w
Headlines
Home » ಶಿವಮೊಗ್ಗ ಕೃಷಿ ಕಾಲೇಜಿನ ಪ್ರೊಫೆಸರ್ ಚಿಕ್ಕಬಾಸೂರು ಕೆರೆಯಲ್ಲಿ ಶವವಾಗಿ ಪತ್ತೆ :

ಶಿವಮೊಗ್ಗ ಕೃಷಿ ಕಾಲೇಜಿನ ಪ್ರೊಫೆಸರ್ ಚಿಕ್ಕಬಾಸೂರು ಕೆರೆಯಲ್ಲಿ ಶವವಾಗಿ ಪತ್ತೆ :

ಶಿವಮೊಗ್ಗ : ಇಲ್ಲಿನ ಕೃಷಿ ಕಾಲೇಜಿನ ಜಿ.ಪಿ.ಬಿ. ವಿಭಾಗದ ಮುಖ್ಯಸ್ಥರಾದ ಪ್ರೊ. ಗಂಗಾಪ್ರಸಾದ್ ಅವರ ಮೃತದೇಹ ಹೊನ್ನಾಳಿ ತಾಲೂಕಿನ ಸ ಸಾಸ್ವೆಹಳ್ಳಿ ಸಮೀಪದ ಚಿಕ್ಕಬಾಸೂರು ತಾಂಡದ (ವಿಜಯಪುರ) ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಶಿವಮೊಗ್ಗ ಬಸವೇಶ್ವರ ನಗರದ ನಿವಾಸಿಯೂ, ಅಪಾರ ವಿದ್ಯಾರ್ಥಿಗಳ ಆಪ್ತ ಗುರುಗಳೂ ಆಗಿದ್ದ ಗಂಗಾಪ್ರಸಾದ್ (59) ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ.ಕೆರೆ ಮಗ್ಗುಲಲ್ಲಿ ಅವರ ಪ್ಯಾಂಟ್, ಚಪ್ಪಲಿ ಪತ್ತೆಯಾಗಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ತಾಂಡ( ವಿಜಯಪುರ) ಬಳಿ ಪತ್ತೆಯಾಗಿರುವ ಇವರ ಶವವನ್ನು ಕಾಲೇಜಿನ ವಿದ್ಯಾರ್ಥಿಯೋರ್ವ ಪತ್ತೆ ಹಚ್ಚಿದ್ದರೆನ್ನಲಾಗಿದೆ. ಅವರನ್ನು ಶಿವಮೊಗ್ಗ ಅಗ್ರಿಕಲ್ಚರಲ್ ಕಾಲೇಜಿನ ಪ್ರೊ.ಗಂಗಾಪ್ರಸಾದ್ ಶವ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ   ಕಾರಣ ಇನ್ನಷ್ಟೆ ತಿಳಿದುಬರಬೇಕಿದೆ. 

ಆತ್ಮಹತ್ಯೆ, ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.