w
Headlines
Home » ಸಹೃದಯಿ ಶಾಸಕ ಕುಮಾರ್ ಬಂಗಾರಪ್ಪರವರಿಗೆ ಸಚಿವ ಸ್ಥಾನ ನೀಡಿ: ಸಿಗಂದೂರು ಧರ್ಮದರ್ಶಿ ರಾಮಪ್ಪ

ಸಹೃದಯಿ ಶಾಸಕ ಕುಮಾರ್ ಬಂಗಾರಪ್ಪರವರಿಗೆ ಸಚಿವ ಸ್ಥಾನ ನೀಡಿ: ಸಿಗಂದೂರು ಧರ್ಮದರ್ಶಿ ರಾಮಪ್ಪ

ಸೊರಬ:ಬಸವರಾಜ ಬೊಮ್ಮಾಯಿರವರ ನೂತನ ಸಚಿವ ಸಂಪುಟದಲ್ಲಿ ಶಾಸಕರಾದ ಕುಮಾರ್ ಬಂಗಾರಪ್ಪನವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಸಿಗಂದೂರು ದೇವಸ್ಥಾನದ ಧರ್ಮದರ್ಶಿಗಳಾದ ರಾಮಪ್ಪನವರ ನೇತ್ರತ್ವದಲ್ಲಿ ಶಾಸಕರ ಬೆಂಬಲಿಗರೊಂದಿಗೆ ಸೊರಬದ  ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
 
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮದರ್ಶಿಗಳಾದ ರಾಮಪ್ಪನವರು ಸಹೃದಯಿ ಜನರ ಕಷ್ಟಕ್ಕೆ ಸ್ಪಂದಿಸುವ ಶಾಸಕ ಕುಮಾರ್ ಬಂಗಾರಪ್ಪನವರಿಗೆ ಸಚಿವ ಸ್ಥಾನ ಸಿಗಲಿ ಎಂದು ಸ್ವಾಮಿಯಲ್ಲಿ ಬೇಡಿಕೊಂಡೆವು, ಅವರಿಗೆ ಈ ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.
ನಂತರ ಮಾತನಾಡಿದ ಪುರಸಭೆ ಅಧ್ಯಕ್ಷರಾದ ಎಂ ಡಿ ಉಮೇಶ್ ರವರು  ಯುವ ನಾಯಕರು ಅಭಿವೃದ್ಧಿ ಹರಿಕಾರರು ಜನ ಸೇವಕರೂ ಆದ ಕುಮಾರ್ ಬಂಗಾರಪ್ಪನವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ದೊರೆಯಲಿ ಎಂದು ಆದಿ ದೇವರಾದ ಶ್ರೀ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿದೆವು ಎಂದರು.

 ಪುರಸಭೆ ಉಪಾಧ್ಯಕ್ಷರಾದ ಮಧುರಾಯ್ ಜಿ ಶೇಟ್ ಮಾತನಾಡಿ ಎಸ್ ಆರ್ ಬೊಮ್ಮಾಯಿ ಅವರ ಸುಪುತ್ರರಾದ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ಕುಮಾರ್ ಬಂಗಾರಪ್ಪನವರಿಗೆ ನೀಡಿ ರಾಜ್ಯದ ಉದ್ಧಾರಕ್ಕಾಗಿ ಮತ್ತು ತಾಲ್ಲೂಕಿನ ಉದ್ಧಾರಕ್ಕಾಗಿ ಸಹಕರಿಸಬೇಕೆಂದು ಹೇಳಿದರು.

       ನಂತರ ಮಾತನಾಡಿದ ಬಿಜೆಪಿ ಮುಖಂಡರಾದ ಕಡಸೂರು ಶಿವಕುಮಾರ್ ರವರು ಯಡಿಯೂರಪ್ಪ ,ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಹಾಗೂ ಬಸವರಾಜ್ ಬೊಮ್ಮಾಯಿ ರವರಲ್ಲಿ ವಿನಂತಿಪೂರ್ವಕ ಮನವಿ ಮಾಡಿಕೊಳ್ಳುತ್ತೇವೆ ದಯವಿಟ್ಟು ಈ ಬಾರಿ ಕುಮಾರ್ ಬಂಗಾರಪ್ಪ ರವರಿಗೆ ಅವಕಾಶ ನೀಡಬೇಕು ಎಂದರು.

ಬಗರ್ ಹುಕುಂ ಸಮಿತಿಯ ಸದಸ್ಯರಾದ ದೇವೇಂದ್ರಪ್ಪ ಚನ್ನಾಪುರ ರವರು ಮಾತನಾಡಿ  ಸೊರಬ ತಾಲ್ಲೂಕಿನ ಎಲ್ಲಾ ರೀತಿಯ ಜನಾಂಗದವರ ಅಭಿವೃದ್ಧಿಗೋಸ್ಕರ ಶಾಸಕರಿಗೆ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಲಿ ಎಂದು ಶ್ರೀರಂಗನಾಥ ಸ್ವಾಮಿಯನ್ನು ಪ್ರಾರ್ಥಿಸಿ ಕೊಂಡೆವು ಎಂದು ಹೇಳಿದರು 

      ಈ ಸಂದರ್ಭದಲ್ಲಿ  ಈಶ್ವರ ಚನ್ನಪಟ್ಟಣ ರಾಜು ಕೆಂಚಿಕೊಪ್ಪ ಯೂಸುಫ್ ಸಾಬ್,ಪಾಂಡುರಂಗ,ಕನಕದಾಸಕಲ್ಲಂಬಿ,ಜಾನಕಪ್ಪ ಒಡೆಯರ್ಶಿ,ಶಿವು ಆಟೊ ಮತ್ತಿತರರು ಉಪಸ್ಥಿತರಿದ್ದರು.

ವರದಿ: ವೆಂಕಟೇಶ್ ಚಂದ್ರಗುತ್ತಿ 





ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..




Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.