January 11, 2026

ಶಿವಮೊಗ್ಗ : ಅನ್ನದಾತರನ್ನು ಕೊಂದವರು ಅಧಿಕಾರದಲ್ಲಿರೋದು ಬೇಡ : ಕಾಂಗ್ರೆಸ್ ಮೌನ ಪ್ರತಿಭಟನೆ

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗದ ಪಾರ್ಕ್‌ನಲ್ಲಿರೋ ಗಾಂದಿ ಪ್ರತಿಮೆಯ ಮುಂದೆ ಮೌನ ಪ್ರತಿಭಟನೆಯನ್ನ ನಡೆಸಲಾಯಿತು. 


ಉತ್ತರ ಪ್ರದೇಶದ ಲಿಕ್ಕಿಂಪೂರ ಖೇರಿಯಲ್ಲಿ ನಡೆದ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ರವರ ಮಗ ಆಶಿಶ್ ಮಿಶ್ರಾ ಜೀಪನ್ನು ಹಾಯಿಸಿ ಹತ್ಯೆಗೈದವರ ವಿರುದ್ಧ ಮೌನ ಪ್ರತಿಭಟನೆ ಮಾಡಲಾಯಿತು.

ಕೇಂದ್ರದಲ್ಲಿ ಅಧಿಕಾರದಲಿ ಮೋದಿ ನೇತೃತ್ವದ ಬಿ.ಜೆ.ಪಿ ಸರ್ಕಾರ ಇಷ್ಟು ದೊಡ್ಡ ಕೃತ್ಯದಲ್ಲಿ ಆರೋಪಿಯಾಗಿರೋ ಅಜಯ್‌ ಮಿಶ್ರ ಪುತ್ರನ ಆಶಿಶ್‌ ಮಿಶ್ರ ಬಂದಿತನಾಗಿದ್ದು ಈತನ ತನಿಖೆಯ ನಡೆಸಲು ಅಜಯ್‌ ಮಿಶ್ರ ಪ್ರಭಾವಬೀರುತ್ತಿದ್ದು ಅವರ ರಾಜೀನಾಮೆಯಲ್ಲಿ ಕೂಡಲೆ ಪಡೆದುಕೊಳ್ಳಬೇಕು. ಈ ವಿಷಯದ ಬಗ್ಗೆ ಮೋದಿ ನೇತೃತ್ವದ ಬಿ.ಜೆ.ಪಿ ಸರ್ಕಾರ ಯಾವುದೇ ತಲೆಕೆಡಿಸಿಕೊಳ್ಳುತ್ತಿಲ್ಲಾ ಇದರ ಅರ್ಥ ಪರೋಕ್ಷವಾಗಿ ಕೇಂದ್ರ ಸರ್ಕಾರ ಆರೋಪಿಯ ಬೆಂಬಲಕ್ಕೆ ನಿಂತಿದೆಯಾ ಅನ್ನೋ ಪ್ರಶ್ನೆ ಕಾಡುತ್ತೆ ಎಂದು ಕಾಂಗ್ರೆಸ್‌ ಜಿಲ್ಲಾದ್ಯಕ್ಷ ಹೆಚ್‌.ಎಸ್‌ ಸುಂದರೇಶ್‌ ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ ಬಿ ಪ್ರಸನ್ನ ಕುಮಾರ್,ವೈ ಹೆಚ್.ನಾಗರಾಜ್,ಶೇಷಾದ್ರಿ,ಚಂದ್ರ ಭೂಪಾಲ್,ಮೊಹಮ್ಮದ್ ಆರಿಫ್ ಉಲ್ಲ,ಹೆಚ್. ಸಿ.ಯೋಗೀಶ್,ಯಮುನಾ ರಂಗೇಗೌಡ,ಸುವರ್ಣ ,ವಿವಿಧ ಘಟಕಗಳ ಪದಾಧಿಕಾರಿಗಳು,ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಎನ್ ಡಿ ಪ್ರವೀಣ್ ಕುಮಾರ್ ಮುಂತಾದವರಿದ್ದರು

About The Author

Leave a Reply

Your email address will not be published. Required fields are marked *