January 11, 2026

ಶಿವಮೊಗ್ಗ : ನಾಪತ್ತೆಯಾಗಿದ್ದ ಜಿಲ್ಲಾಧಿಕಾರಿ ಕಛೇರಿಯ ನೌಕರ ಗಿರಿರಾಜ್ ಧರ್ಮಸ್ಥಳದಲ್ಲಿ ಪತ್ತೆ :

ಶಿವಮೊಗ್ಗ : ಕಳೆದ 11 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿಯಿಂದ  ಐಎಎಸ್ ಅಧಿಕಾರಿ ವಿರುದ್ಧ ಆರೋಪಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಡೆತ್ ನೋಟ್ ವಾಟ್ಸಪ್ ಮೆಸೇಜ್ ಮಾಡಿದ್ದ ಜಿಲ್ಲಾಧಿಕಾರಿ ಕಚೇರಿ ನೌಕರ ಗಿರಿರಾಜ್ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ.

ಧರ್ಮಸ್ಥಳದ ಕಟ್ಟೆಯೊಂದರ ಮೇಲೆ ಸುಸ್ತಾಗಿ ಮಲಗಿದ್ದ ಗಿರಿರಾಜ್ ರವರನ್ನ ಆಡಳಿತ ಮಂಡಳಿಯೋರ್ವರು ಗುರುತು ಹಿಡಿದು ಮೊಬೈಲ್ ಆನ್ ಮಾಡಿದಂತೆ ಮೊಬೈಲ್ ಟ್ರೇಸ್ ಔಟ್ ಆಗಿದೆ ಎನ್ನಲಾಗಿದೆ.
ಅವರನ್ನ ಉಪಚರಿಸಿ ಧರ್ಮಸ್ಥಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಗಿರಿರಾಜ್ ಮಿಸ್ಸಿಂಗ್ ಕೇಸ್ ಜೀವಂತವಾಗಿ ಸಿಗುವ ಮೂಲಕ ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳಲ್ಲಿ ಸಂತಸ ತಂದಿದೆ. 

ಆದರೆ ಇವರು ಮಾಡಿರುವ ಆರೋಪಗಳು ಗಂಭೀರವಾಗಿರುವುದರಿಂದ ಇಲಾಖೆ ಏನೂ ತೀರ್ಮಾನ ಕೈಗೊಳ್ಳುವುದು ಕಾದು ನೋಡಬೇಕಾಗಿದೆ.

ಅವರನ್ನು ಧರ್ಮಸ್ಥಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಇದರಿಂದಾಗಿ ಮಿಸ್ಸಿಂಗ್ ಕೇಸ್ ಸುಖಾಂತ್ಯವಾಗಿದೆ.

ಶಿವಮೊಗ್ಗದ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಧರ್ಮಸ್ಥಳಕ್ಕೆ ತೆರಳಿದ್ದಾರೆ.

About The Author

Leave a Reply

Your email address will not be published. Required fields are marked *