇದಕ್ಕೆ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಸಾರ್ವಜನಿಕರಿಂದ ಮಾತು ಕೇಳಿಬರುತ್ತಿದೆ