ಅನಾರೋಗ್ಯದಿಂದ ಬಳಲುತ್ತಿದ್ದ ಚಂದನವನದ ಹಿರಿಯ ನಟಿ ಭಾರ್ಗವಿ ನಾರಾಯಣ್ ವಿಧಿವಶರಾಗಿದ್ದಾರೆ.
ಭಾರ್ಗವಿ ನಾರಾಯಣ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರದ ನಟಿ ಮತ್ತು ಕರ್ನಾಟಕದ, ರಂಗಭೂಮಿಯ ಕಲಾವಿದೆ. ಭಾರ್ಗವಿ ನಾರಾಯಣ್ ಅವರ ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ. ಎರಡು ಕನಸು, ಪಲ್ಲವಿ ಅನುಪಲ್ಲವಿ, ಹಾಗೂ ಬಾ ನಲ್ಲೆ ಮಧುಚಂದ್ರಕ್ಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಭಾರ್ಗವಿ ನಾರಾಯಣ್ ಅವರು ಇಪ್ಪತ್ತು ಚಿತ್ರಗಳು ಹಾಗೂ ದೂರದರ್ಶನ ಸರಣಿಯ ಮಂಥನಾ ಮತ್ತು ಮುಕ್ತಾ (ಟಿವಿ ಸರಣಿಗಳು) ಸೇರಿದಂತೆ ಕನ್ನಡದಲ್ಲಿ ಅನೇಕ ನಾಟಕಗಳನ್ನು ನಟಿಸಿದ್ದಾರೆ. ಅವರು ಎಐರ್ ನ ಮಹಿಳಾ ಕಾರ್ಯಕ್ರಮಗಳಿಗಾಗಿ ಮತ್ತು ಮಹಿಳಾ ಸಂಘದ ಮಕ್ಕಳಿಗಾಗಿ ಕರ್ನಾಟಕ ನಾಟಕಗಳನ್ನು ಬರೆದಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ. ಅವರು ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಕಲೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮುನ್ನ, ಭಾರ್ಗವಿ ಅವರು ಬೆಂಗಳೂರಿನ ಇಎಸ್‌ಐ ಕಾರ್ಪೊರೇಶನ್ ಅಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಅವರು ಬೆಂಗಳೂರಿನ ಅಂಕಿತಾ ಪುಸ್ತಕ ಪ್ರಕಟಿಸಿದ ‘ನಾ ಕ0ಡ ನಮ್ಮವರ’ ಎಂಬ ಕನ್ನಡದಲ್ಲಿ ಪುಸ್ತಕವನ್ನು ಬರೆದಿದ್ದಾರೆ.
ಭಾರ್ಗವಿಯವರು 1938 ಫೆಬ್ರವರಿ 4ನೇ ತಾರೀಕಿನಂದು ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿಯವರಿಗೆ ಜನಿಸಿದರು. ಬಳಿಕ ಕನ್ನಡ ಚಲನಚಿತ್ರ ನಟ ನಂಜುಂಡಯ್ಯ ನಾರಾಯಣ ಅವರನ್ನು ಮದುವೆಯಾದರು. ಸುಜಾತಾ, ನಟ ಪ್ರಕಾಶ್ ಬೆಳವಾಡಿ, ಪ್ರದೀಪ್ ಮತ್ತು ನಟಿ ಸುಧಾ ಬೆಳವಾಡಿ ಇವರ ಮಕ್ಕಳು.
ಪ್ರಶಸ್ತಿಗಳು
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು – ಅತ್ಯುತ್ತಮ ಪೋಷಕ ನಟಿ (1974-75)
ಕರ್ನಾಟಕ ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿಗಳು (1998)
ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ
ಆಳ್ವಾಸ್ ನಡಿಸಿರಿ ಪ್ರಶಸ್ತಿ(2005)
ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ – ಅತ್ಯುತ್ತಮ ನಟಿ (ಎರಡು ಬಾರಿ)
ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ (1974-75) – ರಾಜ್ಯ ಮಟ್ಟದ ಪ್ರಶಸ್ತಿ
ಸಿನಿಮಾಗಳು..
ಪ್ರೊಫೆಸರ್ ಹುಚ್ಚೂರಾಯ
ಪಲ್ಲವಿ
ಮುಯ್ಯಿ
ಅಂತಿಮ ಘಟ್ಟ
ಜಂಬೂ ಸವಾರಿ
ಕಾದ ಬೆಳದಿಂಗಳು
ಇದೊಳ್ಳೆ ರಾಮಾಯಣ