Headlines

ಆಟೋ ಚಾಲಕನನ್ನು ಅಡ್ಡಗಟ್ಟಿ 2 ಲಕ್ಷ ರೂಪಾಯಿ ದರೋಡೆ

ಆಟೋ ಚಾಲಕನನ್ನು ಅಡ್ಡಗಟ್ಟಿ 2 ಲಕ್ಷ ರೂಪಾಯಿ ದರೋಡೆ ಶಿವಮೊಗ್ಗ : ನಗರದ ಕೆ.ಆರ್. ಪುರಂ ಬಳಿ ಆಟೋ ಚಾಲಕರೊಬ್ಬರನ್ನು ಅಡ್ಡಗಟ್ಟಿ, ಲಕ್ಷಾಂತರ ರೂಪಾಯಿ ನಗದು ದರೋಡೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಿವಮೊಗ್ಗದ ವಿವಿದ ಆಟೋ ಸ್ಟ್ಯಾಂಡ್‌ನ ಚಾಲಕರು ಪ್ರತ್ಯೇಕವಾಗಿ ಮೂರು ಫಂಡ್‌ಗಳನ್ನು ಮಾಡಿಕೊಂಡಿದ್ದರು. ಪ್ರತಿ ಶನಿವಾರ ಈ ಫಂಡ್‌ಗಳಿಗೆ ಹಣ ಹಾಕಿ, ಅಗತ್ಯವಿರುವ ಆಟೋ ಚಾಲಕರಿಗೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದರಂತೆ,…

Read More

ಹುಂಚದಕಟ್ಟೆ ಸಮೀಪದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ರಿಪ್ಪನ್ ಪೇಟೆ ವ್ಯಕ್ತಿ  ಸಾವು

ಹುಂಚದಕಟ್ಟೆ ಸಮೀಪದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ರಿಪ್ಪನ್ ಪೇಟೆ ವ್ಯಕ್ತಿ  ಸಾವು ಭಾನುವಾರ ಬೆಳಗ್ಗೆ ಸೊಪ್ಪು ತರಲು ಕಾಡಿಗೆ ಹೋಗಿದ್ದ ಅವರು, ಬಹಳ ಹೊತ್ತಾದರೂ ವಾಪಸ್ ಬರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ, ಹೊಸಕೆರೆ ಕೆರೆಯಲ್ಲಿ ಕಾಲುಜಾರಿ ಬಿದ್ದು ದುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. ರಿಪ್ಪನ್‌ಪೇಟೆ: ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಕೆರೆಯಲ್ಲಿ ಕಾಲು ಜಾರಿ ಬಿದ್ದು ರಿಪ್ಪನ್ ಪೇಟೆ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಪಟ್ಟಣದ ಸಮೀಪದ ಕರಡಿಗ ಗ್ರಾಮದ…

Read More

ರೈಲ್ವೇ ಟ್ರ್ಯಾಕ್‌ನಲ್ಲಿ ನವವಿವಾಹಿತೆ ಶವ ಪತ್ತೆ ಪ್ರಕರಣ – ಪತಿ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

ರೈಲ್ವೇ ಟ್ರ್ಯಾಕ್‌ನಲ್ಲಿ ನವವಿವಾಹಿತೆ ಶವ ಪತ್ತೆ ಪ್ರಕರಣ – ಪತಿ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ ಕಳೆದ 7 ತಿಂಗಳ ಹಿಂದೆ ವಿದ್ಯಾಳ ಮದುವೆ ಮಾಡಲಾಗಿತ್ತು. ಪತಿ ಶಿವು ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರು ಬೆಂಗಳೂರಿನ ಶಂಕರಪುರಂನಲ್ಲಿ ವಾಸವಾಗಿದ್ದರು.ಜೂ.30ರಂದು ವಿದ್ಯಾ ಕಾಣೆಯಾಗಿದ್ದರು. ಈ ಕುರಿತು ಶಂಕರಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಏಳು ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆಯ ಶವ ರೈಲ್ವೇ ಟ್ರ್ಯಾಕ್‌ನಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರೆಂದು ಆರೋಪ ಕೇಳಿಬಂದಿದೆ. ಮೃತಳನ್ನು…

Read More

ಮನೆಯವರ ಬುದ್ದಿ ಮಾತಿಗೆ ಬೇಸತ್ತು ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿ ಸಾವು

ಮನೆಯವರ ಬುದ್ದಿ ಮಾತಿಗೆ ಬೇಸತ್ತು ನೇಣು ಬಿಗಿದುಕೊಂಡು 9 ನೇ ತರಗತಿ ವಿದ್ಯಾರ್ಥಿ ಸಾವು ಚೆನ್ನಾಗಿ ಓದಿಕೊಳ್ಳುವಂತೆ ಮನೆಯವರು ಹೇಳಿದ ಬುದ್ದಿ ಮಾತಿಗೆ ಮನನೊಂದು ನಿಖಿಲ್ ಆತ್ಮಹ**ತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿವೆ. ಈ ಕುರಿತಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ : ಮನೆಯಲ್ಲಿಯೇ ನೇ*ಣು ಬಿಗಿದುಕೊಂಡು ಹೈಸ್ಕೂಲ್ ವಿದ್ಯಾರ್ಥಿಯೋರ್ವ ಆತ್ಮಹ**ತ್ಯೆಗೆ ಶರಣಾದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಹೋಬಳಿಯ ತುಂಬೆ ಗ್ರಾಮದಲ್ಲಿ ನಡೆದಿದೆ. ನಿಖಿಲ್ (14) ಆತ್ಮಹ**ತ್ಯೆಗೆ ಶರಣಾದ ವಿದ್ಯಾರ್ಥಿ ಎಂದು…

Read More

ಹೊಸನಗರ : ಹಸುವಿನ ಕೆಚ್ಚಲು ಕೊ*ಯ್ದ ಪ್ರಕರಣ – ಆರೋಪಿ ರಾಮಚಂದ್ರ ಅರೆಸ್ಟ್

ಹೊಸನಗರ : ಹಸುವಿನ ಕೆಚ್ಚಲು ಕೊ*ಯ್ದ ಪ್ರಕರಣ – ಆರೋಪಿ ರಾಮಚಂದ್ರ ಅರೆಸ್ಟ್ ಹೊಸನಗರ ; ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇಲಿನಸಂಪಳ್ಳಿ ಗ್ರಾಮದ ವಿಜಾಪುರ ನಿವಾಸಿ ರಾಮಚಂದ್ರ ಬಿನ್ ಹುಚ್ಚಾನಾಯ್ಕ ಬಂಧಿತ ಆರೋಪಿ. ಈತನ ವಿರುದ್ದ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ – 1960 (prevention of cruelty to animals act) ರ ಅಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ….

Read More

ವೃದ್ಧೆಯ ಸರ ಅಪಹರಣ ಪ್ರಕರಣ – ಇಬ್ಬರು ಸರಗಳ್ಳರ ಬಂಧನ

ವೃದ್ಧೆಯ ಸರ ಅಪಹರಣ ಪ್ರಕರಣ – ಇಬ್ಬರು ಸರಗಳ್ಳರ ಬಂಧನ ಶಿವಮೊಗ್ಗ: ಜೂನ್ 20ರಂದು ಬೆಳಗಿನ ಜಾವ ವೃದ್ಧೆಯೊಬ್ಬರ ಕೊರಳಿನಿಂದ 38 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಎನ್.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಚಿಪ್ಸ್ ವ್ಯಾಪಾರಿ ಸಾಗರ್ ಮತ್ತು ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಮಾರಶೆಟ್ಟಿಹಳ್ಳಿ ರಾಕೇಶ್ ಬಂಧಿತ ಆರೋಪಿಗಳು. ಎನ್.ಆರ್.ಪುರ ಪಟ್ಟಣದ ಕುರುಕುಬಳ್ಳಿ ಬಳಿ  64 ವರ್ಷ ವಯಸ್ಸಿನ ಮಹಿಳೆಯೊಬ್ಬರು ವಾಕ್ ಮಾಡುತ್ತಿದ್ದರು .  ಆವೇಳೆ  ಇಬ್ಬರು ಕಳ್ಳರು…

Read More

ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1.75 ಲಕ್ಷ ರೂ ಕಳ್ಳತನ

ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1.75 ಲಕ್ಷ ರೂ ಕಳ್ಳತನ ಶಿವಮೊಗ್ಗ : ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ನಿವಾಸಿ ಪಾಲಾಕ್ಷಮ್ಮ  ಅವರ  ಮಗಳು ಅಡಮಾನವಿಟ್ಟಿದ್ದ ಒಡವೆಗಳನ್ನು ಬಿಡಿಸಿಕೊಳ್ಳಲು ಹಣ ಬೇಕೆಂದು ಹೇಳಿದ್ದರಿಂದ ತಮ್ಮ ಗ್ರಾಮದ ಬಳಿ ಇರುವ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ೧,೭೫,೦೦೦ ಹಣವನ್ನು ಬಿಡಿಸಿಕೊಂಡು ಜೂನ್ ೧೪ರಂದು ಎನ್‌ಆರ್ ಪುರದಲ್ಲಿರುವ ಅವಳ…

Read More

ಸೂಟ್‌ಕೇಸಿನಲ್ಲಿ ಬಾಲಕಿ ಶವ ಪತ್ತೆ ಕೇಸ್‌ – ಅತ್ಯಾ*ಚಾರ ನಡೆಸಿ ಕೊಲೆಗೈದ 7 ಮಂದಿ ಬಂಧನ

ಸೂಟ್‌ಕೇಸಿನಲ್ಲಿ ಬಾಲಕಿ ಶವ ಪತ್ತೆ ಕೇಸ್‌ – ಅತ್ಯಾ*ಚಾರ ನಡೆಸಿ ಕೊಲೆಗೈದ 7 ಮಂದಿ ಬಂಧನ ರೈಲ್ವೆ ಬ್ರಿಡ್ಜ್ ಬಳಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ 17 ವರ್ಷದ ಯುವತಿಯ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾ*ಚಾರ ಮತ್ತು ಕೊಲೆ ಆರೋಪದ ಮೇಲೆ ಬಂಧಿತರ ಪೈಕಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ. ಬೆಂಗಳೂರು (ಜೂ.8): ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿಯ ರೈಲು ಹಳಿ ಬಳಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪ್ರಕರಣಕ್ಕೆ…

Read More

ಹನಿಮೂನ್ ಗೆ ಹೋದವ ಹೆಣವಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಕೊಲೆ ಹಿಂದೆ ಪತ್ನಿ ಕೈವಾಡ, ಮೂವರ ಬಂಧನ

ಹನಿಮೂನ್ಗೆ ಹೋದವ ಹೆಣವಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಕೊಲೆ ಹಿಂದೆ ಪತ್ನಿ ಕೈವಾಡ, ಮೂವರ ಬಂಧನ ಜೂನ್ 09: ಮೇಘಾಲಯಕ್ಕೆ ಹನಿಮೂನ್​ಗೆಂದು ತೆರಳಿ ದಂಪತಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಒಂದೆಡೆ ರಾಜಾ ರಘುವಂಶಿ ಕೊಲೆಯಾಗಿದೆ. ಮತ್ತೊಂದೆಡೆ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಸೋನಮ್ ರಘುವಂಶಿ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಕಳೆದ 17 ದಿನಗಳಿಂದ ಪೊಲೀಸರು ಮೇಘಾಲಯದಲ್ಲಿ ಸೋನಮ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಸೋನಮ್ ನಿನ್ನೆ ರಾತ್ರಿ ತನ್ನ ಕುಟುಂಬಕ್ಕೆ ಕರೆ ಮಾಡಿ ತಾನು ಯುಪಿಯ…

Read More

ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಪೀಡಿಸಿ ಜೀವ ಬೆದರಿಕೆ – ಯುವಕನ ಬಂಧನ

ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಪೀಡಿಸಿ ಜೀವ ಬೆದರಿಕೆ – ಯುವಕನ ಬಂಧನ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಪೀಡಿಸಿ ಜೀವ ಬೆದರಿಕೆ – ಯುವಕನ ಬಂಧನ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಪೀಡಿಸಿ ಜೀವ ಬೆದರಿಕೆ – ಯುವಕನ ಬಂಧನ ರಿಪ್ಪನ್ ಪೇಟೆ : ಅಪ್ರಾಪ್ತ ಯುವತಿಯನ್ನು ಮದುವೆಯಾಗುವಂತೆ ಒತ್ತಾಯಿಸಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಫೋಕ್ಸೋ ಕಾಯ್ದೆಯಡಿ ಯುವಕನೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಪೀಡಿಸಿ ,…

Read More