ರೈಲಿಗೆ ಸಿಲುಕಿ ಮಹಿಳೆ ಸಾವು

ರೈಲಿಗೆ ಸಿಲುಕಿ ಮಹಿಳೆ ಸಾವು ರೈಲಿಗೆ ಸಿಲುಕಿ ಮಹಿಳೆಯೊಬ್ಬರುಸಾವನ್ನಪ್ಪಿದ್ದಾರೆ. ಶಿವಮೊಗ್ಗ ನಗರದ ವಿನೋಬನಗರದಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಬಿ.ಪಿ.ಕಮಲಾ (35) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿ ಕಮಲಾ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಭಾರಿ ಮಳೆಗೆ ಸೂಡೂರು ಬಳಿಯಲ್ಲಿ ಕೊಚ್ಚಿಹೋದ ರೈಲ್ವೆ ಟ್ರ್ಯಾಕ್ ನ ಜಲ್ಲಿ – ರೈಲು ಸಂಚಾರ ವ್ಯತ್ಯಯ

ಭಾರಿ ಮಳೆಗೆ ಸೂಡೂರು ಬಳಿಯಲ್ಲಿ ಕೊಚ್ಚಿಹೋದ ರೈಲ್ವೆ ಟ್ರ್ಯಾಕ್ ನ ಜಲ್ಲಿ – ರೈಲು ಸಂಚಾರ ವ್ಯತ್ಯಯ ರಿಪ್ಪನ್‌ಪೇಟೆ : ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಸೂಡೂರು ಬಳಿಯಲ್ಲಿ ರೈಲ್ವೆ ಹಳಿಯಡಿಯಲ್ಲಿ ಹಾಕಿದ್ದ ಜಲ್ಲಿಕಲ್ಲುಗಳು ಪೂರ್ತಿಯಾಗಿ ಕೊಚ್ಚಿಕೊಂಡು ಹೋಗಿ ರೈಲ್ವೆ ಸಂಚಾರಕ್ಕೆ ವ್ಯತ್ಯಯವುಂಟಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲಾದ್ಯಂತ ಮಂಗಳವಾರ ಸುರಿದ ಭಾರಿ ಮಳೆಗೆ ರೈಲು ಹಳಿಗಳ ಅಡಿಯಿರುವ ಜಲ್ಲಿ ಸಂಪೂರ್ಣ ಕೊಚ್ಚಿ ಹೋಗಿ, ತಾಳಗುಪ್ಪ-ಬೆಂಗಳೂರು, ತಾಳಗುಪ್ಪ-ಮೈಸೂರು ಟ್ರೈನ್‌ ಸಂಚಾರಕ್ಕೆ ಅಡ್ಡಿಯಾಗಿರುವ ಘಟನೆ ನಡೆದಿದೆ. ಕಳೆದ…

Read More