ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವನಿಗೆ ಥಳಿಸಿ ಕ್ರೌರ್ಯ ಮೆರೆದ ಹೊಸನಗರ ಪಿಎಸ್ ಐ : ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು ??????

ಪೊಲೀಸರು‌ ಮಹಜರ್ ಗೆ ಹೋದಾಗ ವ್ಯಕ್ತಿಯೋರ್ವ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಲಾಠಿ ರುಚಿ ತೋರಿಸಿದ ಘಟನೆ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪ ಹತ್ತಿರ ಬಾಣಿಗ ಗ್ರಾಮದಲ್ಲಿ ಘಟನೆಯೊಂದಕ್ಕೆ ಪೊಲೀಸರು ಮಹಜರ್ ಗೆ ಹೋದಾಗ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವನಿಗೆ ಮನಸೋಇಚ್ಚೇ  ಥಳಿಸಲಾಗಿದೆ ಎನ್ನಲಾಗಿದೆ. ಹೊಸನಗರ ಪಿಎಸ್ ಐ ರಾಜೇಂದ್ರ ಎ  ನಾಯ್ಕ್ ಹಾಗೂ ಜೀಪ್ ಚಾಲಕ ಅವಿನಾಶ್ ಈ ಕೃತ್ಯವೆಸಗಿದ್ದಾರೆ  ಎಂದು ಹೇಳಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ  ಈ…

Read More

ನಿರಾಶದಾಯಕ ಬಜೆಟ್ : ಅರ್ ಎ ಚಾಬುಸಾಬ್

ರಾಜ್ಯದ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡದೇ, ರೈತರ ಸಾಲದ ಯೋಜನೆಯನ್ನು ಹೆಚ್ಚಿನ  ರೈತರಿಗೆ ವಿಸ್ತರಿಸದೇ ರೈತರ ಪರ ಬಜೆಟ್ ಎಂದು ಪ್ರತಿಪಾದಿಸುವ ಬರೀ ಸುಳ್ಳಿನ ಲೆಕ್ಕಚಾರದ ಪೊಳ್ಳು ಹಾಗೂ ನಿರಾಶದಾಯಕ ಬಜೆಟ್ ಆಗಿದೆ ಎಂದು ಜಾತ್ಯಾತೀತ ಜನತಾದಳದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಹೇಳಿದರು‌. ಸಮಾಜ ಕಲ್ಯಾಣ ಇಲಾಖೆ, ಕೈಗಾರಿಕಾ ಇಲಾಖೆ, ಕೃಷಿ, ಶಿಕ್ಷಣ, ನೀರಾವರಿ ಯಂತಹ ಪ್ರಮುಖ ವಲಯಗಳಲ್ಲಿ ಯಾವುದೇ ಹೊಸ ಯೋಜನೆ ರೂಪಿಸಿರುವುದಿಲ್ಲ.ವಿಧವೆ ಮತ್ತು ವಯೋವೃದ್ಧರಿಗೆ ಕನಿಷ್ಠ 1ಸಾವಿರಕ್ಕೂ ಹೆಚ್ಚು…

Read More

ವಿದ್ಯಾರ್ಥಿಗಳು ಬಜೆಟ್ ವಿಶ್ಲೇಷಣೆ ಮಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು : ಪ್ರೋ.ಚಂದ್ರಶೇಖರ್.ಟಿ

ರಿಪ್ಪನ್ ಪೇಟೆ : ಇಲ್ಲಿನ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗ, ನಿರ್ವಹಣಾ ಶಾಸ್ತ್ರ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗದ ವತಿಯಿಂದ ಕರ್ನಾಟಕ ರಾಜ್ಯ ಅಯವ್ಯಯ -2022 ದ ನೇರವಿಕ್ಷಣೆ ಮತ್ತು ವಿಶ್ಲೇಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ.ಟಿ ರವರು ವಿದ್ಯಾರ್ಥಿಗಳು ಬಜೆಟ್ ವಿಶ್ಲೇಷಣೆ ಮಾಡುವ ಕೌಶಲ್ಯವನ್ನು ಬೆಳೆಸಿಕೊಂಡರೆ ರಾಜ್ಯದ ವಸ್ತು ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮಾರ್ಥ್ಯವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು. ರಾಜ್ಯ ಬಜೆಟ್ ನ ಗಾತ್ರ, ವಿಭಾಗವಾರು ಹಂಚಿಕೆ,ಹೊಸ ಕಾರ್ಯಕ್ರಮಗಳ ಘೋಷಣೆ,…

Read More

ಶಿವಮೊಗ್ಗದಲ್ಲಿ ನಿನ್ನೆ ವಾಕಿಂಗ್ ಹೋಗಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ :

ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಪದ್ಮ ಚಲನಚಿತ್ರದ ಮಂದಿರದ ಬಳಿ ವಾಕಿಂಗ್ ಹೋಗಿದ್ದ ವೆಂಕಟೇಶ್ ಎಂಬುವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಇಬ್ಬರನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದು ಓರ್ವನ ಭೇಟೆಗೆ ಬಲೆ ಬೀಸಿದ್ದಾರೆ. ನಿನ್ನೆ ಸಂಜೆ 06-30 ಗಂಟೆಗೆ ತುಂಗಾನಗರ ಠಾಣಾ ವ್ಯಾಪ್ತಿಯ ಪದ್ಮಾ ಟಾಕೀಸ್ ಎದುರು ಗೋಪಾಳ ಶಿವಮೊಗ್ಗ ಟೌನ್ ನ ವಾಸಿ ವೆಂಕಟೇಶ್ ಎಂಬುವರು ತಮ್ಮ ನಾಯಿಯನ್ನು ಹಿಡಿದುಕೊಂಡು ವಾಕಿಂಗ್ ಗೆ ಹೋಗಿ ವಾಪಾಸ್ ಮನೆಗೆ ಹಿಂದಿರುಗುವಾಗ ವಿದ್ಯಾನಿಕೇತನ ಶಾಲೆಯ ಹತ್ತಿರ ಅವರಿಗೆ ಕಲ್ಲಿನಿಂದ…

Read More

ಹೊಸನಗರದ ದಂಪತಿಗಳಿಗೆ ಒಲಿದ VK ಜೋಡಿ ತಾರೆ “ರನ್ನರ್ ಅಪ್” ಪ್ರಶಸ್ತಿ

ಹೊಸನಗರ :ವಿಜಯ ಕರ್ನಾಟಕ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ VK ಜೋಡಿ ತಾರೆ ಸ್ಫರ್ಧೆಯ  ಬೆಂಗಳೂರಿನಲ್ಲಿ ನಡೆದ ವಿಜಯ ಕರ್ನಾಟಕ ಜೋಡಿ ತಾರೆ 2022 ಸೀಸನ್ 2 ರ ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸನಗರದ ಶಿಕ್ಷಕರಾದ ವನಜಾಕ್ಷಿ ದೇವೇಂದ್ರಪ್ಪ  ದಂಪತಿಗಳಿಗೆ ರನ್ನರ್ ಅಪ್ ಪ್ರಶಸ್ತಿ ಒಲಿದಿದೆ. ಪ್ರೇಮಿಗಳ ದಿನದ ಅಂಗವಾಗಿ ವಿಜಯ ಕರ್ನಾಟಕ ಸಂಸ್ಥೆಯು ಕರ್ನಾಟಕದ ಬೆಸ್ಟ್​ ಜೋಡಿಗಳನ್ನು ಗುರುತಿಸಲು ಈ ಸ್ಪರ್ಧೆ ಹಮ್ಮಿಕೊಂಡಿದ್ದು, ರಾಜ್ಯದ ಹಲವು ಭಾಗಗಳಿಂದ ಹಲವಾರು ಸ್ಪರ್ಧಿಗಳು ಭಾಗವಹಿಸುತ್ತಾರೆ. ಬೆಂಗಳೂರಿನಲ್ಲಿ ಪೆ.27 ರಂದು ನಡೆದ ವಿಜಯ…

Read More

ಶಿವಮೊಗ್ಗದಲ್ಲಿ ವಾಕಿಂಗ್ ಹೋಗಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ , ಕಲ್ಲು ತೂರಾಟ

ವಾಕಿಂಗ್ ಗೆ ಹೋಗುತ್ತಿದ್ದ ವೇಳೆ ವ್ಯಕ್ತಿಯೋರ್ವನ ಮೇಲೆ 5-6 ಜನರ ಗುಂಪೊಂದು ದಿಡೀರನೇ ಕಲ್ಲುತೂರಿದ ಘಟನೆ ಇಂದು ಸಂಜೆ ನಡೆದಿದೆ. ಈ ಘಟನೆಗೆ ಕಾರಣಗಳೇನು ಎಂಬುದು ಇನ್ನೂ ತಿಳಿದುಬರಬೇಕಿದೆ. ಗೋಪಾಳದ ಪದ್ಮಚಲನಚಿತ್ರ ಮಂದಿರದ ಸರ್ಕಾರಿ ಶಾಲೆಯ ಬಳಿ ವೆಂಕಟೇಶ್ ಎಂಬುವರು ತಮ್ಮ ಮನೆಯ ನಾಯಿಯನ್ನ ಹಿಡಿದುಕೊಂಡು ವಾಕಿಂಗ್ ಗೆ ಹೋಗುವಾಗ ದಿಡೀರನೇ ಐದಾರು ಜನರ ಗುಂಪೊಂದು ಕಲ್ಲು ತೂರಿದ್ದು ವೆಂಕಟೇಶ್ ರವರ ತಲೆಗೆ ಪೆಟ್ಟುಬಿದ್ದಿದೆ. ಅವರನ್ನ ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹಿಂದೂ ಮುಖಂಡರಾದ ದೀನ್ ದಯಾಳು,…

Read More

ರಿಪ್ಪನ್ ಪೇಟೆ ಸಮೀಪದ ಬೆನವಳ್ಳಿ ಗ್ರಾಮದಲ್ಲಿ ಇಡೀ ಊರಿಗೆ ವಾಮಾಚಾರ :

ಗ್ರಾಮದ ಗಡಿಭಾಗದಲ್ಲಿ ರಂಗೋಲಿಹಿಟ್ಟಿನ ಗೊಂಬೆ, ಮೊಟ್ಟೆ, ಬಟ್ಟೆ, ಕೂದಲು, ನಿಂಬೆಹಣ್ಣು ಸೇರಿದಂತೆ ಮಾಟಕ್ಕೆ ಬಳಸುವ ವಸ್ತುಗಳನ್ನ ಬಳಸಿ ಮಾಟ ಮಂತ್ರಗಳನ್ನ ಪ್ರಯೋಗಿಸಿರುವ ಘಟನೆ ನಡೆದಿದ್ದು. ಪ್ರಕರಣ ರಿಪ್ಪನ್ ಪೇಟೆಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೊಸನಗರ ತಾಲೂಕು ಬೆನವಳ್ಳಿ ಗ್ರಾಮದ ಮುಂದೆ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ರಂಗೋಲಿ ಹಿಟ್ಟಿನ ಗೊಂಬೆ, ಮೊಟ್ಟೆ, ಬಟ್ಟೆ, ಕೂದಲು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಊರಿನ ಸಂಪರ್ಕ ರಸ್ತೆ ಸಮೀಪ ವಾಮಾಚಾರ ಮಾಡಿರುವುದು ಕಂಡು ಬಂದಿದ್ದು, ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ….

Read More

ಮಾರ್ಚ್ 6ರಿಂದ ಬಾಲ್ಯ ವಿವಾಹ ನಿಷೇಧ ಅಭಿಯಾನ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

 ಬಾಲ್ಯ ವಿವಾಹ ನಿಷೇಧ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾರ್ಚ್ 6ರಿಂದ ಜಿಲ್ಲೆಯಾದ್ಯಂತ `ವೀಡಿಯೋ ಆನ್ ವೀಲ್ಸ್’ ಅಭಿಯಾನ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ತಿಳಿಸಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಭಿಯಾನದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು. ಅಭಿಯಾನ ಜಿಲ್ಲೆಯ 41 ಹೋಬಳಿಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಂಚಾರಿ ವಾಹನದ ಮೂಲಕ ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ವಿಡಿಯೋಗಳನ್ನು ಪ್ರದರ್ಶಿಸಲಾಗುವುದು. ಎಲ್ಲಾ ಹೋಬಳಿ ಹಂತಗಳಲ್ಲಿ ಅಭಿಯಾನದ…

Read More

ಸಿಗಂದೂರು ದೇವಸ್ಥಾನಕೆ ಬಂದಿದ್ದ ಭಕ್ತಾಧಿಗಳ ಜೀಪ್ ಕಂದಕಕ್ಕೆ ಉರುಳಿ ಓರ್ವ ಮಹಿಳೆ ಸಾವು : ಉಳಿದ ಪ್ರಯಾಣಿಕರ ಸ್ಥಿತಿ ಗಂಭೀರ

ಸಾಗರ ತಾಲೂಕಿನ ತುಮರಿ ಬಳಿಯ ವಕ್ಕೋಡಿ ತಿರುವಿನಲ್ಲಿ ಕಂದಕಕ್ಕೆ ಟೆಂಪೋ ಟ್ರ್ಯಾಕ್ಸ್ ಉರುಳಿ ಬಿದ್ದು ಓರ್ವ ಮಹಿಳೆ ಮೃತ ಪಟ್ಟಿರುವ ಘಟನೆ ನಡೆದಿದೆ. ಸಿಗಂದೂರು ದೇವಾಲಯಕ್ಕೆ ಆಗಮಿಸುತ್ತಿದ್ದ  ಕುಷ್ಟಗಿಯ ಭಕ್ತಾದಿಗಳು ಇದ್ದ ಜೀಪ್ ಕಂದಕಕ್ಕೆ ಬಿದ್ದು ಗೌರಮ್ಮ ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ತುಮರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸಾಗರ ಆಸ್ಪತ್ರೆಗೆ ಕಳುಹಿಸಲಾಗಿದೆ.  ಇವತ್ತು ದ್ವೀಪದಲ್ಲಿ ಎರಡು ಅಫಘಾತವಾದ ಕಾರಣ 108 ಮೊದಲ ಅಫಘಾತಕ್ಕೆ ಸೇವೆ ನೀಡಲು ಕುಂದಾಪುರ ಹೋದ ಕಾರಣ ಲಭ್ಯವಾಗಲಿಲ್ಲ. ಜಂಟಿ 108…

Read More

ರಿಪ್ಪನ್ ಪೇಟೆ : ಸಿದ್ದಪ್ಪನಗುಡಿಯ ಕಂತೆ ಸಿದ್ದೇಶ್ವರ ದೇವಸ್ಥಾನದಲ್ಲಿ ಅದ್ದೂರಿ ಮಹಾ ಶಿವರಾತ್ರಿ ವೈಭವ

ರಿಪ್ಪನ್‌ಪೇಟೆ :ಇಲ್ಲಿನ ಸಮೀಪದ ಸಿದ್ದಪ್ಪನಗುಡಿಯ ಇತಿಹಾಸ ಪ್ರಸಿದ್ದ  ಶ್ರೀ ಕಂತೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ಇಂದು ಬೆಳಿಗ್ಗೆ ದೇವರಿಗೆ ರುದ್ರಾಭಿಷೇಕ, ಅಭಿಷೇಕ, ಪೂಜಾ ಕೈಂಕರ್ಯಗಳು ಸಂಭ್ರಮದೊಂದಿಗೆ ಜರುಗಿತು. ಪಟ್ಟಣದ ಹೊರವಲಯದಲ್ಲಿರುವ ಸಿದ್ದಪನಗುಡಿ ಕಂತೆ ಸಿದ್ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ರುದ್ರಾಭಿಷೇಕ ಮತ್ತು ಅಭಿಷೇಕ ಅಲಂಕಾರ ಪೂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ನಂತರ ಮಹಾಮಂಗಳಾರತಿಯೊಂದಿಗೆ ಸಾರ್ವಜನಿಕರಿಗೆ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು. ಸುಮಾರು ಎರಡೂ ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು. ದೇವಸ್ಥಾನದ…

Read More