Headlines

ಸೆಲ್ಪಿ ತೆಗೆಯಲು ಹೋಗಿ ನೀರುಪಾಲಾದ ಯುವಕ – ಅಗ್ನಿಶಾಮಕ ದಳದಿಂದ ತೀವ್ರ ಶೋಧ ಕಾರ್ಯಾಚರಣೆ|tunga

ಸೆಲ್ಪಿ ತೆಗೆಯಲು ಹೋಗಿ ನೀರುಪಾಲಾದ ಯುವಕ – ಅಗ್ನಿಶಾಮಕ ದಳದಿಂದ ತೀವ್ರ ಶೋಧ ಕಾರ್ಯಾಚರಣೆ ಕೊಲ್ಲೂರು ಅರಶಿನ ಗುಂಡಿ ಫಾಲ್ಸ್​ನ ಘಟನೆ ಕಣ್ಮುಂದೆ ಇರುವಾಗಲೇ ಶಿವಮೊಗ್ಗ ಇನ್ನೊಬ್ಬ ಯುವಕ ನೀರಿಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ತುಂಗಾ ಡ್ಯಾಂನ ಎದುರು , ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾನೆ. ಈ ಬಗ್ಗೆ ತಡವಾಗಿ ವರದಿಯಾಗಿದ್ದು, ನಿನ್ನೆಯಿಡಿ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಇವತ್ತು ಕೂಡ ಹುಡುಕಾಟ ಮುಂದುವರಿಸುವ ಸಾಧ್ಯತೆ ಇದೆ. ಗಾಜನೂರು ಜಲಾಶಯದ ಮೇಲೆ…

Read More

ರಿಪ್ಪನ್‌ಪೇಟೆಯ ಗವಟೂರಿನಲ್ಲಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಮೆಗ್ಗಾನ್ ಗೆ ದಾಖಲು|ಸಮಯ ಪ್ರಜ್ಞೆ ಮೆರೆದ ರಿಪ್ಪನ್‌ಪೇಟೆ ಪಿಎಸ್‌ಐ|accident

ರಿಪ್ಪನ್‌ಪೇಟೆಯ ಗವಟೂರಿನಲ್ಲಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಮೆಗ್ಗಾನ್ ಗೆ ದಾಖಲು|ಸಮಯ ಪ್ರಜ್ಞೆ ಮೆರೆದ ರಿಪ್ಪನ್‌ಪೇಟೆ ಪಿಎಸ್‌ಐ ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ನಡೆದಿದೆ. ಪಟ್ಟಣದ ಹೊಸನಗರ ರಸ್ತೆಯ ಶರ್ಮಣ್ಯಾವತಿ ನದಿಯ ಸೇತುವೆ ಬಳಿಯಲ್ಲಿ ರಿಪ್ಪನ್‌ಪೇಟೆ ಕಡೆಯಿಂದ ಹೊಸನಗರದ ಕಡೆಗೆ ತೆರಳುತಿದ್ದ  ಬೈಕ್ ಹಾಗೂ ಹೊಸನಗರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ….

Read More

ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷರಾಗಿ ಧನಲಕ್ಷ್ಮಿ ಉಪಾಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಆಯ್ಕೆ|Ripponpet

ರಿಪ್ಪನ್‌ಪೇಟೆ ಗ್ರಾ.ಪಂ.ಅಧ್ಯಕ್ಷರಾಗಿ ಧನಲಕ್ಷ್ಮಿ  ಉಪಾಧ್ಯಕ್ಷರಾಗಿ ಸುಧೀಂದ್ರ ಪೂಜಾರಿ ಆಯ್ಕೆ ರಿಪ್ಪನ್‌ಪೇಟೆ : ಪಟ್ಟಣದ ಗ್ರಾಮ ಪಂಚಾಯ್ತಿನ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷೆ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಧನಲಕ್ಷ್ಮಿ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಸುಧೀಂದ್ರ ಪೂಜಾರಿ ಆಯ್ಕೆ ಯಾಗಿದ್ದಾರೆ. 21 ಸದಸ್ಯರನ್ನು ಹೊಂದಿರುವ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಧನಲಕ್ಷ್ಮಿ,ಬಿಜೆಪಿ ಬೆಂಬಲಿತ ಸದಸ್ಯೆ ದೀಪಾ ಸುಧೀರ್  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ…

Read More

ಹೆದ್ದಾರಿಪುರ ಗ್ರಾ.ಪಂ.ಅಧ್ಯಕ್ಷರಾಗಿ ವಿನಂತಿ ರಾಘವೇಂದ್ರ ಉಪಾಧ್ಯಕ್ಷರಾಗಿ ವನಿತಾ ಗಂಗಾಧರ್ ಆಯ್ಕೆ|heddaripura

ಹೆದ್ದಾರಿಪುರ ಗ್ರಾ.ಪಂ.ಅಧ್ಯಕ್ಷರಾಗಿ ವಿನಂತಿ ರಾಘವೇಂದ್ರ ಉಪಾಧ್ಯಕ್ಷರಾಗಿ ವನಿತಾ ಗಂಗಾಧರ್ ಆಯ್ಕೆ ರಿಪ್ಪನ್‌ಪೇಟೆ;-ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯ್ತಿನ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷೆ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ವಿನಂತಿ ರಾಘವೇಂದ್ರ ಉಪಾಧ್ಯಕ್ಷರಾಗಿ ವನಿತಾ ಗಂಗಾಧರ್ ಆಯ್ಕೆಯಾಗಿದ್ದಾರೆ. 15 ಸದಸ್ಯರನ್ನು ಹೊಂದಿರುವ ಹೆದ್ದಾರಿಪುರ ಗ್ರಾಮ ಪಂಚಾಯ್ತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ವಿನಂತಿ ರಾಘವೇಂದ್ರ 08 ಮತಗಳನ್ನು ಪಡೆದರೆ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಿಸಿದ್ದ ವನಿತಾ ಗಂಗಾಧರ್ ಕ್ರಮವಾಗಿ 09 ಮತಗಳನ್ನು…

Read More

ಸರ್ಕಾರದ ಮುಂಗಡ ಪತ್ರದ ಕಾರ್ಯಕ್ರಮಗಳು ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ತಲುಪಬೇಕು -ಡಾ|| ಧನಂಜಯ ಕೆ ಬಿ|gfgc

ಸರ್ಕಾರದ ಮುಂಗಡ ಪತ್ರದ ಕಾರ್ಯಕ್ರಮಗಳು ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ತಲುಪಬೇಕು  -ಡಾ|| ಧನಂಜಯ ಕೆ .ಬಿ. ರಿಪ್ಪನ್‌ಪೇಟೆ : ಸರ್ಕಾರದ ಮುಂಗಡ ಪತ್ರದ ಕಾರ್ಯಕ್ರಮಗಳು ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಎನ್. ಆರ್. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ  ಡಾ|| ಧನಂಜಯ ಕೆ .ಬಿ ಅಭಿಪ್ರಾಯಪಟ್ಟರು.  ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ರಿಪ್ಪನ್ ಪೇಟೆಯ ಅರ್ಥಶಾಸ್ತ್ರ ವೇದಿಕೆ ಹಾಗೂ ಐಕ್ಯೂಎಸಿ ಘಟಕದ  ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ “ಕರ್ನಾಟಕ  ರಾಜ್ಯ ಮುಂಗಡ…

Read More

ಸಾಲ ಕೇಳಲು ಬಂದಿದ್ದ ವ್ಯಕ್ತಿಯಿಂದ ಬ್ಯಾಂಕ್‌ ಮ್ಯಾನೇಜರ್‌ಗೆ ಜೀವ ಬೆದರಿಕೆ: ಆರೋಪ|FIR

ಸಾಲ ಕೇಳಲು ಬಂದಿದ್ದ ವ್ಯಕ್ತಿಯಿಂದ ಬ್ಯಾಂಕ್‌ ಮ್ಯಾನೇಜರ್‌ಗೆ ಜೀವ ಬೆದರಿಕೆ: ಆರೋಪ ಶಿವಮೊಗ್ಗ ತಾಲೂಕಿನ ಹೊಸಳ್ಳಿ ಶಾಖೆಯ ಯುನಿಯನ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಒಬ್ಬರಿಗೆ ವ್ಯಕ್ತಿಯೋರ್ವ ಚಾಕು ತೋರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ. ಅಲ್ಲದೇ ಸಾಲ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಆ.7ರಂದು ಮಧ್ಯಾಹ್ನವ್ಯಕ್ತಿಯೊಬ್ಬಬ್ಯಾಂಕಿಗೆ ಬಂದಿದ್ದು, ಹಸು ಸಾಲಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ಬ್ಯಾಂಕ್ ಮ್ಯಾನೇಜರ್ ನಿರಂಜನ್‌ಗೆ ಚಾಕು ತೋರಿಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದುಬಂದಿದೆ.  ಚಾಕು ತೋರಿಸಿದ ವ್ಯಕ್ತಿಯನ್ನು ಅದೇ ಮೊದಲು…

Read More

ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದ ಪತಿ ಮತ್ತು ಆತನ ಸ್ನೇಹಿತರಿಗೆ ಜೀವಾವಧಿ ಶಿಕ್ಷೆ|Life imprisonment

ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದ  ಪತಿ ಮತ್ತು ಆತನ ಸ್ನೇಹಿತರಿಗೆ ಜೀವಾವಧಿ ಶಿಕ್ಷೆ ಶಿವಮೊಗ್ಗ : ಪತ್ನಿ ಹಾಗೂ ಆಕೆಯ ಪ್ರೇಮಿಯನ್ನು ಕೊಲೆ ಮಾಡಿದ ಗಂಡ ಮತ್ತು ಆತನ ಗೆಳೆಯರಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಮತ್ತು ತಲಾ 1 ಲಕ್ಷ ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಶಿವಮೊಗ್ಗ ನಗರದ ವೆಂಕಟೇಶ್ವರ ನಗರದ 5ನೇ ಕ್ರಾಸ್ ನಿವಾಸಿ ಕಾರ್ತಿಕ್ ಕೆ.(28) ಇವರು ಶ್ರೀರಾಮನಗರದ ವಾಸಿ ರೇವತಿ(21)…

Read More

ಹೊಲದಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಹೆಬ್ಬಾವು – ಅರಣ್ಯ ಇಲಾಖೆಯಿಂದ ರಕ್ಷಣೆ|python

ಹೊಲದಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಹೆಬ್ಬಾವು – ರಕ್ಷಣೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಚ್ಚಿಗೆಬೈಲು ಗ್ರಾಮದ ಹೊಲದಲ್ಲಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಹಾವನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.  ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿಯ ಕಚ್ಚಿಗೆ ಬೈಲ್  ಗ್ರಾಮದ ಗಣೇಶ್ ಭಟ್ ಹುಲಿಮನೆ ಎಂಬುವರ ಜಮೀನಿನಲ್ಲಿ ಕಾಣಿಸಿಕೊಂಡ ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ. ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯ…

Read More

ಬಾಳೂರು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ – ಅಧ್ಯಕ್ಷರಾಗಿ ಶ್ರೀನಿವಾಸ್ ಆಚಾರ್ ಉಪಾಧ್ಯಕ್ಷರಾಗಿ ವೇದಾವತಿ ಬಾಲಚಂದ್ರ ಆಯ್ಕೆ|baluru

ಬಾಳೂರು ಗ್ರಾ.ಪಂ.ಅಧ್ಯಕ್ಷರಾಗಿ ಶ್ರೀನಿವಾಸ್ ಆಚಾರ್ ಉಪಾಧ್ಯಕ್ಷರಾಗಿ ವೇದಾವತಿ ಬಾಲಚಂದ್ರ ಆಯ್ಕೆ ರಿಪ್ಪನ್‌ಪೇಟೆ;-ಸಮೀಪದ ಬಾಳೂರು ಗ್ರಾಮ ಪಂಚಾಯತಿ ಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷೆ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶ್ರೀನಿವಾಸ್ ಆಚಾರ್ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವೇದಾವತಿ ಬಾಲಚಂದ್ರ ಆಯ್ಕೆಯಾಗಿದ್ದಾರೆ.ಈ ಮೂಲಕ ಮತ್ತೊಂದು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. 9 ಸದಸ್ಯರನ್ನು ಹೊಂದಿರುವ  ಗ್ರಾಮ ಪಂಚಾಯ್ತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಶ್ರೀನಿವಾಸ್ ಆಚಾರ್ ಹಾಗೂ ಉಪಾಧ್ಯಕ್ಷೆ…

Read More

ಕೆಂಚನಾಲ ಗ್ರಾ.ಪಂ.ಅಧ್ಯಕ್ಷರಾಗಿ ಉಬೇದುಲ್ಲಾ ಷರೀಫ್ ಉಪಾಧ್ಯಕ್ಷರಾಗಿ ರಮ್ಯ ಶಶಿಕುಮಾರ್ ಆಯ್ಕೆ|kenchanal

ಕೆಂಚನಾಲ ಗ್ರಾ.ಪಂ.ಅಧ್ಯಕ್ಷರಾಗಿ ಉಬೇದುಲ್ಲಾ ಷರೀಫ್ ಉಪಾಧ್ಯಕ್ಷರಾಗಿ ರಮ್ಯ ಶಶಿಕುಮಾರ್ ಆಯ್ಕೆ ರಿಪ್ಪನ್‌ಪೇಟೆ;-ಸಮೀಪದ ಕೆಂಚನಾಲ ಗ್ರಾಮ ಪಂಚಾಯ್ತಿನ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷೆ ಚುನಾವಣೆಯಲ್ಲಿ ಆಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಉಬೇದುಲ್ಲಾ ಷರೀಫ್ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರಮ್ಯ ಶಶಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 9 ಸದಸ್ಯರನ್ನು ಹೊಂದಿರುವ ಕೆಂಚನಾಲ ಗ್ರಾಮ ಪಂಚಾಯ್ತಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಉಬೇದುಲ್ಲಾ ಷರೀಫ್ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ರಮ್ಯ ಶಶಿಕುಮಾರ್ ನಾಮಪತ್ರ ಸಲ್ಲಿಸಿದ್ದರು.ನಿಗದಿತ…

Read More