January 11, 2026

ಶಿವಮೊಗ್ಗ ಜಿಲ್ಲೆಯಲ್ಲಿಂದು ಕೊರೊನಾ ಸ್ಫೋಟ: ಇಂದು ಒಂದೇ ದಿನ ಶತಕ ದಾಟಿದ ಸೋಂಕಿತರ ಸಂಖ್ಯೆ !

ಶಿವಮೊಗ್ಗ: ಜಿಲ್ಲೆಯಲ್ಲಿಂದು ಕೊರೊನಾ ಸ್ಫೋಟವಾಗಿದ್ದು ಇಂದು ಒಂದೇ ದಿನ 116 ಮಂದಿ ಸೋಂಕು ತಗುಲಿದೆ. ಇದರಿಂದ ಜಿಲ್ಲೆಯ ಜನರಲ್ಲಿಮತ್ತಷ್ಟು ಆತಂಕ ಹೆಚ್ಚಾಗಿದೆ.


ಕೊರೋನದ ನಾಗಲೋಟ ನಾಲ್ಕನೇ ದಿನವೂ ಮುಂದುವರೆದಿದೆ.  ವೀಕೆಂಡ್ ಕರ್ಫ್ಯೂಗೆ ಕೊರೋನ‌ ಶತಕ ಭಾರಿಸಿದೆ.  ಜ.6 ರಂದು 19 ಜನರಲ್ಲಿದ್ದ ಕೊರೋನ, ಜ.6 ರಂದು 23 ಜನರಲ್ಲಿ ಕಾಣಿಸಿಕೊಂಡಿತು. ಜ.7 ರಂದು 59 ಜನರಲ್ಲಿದ್ದ ಕೊರೋನ‌ ಇಂದು116 ಜನರಲ್ಲಿ ಪತ್ತೆಯಾಗಿದೆ.  ಆದರೆ ಸೋಂಕಿಗೆ ಯಾರು ಬಲಿಯಾಗಿಲ್ಲವಾದ್ದರಿಂದ, ಸಾವಿನ ಸಂಖ್ಯೆ  1072 ರಲ್ಲೇ ಇದೆ.

ತಾಲೂಕುವಾರು ಸೋಂಕಿತರ ವಿವರ:

ಶಿವಮೊಗ್ಗ 89
ಭದ್ರಾವತಿ 12
ಶಿಕಾರಿಪುರ 6
ಹೊಸನಗರ 03
ತೀರ್ಥಹಳ್ಳಿ 01
ಸಾಗರ 01
ಸೊರಬ 01

About The Author

Leave a Reply

Your email address will not be published. Required fields are marked *