ಶಿವಮೊಗ್ಗ : ಗಾಂಜಾ ಗಿರಾಕಿಗಳಿಗೆ ಬಿಗ್ ಶಾಕ್ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ. ಗಾಂಜಾ ಅಥವಾ ನಾರ್ಕೋಟಿಕ್ ವಸ್ತು ಸೇವಿಸಿದವರ ಮೂತ್ರ ಪರೀಕ್ಷೆ ನಡೆಸಿ ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ವಿಶೇಷ ಟೆಸ್ಟಿಂಗ್ ಕಿಟ್ ನ್ನ ಅಳವಡಿಸಿಕೊಳ್ಳುತ್ತಿದೆ.
ಈ ಮೊದಲು ಗಾಂಜಾ ಸೇವಿಸಿದವರ ರಕ್ತಪರೀಕ್ಷೆ, ಕೂದಲು ಪರೀಕ್ಷೆಗೆ ಒಳಪಡಿಸಿ ದಿನಗಟ್ಟಲೆ ಕಾಯುವ ಸ್ಥಿತಿ ಇತ್ತು. ಆದರೆ ಈಗ ಸಮಯವನ್ನ ಉಳಿಸುವ ಸಲುವಾಗಿ ಈ ವಿಶೇಷ ಟೆಸ್ಟಿಂಗ್ ಕಿಟ್ ನ್ನು ಬಳಸಲು ಪೊಲೀಸ್ ಇಲಾಖೆ ಸಿದ್ದವಾಗಿದೆ.ಮೆಗ್ಗಾನ್ ಆಸ್ಪತ್ರೆಯಲ್ಲಿ ಈ ಕಿಟ್ ಇರಿಸಲಾಗಿದೆ.
ಕೊರೋನ ಪರೀಕ್ಷೆ ನಡೆಸುವ ರಾಪಿಡ್ ಅಂಟಿಜೆಂಟ್ ಟೆಸ್ಟ್ ಮಾಡುವ ಕಾರ್ಯವೈಖರಿಯನ್ನೇ ಈ ವಿಶೇಷ ಟೆಸ್ಟಿಂಗ್ ಕಿಟ್ ಮಾಡಲಿದೆ. ಮಾದಕ ವಸ್ತು ಸೇವಿಸಿದವನ ಮೂತ್ರದ ಹುಂಡನ್ನ ಈ ಕಿಟ್ ನ ಪ್ಯಾಡ್ ಗೆ ಹಾಕಿದರೆ ಸಾಕು ಆತನ ಫಲಿತಾಂಶವನ್ನ ಕಿಟ್ ಕ್ಷಣಮಾತ್ರದಲ್ಲಿ ಹೇಳಿಬಿಡುತ್ತದೆ.
ಇದು ಬೆಂಗಳೂರಿನಲ್ಲಿ ಈಗಾಗಲೇ ಇದೆ. ಇದನ್ನ ಈಗ ಶಿವಮೊಗ್ಗದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.
ದೊಡ್ಡಪೇಟೆಯ ಇಬ್ಬರು ಆರೋಪಿತರನ್ನ ಇಂದು ಈ ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪ ಸಾಬೀತಾದರೆ 10 ಸಾವಿರ ರೂ.ದಂಡ 6 ತಿಂಗಳು ಕಾರಾಗೃಹ ಶಿಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.