ಕರ್ನಾಟಕ ರಾಜ್ಯ ಕಿರಿಯರ ವಾಲಿಬಾಲ್ ತಂಡಕ್ಕೆ ರಿಪ್ಪನ್ ಪೇಟೆಯ ಯುವಕ ಆಯ್ಕೆ :
ರಿಪ್ಪನ್ ಪೇಟೆ : ಪಶ್ಚಿಮ ಬಂಗಾಳ ದ ಬುಡ್ವಾರ್ನ್ ಜಿಲ್ಲೆ ಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಕಿರಿಯರ ವಾಲಿಬಾಲ್ ಪಂದ್ಯಾಟಕ್ಕೆ, ಕರ್ನಾಟಕ ರಾಜ್ಯವನ್ನು ಪ್ರತಿನಿದಿಸುವ ಅವಕಾಶವನ್ನು ರಿಪ್ಪನ್ ಪೇಟೆ ಯ ವಾಲಿಬಾಲ್ ಆಟಗಾರ ವರುಣ್ ಆರ್ ಎಂ ಪಡೆದಿದ್ದಾರೆ. ರಾಷ್ಟೀಯ ಮಟ್ಟದ ಕಿರಿಯರ ವಾಲಿಬಾಲ್ (18ವರ್ಷದೊಳಗಿನ ವಯೋಮಿತಿ ) ಪಂದ್ಯವು ಇದೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ. ರಿಪ್ಪನ್ ಪೇಟೆಯ ಚೌಡೇಶ್ವರಿ ಬೀದಿಯ ನಿವಾಸಿಗಳಾದ ಮಂಜುನಾಥ್ ಆಚಾರ್ ಹಾಗೂ ಕಮಲ ದಂಪತಿಗಳ ತೃತೀಯ ಪುತ್ರನಾದ ವರುಣ್ ಎಂ…