
ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಕುಸಿದು ಬಿದ್ದು ಸಾವು
ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಕಾರ್ಯಕ್ರಮ ‘ಕಾಮಿಡಿ ಕಿಲಾಡಿ’ ಸೀಸನ್-3ರ ವಿಜೇತ, ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ. ರಾಕೇಶ್ ಅವರ ಆಕಸ್ಮಿಕ ಸಾವು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಕಿರುತೆರೆಯ ಸಹ ಕಲಾವಿದರಿಗೂ ಆಘಾತವನ್ನುಂಟು ಮಾಡಿದೆ.. ರಾಕೇಶ್ ಪೂಜಾರಿ ಅವರು ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಅವರ ಹಾಸ್ಯ, ಸಹಜತೆ, ಮತ್ತು ಜನರನ್ನು ನಗಿಸುವ ವಿಶಿಷ್ಟ ಶೈಲಿಯಿಂದಾಗಿ ಎಲ್ಲರ ಮನಗೆದ್ದಿದ್ದರು. ಕಾರ್ಯಕ್ರಮದ ಸೀಸನ್-3ರಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ವಿಜೇತರಾಗಿ ಹೊರಹೊಮ್ಮಿದ್ದ ರಾಕೇಶ್, ಕಿರುತೆರೆಯ…