ರಿಪ್ಪನ್ ಪೇಟೆ: ರಿಪ್ಪನ್ ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯತ್ ನ ಚಂದಳ್ಳಿ ಗ್ರಾಮದ ಚಂದ್ರಮ್ಮ ರವರ 28 ವಯಸ್ಸಿನ ಪುತ್ರಿ ಚೇತನಳಿಗೆ ಬಾಲ್ಯದಿಂದಲು ಮದುಮೇಹ ಕಾಯಿಲೆ ಆವರಿಸಿದ್ದು,ಈ ಖಾಯಿಲೆಯಿಂದ ದೃಷ್ಟಿಯನ್ನು ಕಳೆದುಕೊಂಡಿದ್ದು,ನಡೆದಾಡುವ ಸ್ಥಿತಿಯಲ್ಲಿರದ ಮಗಳನ್ನು 28 ವರ್ಷದಿಂದ ತಾಯಿಯೊಬ್ಬರೇ ಕಷ್ಟದಿಂದ ಸಾಕುತಿದ್ದಾರೆ.ಈ ವಿಚಾರ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ ರವರ ಗಮನಕ್ಕೆ ಬಂದ ತಕ್ಷಣ ಹುಂಚ ಮಠದ ಪರಮಪೂಜ್ಯ ಗುರುಗಳಾದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಹಾಗೂ ಮೂಲೆಗದ್ದೆ ಮಠದ ಪರಮಪೂಜ್ಯ ಗುರುಗಳಾದ ಅಭಿನವ ಚನ್ನಬಸವ ಮಹಾಸ್ವಾಮಿಗಳವರ ಗಮನಕ್ಕೆ ತಂದು ಮಠದಿಂದ ಆರ್ಥಿಕ ಸಹಾಯ ಮಾಡಿಸಿದ್ದಾರೆ.
ಇಂದು ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ರವರು ಸ್ವಾಮೀಜಿರವರು ನೀಡಿದ ಧನಸಹಾಯದ ಜೊತೆ ವೈಯಕ್ತೀಕವಾಗಿಯು ಚಿಕಿತ್ಸೆಯನ್ನು ಪಡೆಯಲು ಧನಸಹಾಯ ಮಾಡಿ,ಇನ್ನು ಮುಂದಿನ ಔಷದಿ ವೆಚ್ಚವನ್ನು ನಾನು ಹಾಗೂ ನನ್ನ ಸ್ನೇಹಿತರು ಭರಿಸುವ ಭರವಸೆ ನೀಡಿ ಆ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಈ ಸಂದರ್ಭದಲ್ಲಿ ಹುಂಚ ಮಠದ ಪ್ರತಿನಿಧಿ ವಂದನ್ ಜೈನ್ ,ನಂದೀಶ್ ಹುಂಚ ಹಾಗೂ ರಾಜೇಶ್ ಜೈನ್ ಉಪಸ್ಥಿತರಿದ್ದರು.