ಮಾನವೀಯತೆ ಮೆರೆದ ಸಾಗರದ ಜೈನ್ ಶೇಖ್ :
ಸಾಗರ : ಹೊಂಡಾ ಆಕ್ಟೀವಾ ಸ್ಕಿಡ್ ಆಗಿ ಅಪಘಾತಕ್ಕೀಡಾದ ಗಾಯಾಳನ್ನು ವಾಹನ ಸವಾರರೊಬ್ಬರು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ಒದಗಿಸಿ ಮಾನವೀಯತೆ ಮೆರೆದ ಘಟನೆ ಮಂಗಳವಾರ ನಡೆದಿದೆ. ಇಲ್ಲಿನ ಕೆಳದಿ ರಸ್ತೆಯಲ್ಲಿರುವ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಮುಂಭಾಗ ಹೊಂಡಾ ಆಕ್ಟೀವಾದಲ್ಲಿ ತೆರಳುತ್ತಿದ್ದ ಕೂಲಿ ಕಾರ್ಮಿಕ ಅರುಣ್ ಕುಮಾರ್ (30), ಅಪಘಾತವಾಗಿ ತಲೆಗೆ ತೀವ್ರತರವಾದ ಗಾಯವಾಗಿ ರಕ್ತ ಸೋರುತ್ತಿತ್ತು.ಅದೇ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಸಿವಿಲ್ ಕಂಟ್ರಾಕ್ಟರ್ ಜೈನ್ ಶೇಖ್ ಎಂಬುವವರು ಜನ ಸೇರಿದ್ದನ್ನು ಗಮನಿಸಿ ಕಾರು ನಿಲ್ಲಿಸಿ ನೋಡಿದಾಗ ಅರುಣ್ ಕುಮಾರ್…