ಬೊಲೆರೋ ಪಿಕಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಸಂಜೆ 7 ಗಂಟೆಗೆ ನಡೆದಿದೆ.
ಸಾಗರದ ಮೂಲಕ ಹಾರನಹಳ್ಳಿ – ಸವಳಂಗ – ನ್ಯಾಮತಿ – ಹೊನ್ನಾಳಿ ಮೂಲಕ ರಾಣೇಬೆನ್ನೂರಿಗೆ ಮೀನು ತೆಗೆದುಕೊಂಡು ಹೋಗುತ್ತಿದ್ದ ಬೊಲೆರೋ ಪಿಕಪ್ ವಾಹನ ಮತ್ತು ಬಾಳೆಕೊಪ್ಪಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಉಂಟಾಗಿದ್ದು ಬೈಕ್ ಸವಾರರು ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತಪಟ್ಟ ಯುವಕರನ್ನು ಬಾಳೆಕೊಪ್ಪದ ಗಿರೀಶ್ ( 23), ಅವಿನಾಶ್(25) ಎಂದು ಗುರುತಿಸಲಾಗಿದೆ. ಸವಳಂಗದ ಕಡೆ ಹೋಗಿ ವಾಪಾಸ್ ಬಾಳೆಕೊಪ್ಪದ ಕಡೆ ಹೋಗುವಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಬೊಲೆರೋ ಪಿಕಪ್ ವಾಹನದ ಸವಾರ ಅಪಘಾತಪಡಿಸಿ ರಸ್ತೆ ಬದಿ ಹೊಡೆಸಲಾದ ಟ್ರಂಚ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬೊಲೆರೋ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.