ಶಿವಮೊಗ್ಗ : ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ಶಿಕ್ಷಣ ನೀತಿಯನ್ನ ಸಾರ್ವಜನಿಕವಾಗಿ ಚರ್ಚಿಸಿ ನಂತರ ಜಾರಿಗೆ ತರಬೇಕೆಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.
ಅವರು ಇಂದು ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ನಡೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ಶಿಕ್ಷಣ ನೀತಿಯನ್ನ ಸಾರ್ವಜನಿಕವಾಗಿ ಚರ್ಚೆಗೆ ಬಿಟ್ಟು ಜಾರಿಗೊಳಿಸಬೇಕು ಇಲ್ಲವಾದಲ್ಲಿ ಇದು ಪ್ರಜಾಪ್ರಭುತ್ವ ವಿರೋಧಿ ನೀತಿ ಆಗಲಿದೆ ಎಂದರು.
ಒಂದು ವರ್ಷ ತಡವಾಗಿಯಾದರೂ ಜಾರಿಗೆ ತಂದರೂ
ಪರವಾಗಿಲ್ಲ. ಆದರೆ ಶಿಕ್ಷಣ ನೀತಿಯನ್ನ ಸಾರ್ವಜನಿಕ ಚರ್ಚೆಗೆ ತಂದು ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಕೆ.ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತೀರ್ಥಹಳ್ಳಿಯಲ್ಲಿ ಆರ್ ಎಂ ಮಂಜುನಾಥ ಗೌಡರು ಎಲ್ಲಾ ವಿಷಯದಲ್ಲಿಯೂ ಮೂಗು ತೂರಿಸಿಕೊಂಡು ಬರುತ್ತಿರುವ ವಿಷಯದಲ್ಲಿ ನನಗೆ ಏಕವಚನದಲ್ಲಿ ಮಾತನಾಡಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಕಿಮ್ಮನೆ ರತ್ನಾಕರ್
ಸ್ಪಷ್ಟಪಡಿಸಿದ್ದಾರೆ. ತೀರ್ಥಹಳ್ಳಿ ರಾಜಕೀಯ ವಿಷಯ ಕುರಿತಂತೆ ಡಿ.ಕೆ.ಶಿವಕುಮಾರ್ ಎದುರು ಯಾವ ವಿಷಯವೂ ಚರ್ಚೆಗೆ ಬಂದಿಲ್ಲವೆಂದು ಸ್ಪಷ್ಟಪಡಿಸಿದರು.