Headlines

70 ಸಾವಿರ ರೂ. ಲಂಚ ಪಡೆಯುತ್ತಿದ್ದ ಪಿಡಿಒ ಮೇಲೆ ಎಸಿಬಿ ದಾಳಿ

ಬಿಳಕಿ ಗ್ರಾಮಪಂಚಾಯಿತಿ ಪಿಡಿಒ ಭ್ರಷ್ಟಾಚಾರ ನಿಗ್ರಹದಳದ (ACB) ಬಲೆಗೆ ಬಿದ್ದಿದ್ದಾನೆ. ಪಿಡಿಒ ಕೇಶವ ಮೂರ್ತಿ 70 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ.
ಇ-ಸ್ವತ್ತಿನಲ್ಲಿ ರಿಲೀಸಿಂಗ್ ಡೀಡ್ ಮಾಡಿಕೊಡಲು ಹರೀಶ್ ಎಂಬುವರ ಬಳಿ ಪಿಡಿಒ ಕೇಶವ ಮೂರ್ತಿ 1 ಲಕ್ಷ ರೂ ಹಣದ ಬೇಡಿಕೆ ಇಟ್ಟಿದ್ದನು.  ಈ ಕುರಿತು 5 ಸಾವಿರ ರೂ ಮುಂಗಡವಾಗಿ ಹಣ ಪಡೆದು ಉಳಿದ ಹಣ ಕೆಲಸ ಮುಗಿದ ಮೇಲೆ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಇಂದು ಶಿವಮೊಗ್ಗ ತಾಲೂಕಿನ ಬಿಳಕಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಹರೀಶ್ ಬಳಿ ಕೇಶವ ಮೂರ್ತಿ 70 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಶಿವಮೊಗ್ಗ ACB ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಧಿಕಾರಿಗಳಾದ ವಸಂತ್ ಕುಮಾರ್, ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.

About The Author

Leave a Reply

Your email address will not be published. Required fields are marked *