ಶಿವಮೊಗ್ಗ ಜಿಲ್ಲೆಯ ಬಿಜೆಪಿಯಲ್ಲಿ ಈ ಬಾರಿ ಮೂವರು ಅಪ್ಪಂದಿರರಿಗೆ ಟಿಕೇಟ್ ಸಿಗುವುದಿಲ್ಲ : ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಮೂವರು ಅಪ್ಪಂದಿರರಿಗೆ ಟಿಕೇಟ್ ಸಿಗೊಲ್ಲವೆಂಬ ಮಾಹಿತಿ ಇದೆ. ಇದರಲ್ಲಿ ಎರಡು ಅಪ್ಪಂದಿರರಾದ ಈಶ್ವರಪ್ಪ ಮತ್ತು ಯಡಿಯೂರಪ್ಪನವರಿಗೆ ಟಿಕೇಟ್ ನೀಡೊಲ್ಲವೆಂಬ ಮಾಹಿತಿ ಮೊದಲೇ ಇತ್ತು. ಆದರೆ ಮೂರನೇ ಅಪ್ಪ ಬಹುಶಃ ಹಾಲಪ್ಪ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ. ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪನವರ ನಿರ್ಗಮನಕ್ಕೆ ಈಶ್ವರಪ್ಪ, ಸಂತೋಷ್ ಮತ್ತು ಸಿಟಿ ರವಿ ಕಾರಣವೆಂದು ತಿರುಗೇಟು ನೀಡಿದರು.ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರನ್ನ ದೋಷ ಮುಕ್ತಗೊಳಿಸಿರುವುದು ನಗೆಪಾಟಿಗೆ ಒಳಗಾಗಿದೆ ಎಂದು ಬೇಳೂರು ಗೋಪಾಲಕೃಷ್ಣ ಗುಡುಗಿದ್ದಾರೆ. ಸಂತೋಷ್…