ಬಿಡಾಡಿ ಜಾನುವಾರುಗಳ ಕೊರಳಿಗೆ ರೇಡಿಯಂ ಬೆಲ್ಟ್ ಹಾಕಲು ಮುಂದಾದ ರಿಪ್ಪನ್‌ಪೇಟೆ ಪೊಲೀಸರು
ಬಿಡಾಡಿ ಜಾನುವಾರುಗಳಿಗೆ ರೇಡಿಯಂ ಬೆಲ್ಟ್ ಅಳವಡಿಸಿದ ರಿಪ್ಪನ್‌ಪೇಟೆ ಪೊಲೀಸರು ರಿಪ್ಪನ್‌ಪೇಟೆ : ರಾತ್ರಿ ವೇಳೆ ಅಪಘಾತದಲ್ಲಿ ಮೂಕ ಜಾನುವಾರುಗಳು ಗಾಯಗೊಳ್ಳುವುದು, ಕೆಲವೊಮ್ಮೆ ಸಾಯುವುದು, ವಾಹನ ಸವಾರರು ಸಹ ತೊಂದರೆಗೀಡಾಗುವುದು, ವಾಹನ ಜಖಂಗೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಬಿಡಾಡಿ ಜಾನುವಾರುಗಳ ಕೊರಳಿಗೆ ರೇಡಿಯಂ ಬೆಲ್ಟ್ ಕಟ್ಟುವ ಕೆಲಸವನ್ನು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದಲ್ಲಿ ಪ್ರಾರಂಭಿಸಲಾಗಿದೆ. ಈ ಮೂಲಕ ರಾತ್ರಿ ವೇಳೆ ವಾಹನ ಸವಾರರಿಗೆ ಕತ್ತಲೆಯಲ್ಲಿದ್ದರು ಜಾನುವಾರುಗಳು ಕಾಣುವಂತೆ ಮಾಡಲಾಗುತ್ತಿದ್ದು,ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಬಿಡಾಡಿ ದನಗಳು…