Headlines

ಕುಂಸಿ : ಬಹಿರ್ದೆಸೆಗೆಂದು ಹೊರಹೋಗಿದ್ದ ನಾಲ್ಕು ವರ್ಷದ ಮಗು ಶವವಾಗಿ ಪತ್ತೆ:

ಕುಂಸಿ : ಬಹಿರ್ದೆಸೆಗೆ ತೆರಳಿದ್ದ ನಾಲ್ಕು ವರ್ಷದ ಮಗು ಸೋಮವಾರದಿಂದ ಕಾಣೆಯಾಗಿದ್ದು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಮಗುವಿನ ಕೊಲೆಯ ಬಗ್ಗೆ  ಶಂಕೆ ವ್ಯಕ್ತವಾಗಿದೆ. ಸೋಮವಾರದಂದು ಕಾಣೆಯಾಗಿದ್ದ ಮಗು ಇಂದು ಮುಂಜಾನೆ ಮನೆಯಿಂದ 1½ ಕಿಮಿ ದೂರದಲ್ಲಿ ಶವವಾಗಿ ಪತ್ತೆಯಾಗಿದೆ.

ಜಿಲ್ಲೆಯ ಗಡಿಭಾಗದ ರಟ್ಟೆಹಳ್ಳಿಯಲ್ಲಿ ಆ.30 ರಂದು ಸಂಜು ಎಂಬ ನಾಲ್ಕು ವರ್ಷದ ಮಗು ಸಂಜು ಬಹಿರ್ದೆಸೆಗೆ ಹೋಗಿದ್ದವರು ಮನೆಗೆ ವಾಪಾಸಾಗಿರಲಿಲ್ಲ. ಸಂಜೆಯ ವರೆಗೆ ಹುಡುಕಿದ ಪೋಷಕರು ಕೊನೆಯಲ್ಲಿ ಕುಂಸಿ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ.

ಆದರೆ ಇಂದು ರಟ್ಟೆಹಳ್ಳಿಯ ಮನೆಯಿಂದ 1½ ಕಿಮಿ ದೂರದಲ್ಲಿ ಮಗು ಹಳ್ಳವೊಂದರಲ್ಲಿ ಶವವಾಗಿ ಪತ್ತೆಯಾಗುತ್ತದೆ. ಮನೆಯವರು ಇದೊಂದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಆ.30 ರಂದು ತಂದೆ ಬಸವರಾಜು ಶುಂಠಿ ನಾಟಿಕೆಲಸಕ್ಕೆ ಹೋದಾಗ ಮನೆಯಲ್ಲಿದ್ದ ಸಂಜು ಮನೆ ಪಕ್ಕದ ಬಯಲಿನಲ್ಲಿ ಬಹಿರ್ದೆಸೆಗೆ ತೆರಳಿದ್ದನು. ಮಗ ಬರುತ್ತಾನೆ ಎಂದು ಕಾದು ಕುಳಿತಿದ್ದ ಮಂಜುಳ ಮಗ 15 ನಿಮಿಷ ಕಳೆದರೂ ಬಾರದ ಹಿನ್ನಲೆಯಲ್ಲಿ ಆತಂಕಗೊಂಡು ಮಾಮೂಲಿ ಬಹಿರ್ದೆಸೆಗೆ ತೆರಳುವ ಜಾಗ ಪರಿಶೀಲಿಸಲು ಮುಂದಾಗಿದ್ದಾರೆ.ಕೆಲಸಕ್ಕೆ ಹೋಗಿದ್ದ ಬಸವರಾಜ್ ಮನೆಗೆ ಬಂದು ಮಗನನ್ನ ಹುಡುಕಲು ಮುಂದಾಗಿದ್ದಾರೆ. ಕೊನೆಯಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 ಇಂದು ಸಂಜು ಬೆಳಿಗ್ಗೆ 6-30 ಕ್ಕೆ ಹೆಣವಾಗಿ ಪತ್ತೆಯಾಗಿದ್ದಾನೆ. ಶವ ಸಿಕ್ಕಿದ ಸ್ಥಳ‌ ಮನೆಯಿಂದ ಒಂದು ಕಿಮಿ ದೂರ ಇದೆ. ನೀರಿನ ಕಾನೆ ಇದೆ ಕಾನೆ ದಾಟಿ ಇಷ್ಟು ಸಣ್ಣ ಮಗು ಹೋಗಲು ಸಾಧ್ಯವಿಲ್ಲ. ಹಾಗಾಗಿ ಕೊಲೆಯಾಗಿದೆ ಎಂಬುದು ಪೋಷಕರ ಅನುಮಾನವಾಗಿದೆ.

ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

About The Author

Leave a Reply

Your email address will not be published. Required fields are marked *