Headlines

ಕೇರಳದಿಂದ ಬಂದ 23 ನರ್ಸಿಂಗ್​ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆ : ನಂಜಪ್ಪ ನರ್ಸಿಂಗ್ ಕಾಲೇಜ್ ಸೀಲ್ ಡೌನ್

ಶಿವಮೊಗ್ಗ: ನಂಜಪ್ಪ ನರ್ಸಿಂಗ್​ ಕಾಲೇಜಿನ 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ವಿದ್ಯಾರ್ಥಿಗಳೆಲ್ಲರೂ ಕೇರಳದಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೋವಿಡ್​ ಕೇರ್​ ಸೆಂಟರ್​ನಲ್ಲಿ ಇರಿಸಲಾಗಿದೆ. ನಂಜಪ್ಪ ಲೈಫ್ ಕೇರ್ ಹಾಗೂ ನಂಜಪ್ಪ ನರ್ಸಿಂಗ್ ಕಾಲೇಜನ್ನು ಸೀಲ್​ಡೌನ್ ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಶೂನ್ಯಕ್ಕೆ ಬಂದಿದ್ದ ಕೊರೊನಾ ಪ್ರಕರಣ ಇತ್ತೀಚಿನ ಪ್ರಕರಣಗಳಿಂದ ಏರಿಕೆಯಾಗುತ್ತಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ.

Read More

ಶಿವಮೊಗ್ಗದ ಕವಯತ್ರಿ ನಿತ್ಯಶ್ರೀ ಗೆ ಒಲಿದ ರಾಜ್ಯ ಮಟ್ಟದ ಉತ್ತಿಷ್ಟ ಸಾಧಕ ಪ್ರಶಸ್ತಿ :

ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆ ಅನೇಕ ಕವಿ ಸಾಹಿತಿಗಳನ್ನು ನೀಡಿ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದೆ. ಅದರಂತೆ ಶಿವಮೊಗ್ಗದ ಉದಯೋನ್ಮುಖ ಯುವ ಕವಯಿತ್ರಿ ಅಂಕಣಗಾರ್ತಿ, ಲೇಖಕಿ ಹಲವು ಜಿಲ್ಲೆಗಳ ಪತ್ರಿಕೆಯ ಬರಹಗಾರ್ತಿ ಕು. ನಿತ್ಯಶ್ರೀ ಆರ್ ಇವರಿಗೆ ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.   ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ಸುಜಾತಾ, ಗೌರಧ್ಯಕ್ಷರು ಶ್ರೀ…

Read More

ಸಾಗರದ ಹುಲಿದೇವರ‌ಬನದ ಎಂಪಿಎಂ ಅರಣ್ಯ ಪ್ರದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ : ಆಟವಾಡುತ್ತಿದ್ದ ಬಾಲಕಿ ಸಾವು

ಸಾಗರ : ಇಂದು ಸಂಜೆ ನಡೆದ ಅವಘಡದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳ ಮೇಲೆ ಮರದ ದಿಮ್ಮಿ ಹರಿದು ಸಾವನ್ನಪ್ಪಿರುವ ಘಟನೆ ಸಾಗರದ ಹುಲಿದೇವರ ಬನದಲ್ಲಿರುವ MPM ಅರಣ್ಯ ಪ್ರದೇಶದಲ್ಲಿ ನಡೆದಿದೆ. ಇಂದು ಸಂಜೆ ಸುಮಾರು 4-30ರ ಸಮಯದಲ್ಲಿ ಮರಗಳನ್ನ ಕಡಿದು ಒಂದರ ಮೇಲೊಂದು ಮರದ ದಿಮ್ಮಿಗಳನ್ನ ಸಿಪ್ಪೆ ಸುಲಿದು ಜೋಡಿಸಿ ಇಡಲಾಗಿತ್ತು. ಮರದ ದಿಮ್ಮಿಯ ಕೆಳಗೆ 6 ವರ್ಷದ ಶ್ರಾವಣಿ ಎಂಬ ಹೆಣ್ಣು ಮಗು ಆಡುತ್ತಿದ್ದ ವೇಳೆ ಜೋಡಿಸಿದ ಮರದ ದಿಮ್ಮಿ ಚದುರಿಹೋಗಿದ್ದು ಮಗುವಿನ ಮೇಲೆ…

Read More

ಶಿವಮೊಗ್ಗದ ಅಕ್ರಮ ಕಸಾಯಿಖಾನೆಗಳ ಮೇಲೆ ಪೊಲೀಸರ ಕಾರ್ಯಚರಣೆ :15 ಕೆಜಿ ಗೋಮಾಂಸ ವಶ :

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ನಡೆದ ಅಕ್ರಮ ಗೋಸಾಗಾಣಿಕೆ ಹಾಗೂ ಗೋರಕ್ಷಕರ ಪ್ರತಿಭಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಭರ್ಜರಿ ಸಂಚಲನ ಮೂಡಿಸಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ  ಅಕ್ರಮ ಕಸಾಯಿ ಖಾನೆಗಳನ್ನು  ಬಂದ್ ಮಾಡಿಸಲಾಗಿದೆ. ಶಿವಮೊಗ್ಗದ ಎಲ್ಲಾ ಕಸಾಯಿ ಖಾನೆಗಳು ಅಕ್ರಮವಾಗಿದ್ದರೂ ಅವುಗಳು ಇದುವರೆಗೂ ರಾಜಕೀಯ ಪ್ರೇರಣೆಯಿಂದ ಎಗ್ಗಿಲ್ಲದೆ ನಡೆಯುತ್ತಿದ್ದವು. ದೊಡ್ಡಪೇಟೆ ಪೊಲೀಸರು ಅಕ್ರಮ ಕಸಾಯಿ ಖಾನೆಗಳ ಮೇಲೆ ದಾಳಿ ನಡೆಸುತ್ತಿದ್ದಂತೆ ನಗರದ ಇತರೆ ಅಕ್ರಮ ಕಸಾಯಿ ಖಾನೆಗಳು ಬಂದ್ ಆಗಿವೆ.  ಇಲಿಯಾಸ್ ನಗರ 100 ಅಡಿ ರಸ್ತೆಯಲ್ಲಿರುವ ಎಸ್,ಎಫ್, ಕಾರ್…

Read More

ಗೃಹಸಚಿವರ ತವರೂರಲ್ಲಿ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆ: ಗೋಕಳ್ಳರ ಹೆಡೆಮುರಿ ಕಟ್ಟುವಂತೆ ಆಗ್ರಹ

ತೀರ್ಥಹಳ್ಳಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರವಾದ ತೀರ್ಥಹಳ್ಳಿಯಲ್ಲಿ ಇಂದು ಹಿಂದೂ ಪರ ಸಂಘಟನೆಗಳು ಗೋ ಕಳ್ಳರ ಬೆನ್ನಟ್ಟಿ ಹಲ್ಲೆಗೊಳಗಾದ ಕಾರ್ಯಕರ್ತರು ಆಸ್ಪತ್ರೆಗೆ ಸೇರಿದ್ದು ಈ ರೀತಿ ಮುಂದೆ ಆಗಬಾರದು ಎಂಬ ಕಾರಣಕ್ಕೆ ರಸ್ತೆ ತಡೆ ನಡೆಸಿ ಹೋರಾಟ ನಡೆಸಿದ್ದು ಇದು ಇಡೀ ಮಲೆನಾಡಲ್ಲಿ ಸಂಚಲನ ಮೂಡಿಸಿದೆ ಘಟನೆಯನ್ನು ಖಂಡಿಸಿ ಹಾಗೂ ಕೆಲವು ಪೊಲೀಸರ ವಿರುದ್ಧವೇ  ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿ ಬೃಹತ್ ಹೋರಾಟ ಮಾಡಲಾಯಿತು. ಭಜರಂಗ ದಳ, ವಿಶ್ವ ಹಿಂದೂ ಪರಿಷತ್…

Read More

ಡಿಸೆಂಬರ್ 4 ರ ಶನಿವಾರ ಆನಂದಪುರ ಸಮೀಪದ ಮುರುಘಾಮಠದಲ್ಲಿ ಅಧ್ಧೂರಿಯಾಗಿ ನೆರವೇರಲಿದೆ ಶರಣ ಸಾಹಿತ್ಯ ಭಾವೈಕ್ಯ ಸಮ್ಮೇಳನ ಹಾಗೂ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ

ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದಲ್ಲಿ ಇತಿಹಾಸದಲ್ಲೇ ಗೌರವಕ್ಕೆ ಪಾತ್ರವಾದಂತಹ ಸ್ಥಳ ಆನಂದಪುರ ಸಮೀಪದ ಮುರುಘಾಮಠ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ವಾಗಿ ಮುಂದುವರೆದ ಮಠಗಳಲ್ಲಿ ಒಂದಾಗಿದ್ದು ಕೆಳದಿ  ಅರಸರ ಗೌರವ, ಪ್ರೀತಿ, ಪ್ರತಿಷ್ಠೆಗೆ ಪಾತ್ರವಾದಂತಹ ಮಠ ಇದಾಗಿದ್ದು ದಾನ ಧತ್ತಿಗಳನ್ನು ಪಡೆದುಕೊಂಡು ಬಂದಿದೆ.ಕಲೆ ಸಾಹಿತ್ಯ ಸಂಸ್ಕೃತಿಗೆ ತನ್ನದೇ ಆದಂತಹ ಪ್ರಾಮುಖ್ಯತೆ ನೀಡಿದ ಮಠ ಇದಾಗಿದೆ. ಇದೇ ಡಿಸೆಂಬರ್ 4 ರ ಶನಿವಾರದಂದು ಪ್ರತಿವರ್ಷದಂತೆ ಈ ವರ್ಷವೂ ಕೂಡ ಮುರುಘಾ ಮಠದಲ್ಲಿ ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನ ಕಾರ್ತಿಕ…

Read More

ಅನುದಾನ ಕೊರತೆ: ಗೃಹ ಸಚಿವರ ತವರು ಕ್ಷೇತ್ರದಲ್ಲಿಯೇ ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರ

ತೀರ್ಥಹಳ್ಳಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದ ಗ್ರಾಮ ಪಂಚಾಯತಿ ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ನಾಲೂರು ಕೊಳಿಗೆ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಏಳು ಜನರು ಈ ಬಾರಿ ಮತದಾನ ಮಾಡದೆ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನಾಲೂರು ಕೊಳಿಗೆ ಗ್ರಾಮ ಪಂಚಾಯತಿಗೆ ಈವರೆಗೆ 1.68 ಕೋಟಿ ರೂಪಾಯಿ ಸರ್ಕಾರದ ಅನುದಾನ ಬಂದಿಲ್ಲ. ನಾಲೂರು ಕೊಳಿಗೆ ವ್ಯಾಪ್ತಿಯ ಮೂರು ಮರಳು ಕ್ವಾರಿಗಳು ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ…

Read More

ತೀರ್ಥಹಳ್ಳಿ ದನಗಳ್ಳರ ಹಿಟ್ & ರನ್ ನಿಂದ ಇಬ್ಬರು ಯುವಕರಿಗೆ ಗಂಭೀರ ಗಾಯ!! ಆಸ್ಪತ್ರೆಗೆ ಆಗಮಿಸಿದ ಗೃಹಸಚಿವ ಆರಗ ಜ್ಞಾನೇಂದ್ರ:

ತೀರ್ಥಹಳ್ಳಿ: ಮಲೆನಾಡ ಭಾಗದಲ್ಲಿ ದನಗಳ್ಳರ ಹಾವಳಿ ಮಿತಿ ಮೀರಿದ್ದು ಅದರಲ್ಲೂ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜೆಲ್ಲೆಯಲ್ಲಿ ದನ ಕಳ್ಳರ ಕೇಸ್ ದಾಖಲಾಗುತ್ತಲೇ ಇರುತ್ತಿದೆ.  ತೀರ್ಥಹಳ್ಳಿಯ ಮೇಳಿಗೆಯಿಂದ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ಕಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪಿಕ್ ಅಪ್ ವಾಹನವನ್ನು ಹತ್ತಿಸಿದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ತಾಲೂಕಿನ ಮೇಳಿಗೆಯಿಂದ  ಅಪ್ ವಾಹನವನ್ನು ಫಾಲೋ ಮಾಡಿದ ಯುವಕರ ಮೇಲೆ ಬೆಜ್ಜವಳ್ಳಿಯಲ್ಲಿ ಪಿಕ್…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಿಸಿ ಅಭಿಮಾನ ಸಲ್ಲಿಸಿದ ಆನಂದಪುರ ಸಮೀಪದ ಹೊಸಕೊಪ್ಪ ಗ್ರಾಮಸ್ಥರು

ಕನ್ನಡದ ಕುವರ ಕರ್ನಾಟಕದ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಸಾವು ಇದೀಗ ಕರುನಾಡನ್ನು ಕಣ್ಣೀರಲ್ಲಿ ಕೈ ತೊಳಿಸಿತ್ತು.ಅಪಾರ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ದಾನ ಧರ್ಮದ ಕಾರ್ಯಗಳು ಎಂದಿಗೂ ಕೂಡ ಅಜರಾಮರ. ಅತಿ ಕಿರಿಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕನ್ನಡದ ಕುವರನಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಹೊಸಕೊಪ್ಪ ಗ್ರಾಮದಲ್ಲಿ ಅಭಿಮಾನಿಗಳು ವಿಶಿಷ್ಟ ರೀತಿಯ ಗೌರವವನ್ನು ಸಮರ್ಪಿಸಿದ್ದಾರೆ..ಸುಮಾರು 6ಅಡಿ ಎತ್ತರದಷ್ಟು ಪುನೀತ್ ರಾಜ್…

Read More

ಕಾಲೇಜು ವೇಳಾಪಟ್ಟಿ ಬದಲಾವಣೆಗೆ ವಿರೋದಿಸಿ ಸಾಗರ ಪದವಿ ವಿದ್ಯಾರ್ಥಿಗಳಿಂದ ದಿಡೀರ್ ಪ್ರತಿಭಟನೆ : ಕೂಡಲೇ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿ ಒಕ್ಕೂಟದ ಸಿ ಎಂ ಚಿನ್ಮಯ್ ಆಗ್ರಹ

ಸಾಗರ : ನಗರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜು ವೇಳಾಪಟ್ಟಿ ಬದಲಾವಣೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜೊತೆ ಚರ್ಚಿಸದೆ ಏಕಾಏಕಿ ತಿರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಾಲೇಜಿನ ಎದುರು ಭಾಗದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸ್ಥಳಕ್ಕೆ ಶಾಸಕ ಹಾಲಪ್ಪ ಭೇಟಿ ನೀಡುವಂತೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜು ವೇಳಾಪಟ್ಟಿ ಬದಲಾವಣೆ ಯನ್ನು ವಿದ್ಯಾರ್ಥಿಗಳ ಜೊತೆಗೆ ಸಮಾಲೋಚನೆ…

Read More